ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧ ಅಧ್ಯಾ, ೨೦.] ಏಕಾದಶಸ್ಕಂಧವು. ಹ ನಿರ್ಣಯವನ್ನು ವಿಧಿಸಿದೆನು. ಆದುದರಿಂದ ನಾನು ಹೇಳಿದ ಗುಣದೋಷ ನಿರ್ಣಯಕ್ಕೂ, ವೇದವಿಹಿತಗಳಾದ ವಿಧಿನಿಷೇಧಗಳಿಗೂ ವಿರೋಧವೇನೂ ಬಾ ರದು. ಕಾಮ್ಯಕರಗಳಲ್ಲಿ ಬೇಸರವು ಹುಟ್ಟಿದ್ದರೂ, ಸಂಪೂರ್ಣವಾಗಿ ಅವು ಗಳಲ್ಲಿ ವಿರಕ್ತಿಹೊಂದದೆ, ಕಾಮಗಳೆಲ್ಲವೂ ದುಃಖಾತ್ಮಕಗಳೆಂಬುದನ್ನು ತಿಳಿ ದೂ ಅವುಗಳನ್ನು ಬಿಡಲಾರದೆ ಇದ್ದವರೂ ಕೂಡ, ಶ್ರದ್ಧೆಯಿಂದ ನನ್ನ ಕಥೆ ಗಳನ್ನು ಕೇಳುತ್ತ, ನನ್ನನ್ನು ಭಜಿಸುವುದರಿಂದ ಶ್ರೇಯಸ್ಸನ್ನು ಪಡೆಯಬಹು ದು, ನನ್ನಲ್ಲಿ ಭಕ್ತಿಯೇ ಸಲ್ವಾರಸಾಧನವೆಂಬ ದೃಢನಿಶ್ಚಯವುಳ್ಳವನು, ಕಾ ಮಗಳನ್ನನುಭವಿಸುತ್ತಿರುವಾಗಲೂ, ಆ ಕಾಮೋಪಭೋಗಗಳಿಗೆ ದುಃ ಖವೇ ಫಲವೆಂಬುದನ್ನು ಮಾತ್ರ ತಿಳಿದುಕೊಂಡು, ಅವುಗಳಲ್ಲಿ ಹೇಯಬುದ್ದಿ ಯಿಂದ ನನ್ನನ್ನೇ ಭಜಿಸಬೇಕು. ಈ ವಿಧವಾದ ಭಕ್ತಿಯೋಗದಿಂದ ಆ ಗಾಗ ನನ್ನನ್ನು ಭಜಿಸತಕ್ಕವನ ಹೃದಯದಲ್ಲಿ ನಾನು ನೆಲೆಗೊಳ್ಳುವುದರಿಂದ, ಅವನ ಮನಸ್ಸಿನಲ್ಲಿರುವ ಕಾಮಗಳೆಲ್ಲವೂ ಸ್ಥಳಸಂಕೋಚದಿಂದ ತಾನಾಗಿ ಬಿಟ್ಟು ಹೋಗುವುವು. ಎಲ್ಲರ ಹೃದಯದಲ್ಲಿಯೂ ನೆಲೆಗೊಂಡಿರುವ ನನ್ನ ನ್ನು ಯಾವನು *ಭಕ್ತಿಯಿಂದ ಸಾಕ್ಷಾತ್ಕರಿಸುವನೋ, ಅವನಿಗೆ ಅಕ್ಷಣವೇ ದೇಹಾಭಿಮಾನಸ್ವತಂತ್ರಾಭಿಮಾನಗಳೆಂಬ ದುರ್ಭೇದ್ಯವಾದ ಹೃದಯ ಗ್ರಂಥಿಯೂ ಸಡಿಲಿಹೋಗುವುದು. ದೇಹಾತ್ಮ ಸ್ವರೂಪವಿಷಯವಾದ ಸಂ ಶಯಗಳೆಲ್ಲವೂ ನೀಗುವುವು. ಮೋಕ್ಷವಿರೋಧಿಗಳಾದ ಅವನ ಪುಣ್ಯಪಾಪ ಕರಗಳೂ ಕ್ಷಯಿಸುವುವು. ಆದುದರಿಂದ ನನ್ನಲ್ಲಿ ಭಕ್ತಿಯುಳ್ಳವನಾಗಿ, ನನ್ನಲ್ಲಿಯೇ ನದ್ಯಮನಸ್ಸುಳ್ಳ ಯೋಗಿಗೆ, ಜ್ಞಾನವೈರಾಗ್ಯಗಳೂ ಕೂಡ, ಭ ಕಿಯಂತೆ ಶ್ರೇಯಸ್ಸಾಧನಗಳೆನಿಸಲಾರವು.ಇನ್ನು ಕರಯೋಗದಿಂದ ಅವನಿ ಗಾಗಬೇಕಾದುದೇನು ? ಉದ್ಯವಾ ! ಕರಗಳಿಂದಲೂ, ತಪಸ್ಸಿನಿಂದಲೂ, ಜ್ಞಾನವೈರಾಗ್ಯಗಳಿಂದಲೂ, ಯೋಗಾಭ್ಯಾಸದಿಂದಲೂ, ದಾನಧರಾದಿಗ ಳಿಂದಲೂ, ತೀರಯಾತ್ರೆ, ವ್ರತ, ಮೊದಲಾದ ಬೇರೆ ಶ್ರೇಯಸ್ಸಾಧನ

  • ಭಕ್ತಿಯೋಗದಲ್ಲಿ ಭಗವಂತನ ಸಾಕ್ಷಾದ್ದರ್ಶನವಿಲ್ಲದಿದ್ದರೂ, ಆ ಭಕ್ತಿಯು ತೈಲಧಾರೆಯಂತೆ ಅವಿಚ್ಛಿನ್ನವಾಗಿ ಬಂದಾಗ, ಆ ಭಗವಂತನ ಸಾಕ್ಷಾದರ್ಶನಕ್ಕೆ ಸಾ ಟಿಯಾಗಿರುವುದೆಂದು ಭಾವನ'

- --