ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬ ಅಧ್ಯಾ, ೨೦.] ಏದತಕ್ಕಂಥವು. ೨೫೬೯ ದಾಟಿಸತಕ್ಕೆ ನಾವೆಯಂತಿರುವುದು. ಈ ತೆಪ್ಪವನ್ನು ಸರಿಯಾದ ಮಾರ್ಗ ದಲ್ಲಿ ನಡೆಸುವುದಕ್ಕೆ ಆಚಾರನೇ ನಾವಿಕನು. ನಾನೇ ಅದಕ್ಕೆ ಅನುಕೂಲ ವಾದ ಗಾಳಿಯಂತಿರುವೆನು. ಇಂತಹ ಮನುಷ್ಯ ದೇಹವನ್ನು ಪಡೆದಿರುವಾ ಗಲೂ ಯಾವನು, ಅದರಿಂದ ಸಂಸಾರಸಮುದ್ರವನ್ನು ದಾಟಿದಿರುವನೋ, ಅಂತವನು ತನ್ನನ್ನು ತಾನೇ ಕೆಡಿಸಿಕೊಳ್ಳತಕ್ಕ ಆತ್ಮಸತುಕನಲ್ಲದೆ ಬೇರೆ ಯಲ್ಲ. ಆದುದರಿಂದ ಪುರುಷನು ಕಾಮ್ಯಕರಗಳೆಲ್ಲವೂ ದುಃಖಹೇತುವೆಂಬು ದನ್ನು ತಿಳಿದು, ಅವುಗಳ ಫಲಗಳಲ್ಲಿ ಯಾವಾಗ ವಿರಕ್ತನಾಗುವನೋ, ಆಗ ಇಂದ್ರಿಯಗಳನ್ನು ಜಯಿಸಿ, ಅಭ್ಯಾಸಬಲದಿಂದ ತನ್ನ ಮನಸ್ಸನ್ನು ನನ್ನಲ್ಲಿ ನಿಶ್ಚಲವಾಗಿ ನೆಲೆಗೊಳಿಸಬೇಕು. ಆದರೆ ಎಷ್ಟೇ ಪ್ರಯತ್ನದಿಂದ ಮನಸ್ಸ ನ್ನು ತಡೆದಿಟ್ಟರೂ ಅದು ಒಂದುನೆಲೆಯಲ್ಲಿ ನಿಲ್ಲದೆ, ಬಲಾತ್ಕಾರದಿಂದ ಬೇರೆ ಬೇರೆ ಶಬ್ದಾದಿವಿಷಯಗಳಕಡೆಗೇ ಓಡುತ್ತಿರಬಹುದು. ಆಗಲೂ ಮನುಷ್ಯ ನು ಬೇಸರಪಡದೆ, ಆ ಮನಸ್ಸು ಹೋದದಾರಿಯನ್ನೇ ಅನುಸರಿಸುತ್ತ ಉಪಾಯದಿಂದ ಅದನ್ನು ತನ್ನ ವಶಕ್ಕೆ ತಂದುಕೊಳ್ಳಬೇಕು. ಈ ಪ್ರಯ ತ್ನದಲ್ಲಿ ಎಷ್ಟೊಶ್ರಮವಾದರೂ ಬೇಸರಪಟ್ಟು ಸುಮ್ಮನಾಗಬಾರದು. ಪ್ರಾಣೇಂದ್ರಿಯನಿಗ್ರಹದಿಂದಲೂ, ಸಾತ್ವಿಕಾಹಾರಾದಿಗಳಿಂದ ವೃದ್ಧಿಗೊ ಳಿಸಿದ ಸತ್ವಗುಣದಿಂದಲೂ, ನಿಷ್ಕಲ್ಮಷವಾದ ಬುದ್ಧಿಯಿಂದಲೂ, ಆ ಮ ನಸ್ಸನ್ನು ಮೆಲ್ಲಮೆಲ್ಲಗೆ ತನ್ನ ವಶಮಾಡಿಕೊಳ್ಳಬೇಕು. ಚತುರನಾದ ಸಾರ ಥಿಯು, ತನಗೆ ಸುಲಭವಾಗಿ ಸ್ವಾಧೀನವಾಗದ ಕುದುರೆಯನ್ನು ತನ್ನ ದಾ ರಿಗೆ ತರಬೇಕೆಂದೆಣಿಸಿದಾಗ,ಮೊದಮೊದಲು ಅದು ಹೋದದಾರಿಗೇ ಬಿಟ್ಟು, ತಾನೂ ಅದರ ಮಾರ್ಗವನ್ನೇ ಅನುಸರಿಸುತ್ತ, ಕೊನೆಗೆ ಉಪಾಯದಿಂದ ತನ್ನ ದಾರಿಗೆ ಬರಮಾಡಿಕೊಳ್ಳುವನೇಹೊರತು ಉದಾಸೀನವಾಗಿ ಸುಮ್ಮ ನಿರಲಾರನಲ್ಲವೆ ? ಅದರಂತೆಯೇ ಮನಸ್ಸನ್ನೂ ಕೂಡ, ಮೊದಮೊದಲು ಆ ದು ಹೋದದಾರಿಯನ್ನೇ ಅನುಸರಿಸುತ್ತಿದ್ದು, ಕೊನೆಕೊನೆಗೆ ಉಪಾಯ ದಿಂದ ತನ್ನ ವಶಮಾಡಿಕೊಳ್ಳಬೇಕು. ಉದ್ದವಾ! ಈ ಮನೋನಿಗ್ರಹವೇ ಒಂದು ಉತ್ತಮವಾದ ಯೋಗವೆಂದು ತಿಳಿ! ತತ್ವವಿವೇಚನೆಯಿಂದ, ಮ ಹತ್ತು ಮೊದಲಾಗಿ ಹೃಥಿವಿಯವರೆಗಿನ ಉತ್ಪತ್ತಕ್ರಮವನ್ನೂ, ಪೈ