ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೧೨ ಶ್ರೀಮದ್ಭಾಗವತವು [ಅಧ್ಯಾ, ೨. ದರು. ಕಂದಿದ ಮುಖದೊಡನೆ ರಾಜಸಭೆಗೆ ಬಂದು ಸಮಸ್ಯಯಾ ದವರಿಗೂ ಆ ಒನಕೆಯನ್ನು ತೋರಿಸಿ, ನಡೆದ ಸಂಗತಿಗಳನ್ನೆಲ್ಲಾ ಯಥಾ ವತ್ತಾಗಿ ವಿವರಿಸಿ ಹೇಳಿದರು. ಕ್ರೂರವಾದ ಆ ಬ್ರಾಹ್ಮಣಶಾಪವನ್ನು ಈ ಆ ದ್ವಾರಕಾವಾಸಿಗಳೆಲ್ಲರೂ ಭಯಾಶ್ ರೈಗಳಿಂದ ಹಿಂದುಮುಂದು ರದೆ ಕಳವಳಿಸುತಿದ್ದರು. ಆಗ ಯದುರಾಜನಾದ ಅಹುಕನು, ಆ ಒನ ಕೆಯನ್ನು ಪುಡಿಪುಡಿಮಾಡಿಸಿ, ಆ ಪುಡಿಯನ್ನೂ, ಅದರ ಮೊಳೆಗಳನ್ನೂ ಸಮುದ್ರಮಧ್ಯಕ್ಕೆ ಬಿಸಾಡಿಸಿದನು. ಅವುಗಳಲ್ಲಿ ಒಂದಾನೊಂದು ಉಕ್ಕಿನ ಮೊಳೆಯನ್ನು ಸಮುದ್ರದಲ್ಲಿದ್ದ ಒಂದು ಮೀನು ನುಂಗಿತು. ಆ ಒನಕೆಯ ಸಣ್ಣಸಣ್ಣಪುಡಿಗಳೂಕೊಡ, ಅಲೆಯ ವೇಗದಿಂದ ತೀರದ ಕಡೆಗೆ ಒತ್ತರಿ ಸಲ್ಪಟ್ಟು, ಅಲ್ಲಿ ಮೂರು ಕವಲುಗಳುಳ್ಳ ಐರಕವೆಂಬ ಹೊಡಕಗಳಾಗಿ ಬೆಳೆ ದುವು. ಬೆಸ್ತರು ಸಮುದ್ರದಲ್ಲಿ ಮೀನುಹಿಡಿಯುತ್ತಿರುವಾಗ, ಆ ಉ ಕೈನ ಮೊಳೆಯನ್ನು ನುಂಗಿದ ಮೀನು, ಇತರ ಮೀನುಗಳೊಡನೆ ಒಬ್ಬಾ ನೊಬ್ಬ ಅಂಬಿಗನ ಬಲೆಗೆ ಸಿಕ್ಕಿಬಿದ್ದಿತು. ಆ ಬೆಸ್ತನು ಆ ಮೀನನ್ನು ಕುಯ್ಯ ತ,ಅದರ ಹೊಟ್ಟೆಯಲ್ಲಿದ್ದ ಮೊಳೆಯನ್ನು ತೆಗೆದು, ಅದನ್ನು ತನ್ನ ಬಾಣಕ್ಕೆ ಅ . ಲಗನ್ನಾಗಿ ಮಾಡಿಟ್ಟನು. ಓ ಪರೀಕ್ಷಿದ್ರಾಜಾ! ಇವೆಲ್ಲವೂ ಆ ಕೃಷ್ಣನ ಸಂ ಕಲ್ಪದಿಂದಲೇ ನಡೆದ ಕಾವ್ಯಗಳೆಂದು ತಿಳಿ! ಆ ಶ್ರೀಕೃಷ್ಣನು ತ್ರಿಕಾಲಜ್ಞ ನಾಗಿದ್ದು, ಮುಂದೆ ಅದರಿಂದ ನಡೆಯಬಹುದಾದ ಅನರ್ಥವನ್ನು ತಿಳಿದಿ ಈರೂ, ಆ ಬ್ರಾಹ್ಮಣಶಾಪವನ್ನು ವಿಫಲವಾಗಿ ಮಾಡುವುದಕ್ಕೂ, ತಾನು ಸಮರನಾಗಿದ್ದರೂ, ಯಾದವಕುಲವನ್ನು ಸಂಹರಿಸಬೇಕೆಂಬುದೇ ಆತನ ಸಂಕಲ್ಪವಾಗಿದ್ದುದರಿಂದ, ಅವೆಲ್ಲವನ್ನೂ ನೋಡುತ್ತ ತಟಸ್ಥನಾಗಿರುತಿದ್ದ ನು. ಇದು ಮೊದಲನೆಯ ಅಧ್ಯಾಯವು. ( ನಾರದನು ವಸುದೇವನಿಗೆ ಏದೇಹರ್ಷಭಸಂವಾದ ) * ವನ್ನು ತಿಳಿಸಿದುದು, ವನ್ನು ತಿಳಿಸಿದುದು. ಓ ಪರೀಕ್ಷಿದ್ರಾಜಾ ! ಶ್ರೀಕೃಷ್ಣನು ದ್ವಾರಕೆಯಲ್ಲಿರುವಾಗ, ನಾರದನು ಅವನಲ್ಲಿ ಪರಮಭಕ್ತಿಯುಳ್ಳವನಾದುದರಿಂದ ಆಗಾಗ ಅಲ್ಲಿಗೆ