ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫48 ಅಧ್ಯಾ. ೨೨.] ಏಕಾದಶಕ್ಕಂಧನು, ಹೆಚ್ಚು ಮಾತಿನಿಂದೇನು ? ಮುಖ್ಯವಾಗಿ ಮುಕ್ತಿಸಾಧಕಗಳಾದ ಗುಣಗಳಿ ಗೂ, ಮುಕ್ತಿವಿರೋಧಿಗಳಾದ ದೋಷಗಳಿಗೂ ನಿತ್ಯಲಕ್ಷಣವನ್ನು ಒಂದೇವಾಕ್ಯದಿಂದ ತಿಳಿಸುವೆನುಕೇಳು. ಸಂಸಾರಿಗಳಿಗೆ ಪ್ರಾಪಂಚಿಕವಾದ ಸುಖದುಃಖಗಳಲ್ಲಿ ಗುಣದೋಷಗಳನ್ನೆಣಿಸುವುದೇ ದೋಷವು, ಸುಖದುಃಖ ಗಳೆರಡೂ ಹೇಯವೆಂಬ ಬುದ್ದಿಯಿಂದ ಅವೆರಡನ್ನೂ ತ್ಯಜಿಸುವುದೇ ಗುಣ ವು” ಎಂದನು. ಇದು ಹತ್ತೊಂಬತ್ತನೆಯ ಅಧ್ಯಾವ. ( ಕೃಷ್ಣನು, ಭಜ್ಞಾನಕರ ಗಳಲ್ಲಿ ಭಕ್ತಿಯಮೇಲೆ | + 1 ° * ಯನ್ನು ತಿಳಿಸಿದುದು. ) ಉದ್ದವನು ತಿರುಗಿ ಪ್ರಶ್ನೆ ಮಾಡುವನು. ಕೃಷ್ಣ ! ಗುಣದೋಷ ಭಾವನೆಯಿಲ್ಲದಿರುವುದೇ ಗುಣವೆಂದು ಹೇಳಿದೆಯಲ್ಲವೆ ? ” ಈ ವಿಚಾರವಾಗಿ ನನಗೆ ಇನ್ನೊಂದು ದೊಡ್ಡ ಸಂದೇಹವು ಹುಟ್ಟಿರುವುದು ಏನೆಂದರೆ, ವೇದ ಎಂಬುದು ಸತ್ಯೇಶ್ವರನಾದ ನಿನ್ನ ಶಾಸನವಾಗಿರುವುದು. ಆ ವೇದವಾಕ್ಯಗ ಳೆಲ್ಲವೂ ಪ್ರಾಯಕವಾಗಿ ವಿಧಿಸಿಷೇಧಗಳನ್ನೇ ಹೇಳುವುವು. ಆ ವಿಧಿನಿಷೇಧಗ ಳಿಂದಲೇ ಕೆಲವುಕರಗಳಿಗೆ ಗುಣವೂ, ಕೆಲವುಕರಗಳಿಗೆ ದೋಷವೂ ಏರ್ಪ್ಪಡುವುವು. ಮತ್ತು ಆ ವೇದಗಳ ವರ್ಣಾಶ್ರಮಭೇದಗಳನ್ನೂ ,ಅವುಗ ಇಂದೇರ್ಪಟ್ಟ ಪ್ರತಿಲೋಮ ವಿಲೋಮಜಾತಿಗಳನ್ನೂ, ದ್ರವ್ಯ, ದೇಶ, ಕಾಲ, ವಯಸ್ಸು ಮುಂತಾದುವುಗಳ ನ್ಯೂನಾತಿರೇಕಗಳನ್ನೂ , ಸ್ವರ್ಗನರ ಕಾದಿಫಲಭೇದಗಳನ್ನೂ ನಿರೂಪಿಸುವುವು. ಇದು ಗುಣವೆಂದೂ, ಇದು ದೋಷವೆಂದೂ ಗ್ರಹಿಸುವುದಕ್ಕೆ ಉಪಯೋಗಪಡದಿದ್ದ ಮೇಲೆ,ನಿನ್ನ ಆಜ್ಞಾ ರೂಪಗಳಾ ವೇದಗಳಿಂದ ಬೇರೆ ಯಾವ ಪ್ರಯೋಜನವುಂಟು? ವಿಧಿನಿಷೇಧ ರೂಪಗಳಾದ ಆ ವೇದಗಳು ಮನುಷ್ಯರಿಗೆ ಯಾವ ವಿಧದಿಂದ ಶ್ರೀ ಯಸ್ಕರಗಳೆನಿಸುವುವು. ಸ್ವರ್ಗಾದಿಫಲಗಳನ್ನೂ ,ಅವುಗಳಿಗೆ ಸಾಧನಗಳನ್ನೂ ತಿಳಿಯದಿದ್ದಾಗ, ಪಿತೃಗಳಿಗೂ, ದೇವತಗಳಿಗೂ, ಮನುಷ್ಯರಿಗೂ ನಿನ್ನ ಆಜ್ಞಾರೂಪವಾದ ಅ ವೇದವೇ ಆ ಪರೋಕ್ಷವಿಷಯಗಳನ್ನೂ ತೋರಿಸ ತಕ್ಕ ಉತ್ತಮನೇತ್ರದಂತಿರುವುದು. ಆದುದರಿಂದ ಆ ವೇದಗಳಲ್ಲಿ ನಿರೂ