ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨ ಶ್ರೀಮದ್ಭಾಗವತರು [ಅಧ್ಯಾ, ೨೦. ಗಳಿಂದಲೂ ಯಾವಯಾವ ಪ್ರಯೋಜನಗಳು ಕೈಗೂಡಬಹುದೋ, ಅವೆ ಲ್ಲವನ್ನೂ ಭಕ್ತಿಯೋಗದಿಂದಲೇ ಬಹುಶೀಘ್ರವಾಗಿ ಪಡೆಯಬಹುದು. ನ ಇಲ್ಲಿ ನಿಜವಾದ ಭಕ್ತಿಯುಳ್ಳವನು, ಸ್ವರ್ಗವನ್ನಾಗಲಿ, ಕೈವಲ್ಯವನ್ನಾಗಲಿ, ನನ್ನ ಸ್ಥಾನವಾದ ಮೋಕ್ಷವನ್ನಾಗಲಿ, ಇನ್ನೂ ತನಗೆ ಇಷ್ಟವಾದ ಬೇರೆ ಯಾವ ಕೋರಿಕೆಯನ್ನಾಗಲಿ ಆ ಭಕ್ತಿಯಿಂದಲೇ ಪಡೆಯಬಲ್ಲನು. ಆದರೇ ನು ? ನನ್ನಲ್ಲಿ ಏಕಾಂತಭಕ್ತರಾದ ಸಾಧುಗಳು, ನನ್ನನ್ನು ಅನುಭವಿಸುವು ದೊಂದೇ ತಮಗೆ ಪರಮಪ್ರಯೋಜನವೆಂದು ತಿಳಿದಿರುವುದರಿಂದ, ನಾ ನಾಗಿ ಬಂದು, ಪುನರ್ಜನ್ಮವಿಲ್ಲದ ಕೈವಲ್ಯವನ್ನೇ ಅನುಗ್ರಹಿಸಿಕೊಟ್ಟರೂ, ಅದಕ್ಕಾಸೆಪಡಲಾರರು. ಅಷ್ಟೇಕೆ ? ಅವರು ಮುಕ್ತಿಯನ್ನೂ ತಮ್ಮ ಮ ನಸ್ಸಿನಿಂದ ಅಪೇಕ್ಷಿಸಲಾರರು. ಯಾವ ಫಲಾಪೇಕ್ಷೆಯೂ ಇಲ್ಲದ ಏಕಾಂತ ಭಕ್ತಿಯೇ ಶ್ರೇಯಸ್ಕಾಧನವೆಂಬ ಒಂದೇ ನಂಬಿಕೆಯಿಂದ, ಮು ಕಿಗೂ ಆಸೆಪಡದೆ ನಿರಪೇಕ್ಷರಾಗಿದ್ದವರಿಗೆ, ಆ ನಿರಪೇಕ್ಷೆಯೇ ತಾನಾಗಿ ಮುಕ್ತಿಯನ್ನು ಕೈಗೂಡಿಸುವುದು. ಆದುದರಿಂದ ಉದ್ದವಾ ! ದೃ ಷ್ಟಾದೃಷ್ಟಫಲಗಳಲ್ಲಿಯಾಗಲಿ, ಕೊನೆಗೆ ಅಪವರ್ಗದಲ್ಲಿಯಾಗಲಿ ಆ ಪೇಕ್ಷೆಯಿಲ್ಲದಿದ್ದಾಗಮಾತ್ರವೇ ಭಕ್ತಿಯೋಗವೆಂಬುದು ನಿರ್ವಿಘ್ನು ವಾಗಿ ಕೊನೆಸಾಗುವುದು. ಹೀಗೆ ನನ್ನಲ್ಲಿ ಅನನ್ಯಪ್ರಯೋಜನವಾದ ಭಕ್ತಿಯ ನಿಟ್ಟು, ಗುಣದೋಷಗಳೆರಡರಲ್ಲಿಯೂ ಸಮಬುದ್ದಿಯಿಂದ ಉದಾಸೀನರಾ ಗಿರತಕ್ಕ ಸಾಧುಗಳಲ್ಲಿ, ಆ ಗುಣದೋಷವಿಚಾರದಿಂದ ಉಂಟಾಗತಕ್ಕ ರಾ ಗದ್ವೇಷಾದಿಗಳೊಂದೂ ತಲೆಯಿಕ್ಕಲಾರವು, ಉದ್ದವಾ ! ಇದುವರೆಗೆ ನಾನು ಹೇಳಿದ ಮೋಕ್ಷಪಾಯಗಳನ್ನು ಅನುಷ್ಠಿಸತಕ್ಕವರು, ಪರಬ್ರ ಹೈವೆಂದು ವ್ಯವಹರಿಸಲ್ಪಡುವ ನನ್ನ ಸ್ಥಾನವನ್ನು ನಿರಾಯಾಸವಾಗಿ ಹೊಂ ದುವುದರಲ್ಲಿ ಸಂದೇಹವಿಲ್ಲ ! ಇದು ಇಪ್ಪತ್ತನೆಯ ಅಧ್ಯಾಯವು ಕೃಷ್ಣನು ದೇಶಕಾಲಾದಿಗಳ ಶುದ್ಧಾಶುದ್ಧತ್ವ ಪನು ದೇಶಕಾಲಾದಿಗಳ ಶು ಗಳನ್ನು ಸಿದುದು, ಪ್m ಉದ್ದವಾ ! ಮೇಲೆ ಹೇಳಿದಂತೆ ನನ್ನನ್ನು ಸೇರುವುದಕ್ಕೆ ಉಪಾಯ ಭೂತಗಳಾದ ಕಲ್ಮ ಜ್ಞಾನ ಭಕ್ತಿ ಯೋಗಗಳೆಲ್ಲವನ್ನೂ ಬಿಟ್ಟು,ಇಂದ್ರಿಯ