ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಅಧ್ಯಾ. ೨೧.] ಏಕಾದಶಕ್ಕಂಥವು ಚಾಪಲ್ಯದಿಂದ ಅತ್ಯಲ್ಪಗಳಾದ ಶಬ್ದಾದಿವಿಷಯಗಳನ್ನನುಭವಿಸುವುದಕ್ಕಾಗಿ ಯಾವನು ಪ್ರಯತ್ನಿ ಸುವನೋ, ಅವನು ಎಂದೆಂದಿಗೂ ಸಂಸಾರದಿಂದ ಬಿಡುಗಡೆ ಹೊಂದಲಾರನು. ಮುಖ್ಯವಾಗಿ ಯಾವ ಶ್ರೇಯಸ್ಸನ್ನು ಪಡೆಯ ಬೇಕಾದರೂ, ತಮತಮಗೆ ನಿಯತಗಳಾದ ವರ್ಣಾಶ್ರಮಧರಗಳಲ್ಲಿ ನಿಷ್ಠೆ ಯಿಂದಿರುವುದೇ ಗುಣವು. ಅದಕ್ಕೆ ವಿಪರೀತವಾಗಿ ಪ್ರವರ್ತಿಸುವುದೇ ದೋಷವು, ಇಷ್ಮೆ ಗುಣದೋಷಗಳ ಸ್ವರೂಪನಿರ್ಣಯವೆಂದು ತಿಳಿಯ ಬೇಕು. ಆದರೆ ಮುಮುಕ್ಷುಗಳಿಗಾದರೂ ಕಾವ್ಯಗಳಲ್ಲದ ಶುದ್ಧ ಕಮ್ಮ ಗಳೇ ಉಪಾದೇಯಗಳೆಂದು ಹಿಂದೆ ಹೇಳಿರುವೆನಷ್ಟೆ ? (( ಈ ಶುದ್ಧತ್ಯಾ ಶುದ್ಯತ್ವಗಳನ್ನು ನಿರ್ಣಯಿಸುವುದು ಹೇಗೆ” ಎಂದು ನೀವು ಕೇಳಬಹುದು. ಉದ್ದವಾ ! ದೇಶ, ಕಾಲ, ದ್ರವ್ಯ, ಕರ, ಮಂತ್ರ, ಕರ್ತೃಗಳೆಂಬ ಸಮ ಸವೂ ಪಂಚಭೂತಾತ್ಮಕಗಳೇ ಆಗಿರುವುದರಿಂದ, ಸಮಾ ನಾ ಕಾರವುಳ್ಳವು ಗಳಾಗಿದ್ದರೂ, ಇದು ಯೋಗ್ಯವೆ ಅಥವಾ ಅಯೋಗ್ಯವೇ?”ಎಂಬ ಸಂದೇ ಹಮೂಲಕವಾಗಿ, ಅವುಗಳಲ್ಲಿ ಸ್ವಾಭಾವಿಕವಾದ ಪ್ರವೃತ್ತಿಯನ್ನು ನಿರ್ಬ೦ ಥಿಸಿಡುವುದಕ್ಕಾಗಿ, ಒ ದೇಶಕಾಲಾದಿಸಮಸ್ತ ವಸ್ತುಗಳಲ್ಲಿಯೂ ಯೋ ಗ್ಯತಾಯೋಗ್ಯತೆಗಳು ವಿಭಾಗಿಸಿ ತೋರಿಸಲ್ಪಟ್ಟಿರುವುವು. ಈ ಯೋಗ್ಯ ತ್ಯಾಯೋಗ್ಯತ್ವ ನಿರ್ಣಯದಿಂದ, ಅವರವರು ತಮತಮಗೆ ಶುಭಾಶುಭಕಾ ರಣಗಳಾದ ಗುಣದೋಷಗಳನ್ನು ಕಂಡುಕೊಂಡು, ತಮ್ಮ ತಮ್ಮ ಅಧಿಕಾ ರಕ್ಕೆ ತಕ್ಕಂತೆ ಪ್ರವರ್ತಿಸಬಹುದು. ತಮತಮಗೆ ನಿಯತವಾದ ಧರದಲ್ಲಿ ನಡೆಯತಕ್ಕವರಿಗೆ, ಆಯಾಧರ ನಿರಾಹಕ್ಕಾಗಿಯೂ, ಧರಕ್ಕೆ ವಿರೋಧ ವಿಲ್ಲದಂತೆ ದೇಹಯಾತ್ರೆಯನ್ನು ನಡೆಸುವುದಕ್ಕಾಗಿಯೂ, ಇದು ಉಪಾ ದೇಯವು, ಇದು ಅನುಪಾದೇಯವೆಂಬ ವ್ಯವಹಾರಕ್ಕಾಗಿಯೂ, ನಾನು ಹೀಗೆ ಶುದ್ಧಾಶುದ್ಧವಿಭಾಗಪೂರೈಕವಾಗಿ, ಅವರವರು ಪ್ರವರ್ತಿಸತಕ್ಕ ಆ ಚಾರನಿಯಮವನ್ನು ತೋರಿಸಿರುವೆನು, ಚತುರು ಖಬ್ರಹ್ಮನಿಂದ ಹಿಡಿದು ಸ್ಥಾವರಪರಂತವಾದ ಸಮಸ್ತಶರೀರಗಳೂ, ಪೃಥಿವಿ, ಆಪ್ಪ, ತೇಜಸ್ಸು, ವಾಯು, ಆಕಾಶಗಳೆಂಬ ಪಂಚಧಾತುಗಳಿಂದೇರ್ಪ್ಪಟ್ಟ, ಅಂತರಾತ್ಮನಾ ದ ನನ್ನೊಡನೆಯ ಕೂಡಿರುವುವು. ಆದುದರಿಂದ ಸಮಸ್ತಪದಾದ್ಯಗಳೂ