ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೭೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೬ ಶ್ರೀಮದ್ಭಾಗವತವು [ಅಧ್ಯಾ: ೨೦. ಪಿಸಲ್ಪಟ್ಟ ವಿಧಿನಿಷೇಧಗಳನ್ನನುಸರಿಸಿ ಗುಣದೋಷಗಳನ್ನು ಕಂಡು ಕೊಳ್ಳುವುದು ಅತ್ಯವಶ್ಯವಾಗಿರುವಾಗ, ಗುಣದೋಷಗ್ರಹಣವೇ ದೋಷ ವೆಂದು ನೀನು ಹೇಳುವೆಯಲ್ಲವೆ ? ಮನುಷ್ಯನಿಗೆ ಆ ವೇದಪ್ರಮಾಣಗಳಿಂ ದಲ್ಲದೆ ಗುಣದೋಷಜ್ಞಾನವು ಸ್ವತಃ ಜನಿಸಲಾರದು. ಹೀಗೆ ನೀನೇ ಹಿಂದೆ ವೇದಗಳ ಮೂಲಕವಾಗಿ ಗುಣದೋಷಗಳನ್ನು ತೋರಿಸಿ, ಈಗ ನನಗೆ ಪ್ರ ತಕವಾಗಿ ಆ ಗುಣದೋಷಪರಿಜ್ಞಾನವನ್ನು ದೋಷವೆಂದು ಹೇಳುವೆ ಯಲ್ಲವೆ? ಹೀಗೆ ಪೂರೋತ್ತರವಿರುದ್ಧವಾದ ನಿನ್ನ ಮಾತನ್ನು ಕೇಳಿ ನನಗೆ ಭ್ರಮವುಂಟಾಗಿರುವುದು. ಆ ಭಯವನ್ನು ನೀಗಿಸಬೇಕು” ಎಂದನು. ಆದಕ್ಕಾಕೃಷ್ಣನು « ಉದ್ಧನಾ ! ಕೇಳು ! ವೇದಬೋಧಿತಗಳಾದ ವಿಧಿನಿಷೇಧಗಳನ್ನು ಬಿಡಬೇಕೆಂಬುದು ಸಾಮಾನ್ಯವಾಗಿ ಎಲ್ಲರಿಗೂ ಹೇಳಿದ ವಿಷಯವಲ್ಲ ! ಆಯಾ ಅಧಿಕಾರಿಭೆ-ದದಿಂದ ಪುರುಷಾರ ಸಾಧನಗಳೂ ವೇದ ದಲ್ಲಿ ಬೇರೆಬೇರೆ ವಿಧವಾಗಿ ವ್ಯವಸ್ಥೆ ಮಾಡಲ್ಪಟ್ಟಿರುವುವು. ನರಕಕ್ಕೆ ಹೋ ಲಿಸುವಾಗ ಸ್ವರ್ಗವು ಉತ್ತಮವೆಂದು ತೋರುವುದು. ಮೋಕ್ಷದಲ್ಲಿ ದೃಷ್ಟಿ ಯುಳ್ಳವರಿಗೆ ಆ ಸ್ವರ್ಗವೇ ಅತ್ಯಂತಹೇಯವಾಗಿ ತೋರುವುದು. ಆದುದ ರಿಂದ, ಮೇಲೆ ಹೇಳಿದ ಗುಣದೋಷವಿಭಾಗಗಳು ಆಯಾ ಅಧಿಕಾರಿಗಳ ಸ್ವ ಭಾವಾನುಸಾರವಾಗಿ ನಿರ್ಣಯಿಸಲ್ಪಟ್ಟಿವೆ. ಮುಖ್ಯವಾಗಿ ಮನುಷ್ಯರ ಶ್ರೇ ಯಸ್ಸಿಗೆ, ಜ್ಞಾನ, ಕಠ, ಭಕ್ತಿಗಳೆಂಬ ಮೂರು ಬಗೆಯ ಯೋಗಸಾಧನೆಗೆ ಳು ನನ್ನಿಂದ ನಿರ್ಣಯಿಸಲ್ಪಟ್ಟಿರುವುವು ಪುರುಷನು ಯಾವ ಪುರುಷಾರ ವನ್ನು ಪಡೆಯಬೇಕಾದರೂ ಈ ಮರಕ್ಕಿಂತಲೂ ಬೇರೆ ಉಪಾಯವಿಲ್ಲ ! ಕರ ಫಲಗಳೆಲ್ಲವೂ ದುಃಖದಲ್ಲಿಯೇ ಮುಗಿಯುವುವೆಂಬುದನ್ನು ತಿಳಿದು, ಆ ಕುಗಳಲ್ಲಿ ಬಿಹಾಸೆ ಹುಟ್ಟಿದವರು, ಜ್ಞಾನಯೋಗವನ್ನವಲಂಬಿಸಬಹುದು. ಸ್ವರ್ಗಾದಿಫಲಗಳಲ್ಲಿ ಆಸೆಯಿಂದ ಕುಗಳಲ್ಲಿ ಉತ್ಸಾಹವುಳ್ಳವರು ಕಮ್ಮ ಯೋಗವನ್ನೇ ಅವಲಂಬಿಸಬಹುದು. ಏನೋ ಒಂದು ಭಾಗ್ಯವಿಶೇಷದಿಂದ ಭಗವಂತನ ಕಥಾಶ್ರವಣಕೀರ್ತನಾದಿಗಳಲ್ಲಿ ಅಕ್ಕರೆ ಹುಟ್ಟಿದಾಗಲೂ, ಪೂ ವಾಸನೆಯಿಂದ ಕರೆಗಳನ್ನು ಬಿಡಲಾರದೆ, ಆ ಕಠ್ಯಗಳಲ್ಲಿ ತನಗುಂಟಾದ ದೋಷದೃಷ್ಟಿಯಿಂದ ಅದರಲ್ಲಿ ಅತ್ಯಾಸಕ್ತಿಯೂ ಇಲ್ಲದವನಿಗೆ ಭಕ್ತಿ