ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫ ಅಧ್ಯಾ. ೨೧.] ಏಕಾದಶಸ್ಕಂಧವು. ಯೆಂಬ ಪ್ರಮಾಣಭೇದದಿಂದಲೂ, ಅವರವರ ಶಕ್ತಿ ತಾರತಮ್ಯದಿಂ ದಲೂ, ಬುದ್ದಿ ನಿಶಯದಿಂದಲೂ, ಉತ್ಸವಸಂಬಂಧದಿಂದಲೂ ಶುದ್ಧ ತ್ಯಾಶುದ್ಧತ್ವಗಳು ಏರ್ಪಡುವುವು. ಹೇಗೆಂದರೆ, ವಸ್ತ್ರಗಳು, ಪಾತ್ರೆ ಗಳು ಮುಂತಾದ ದ್ರವ್ಯಗಳಿಗೆ, ನೀರು, ಮಣ್ಣು ಮುಂತಾದ ದ್ರವ್ಯಾಂತರ ಗಳಿಂದ ಶುಕ್ಕಿಯುಂಟಾಗುವುದು. ಅವುಗಳೇ ಮಲಮೂತ್ರಾದಿಗಳಿಂದ ಅಶುದ್ಧವಾಗುವುವು. ಒಂದುವಸ್ತುವು ಶುದ್ಧವೇ ಅಶುದ್ದವೇ ಎಂಬ ಸಂದೇ ಹವು ತೋರಿದಾಗ, ಶಾಸ್ತ್ರವಚನದಿಂದಲೂ, ಬ್ರಾಹ್ಮಣವಾಕ್ಯದಿಂದಲೂ ಅದಕ್ಕೆ ಶುದ್ಧಿಯುಂಟು. ಪುಷ್ಪಾದಿಗಳಿಗೆ ಪ್ರೋಕ್ಷಣಾಲಸಂಸ್ಕಾರಗಳಿಂದ ಶುದ್ಧಿಯುಂಟು. ಮಳೆಯ ನೀರಿಗೆ ಕಾಲದಿಂದ ಶುದ್ಧಿಯುಂಟು. ನದೀ ಜಲವು ಮಹತ್ತಾದುದರಿಂದ ಚಂಡಾಲಾದಿಸ್ಪರ್ಶದಲ್ಲಿಯೂ ಅದಕ್ಕೆ ದೋಷ ವಿಲ್ಲವು. ಬೀದಿಯಲ್ಲಿ ಹರಿಯುವ ನೀರು ಅಲ್ಪ ವಾ ದುದರಿಂದ ಅಶುದ್ಧ ವೆನಿಸುವುದು. ಶಕ್ಕಸಿಗೆ ಗ್ರಹಣದಿಕಾಲಗಳಲ್ಲಿ ಸ್ನಾನಮಾಡಿದಾಗಲೇ ಶುದ್ಧಿಯು! ರೋಗಿಗೆ ಸ್ನಾ ನಾಡಿಗಳಿಲ್ಲದಿರೂ ಅವನ ಅಶಕ್ತಿಯೇ ಅವನಿಗೆ ಶುಕ್ಕೆ ಕಾರಣವಾಗುವುದು. ಪ್ರತಜನ್ಮಾ ಕಾಲಗಳಲ್ಲಿ ಸೂತಕ ಕಾಲವು ಕಳೆದ ಹೋಯಿತೆಂಬ ಬುದ್ಧಿಯೆ ಶುದ್ದಿ ಕಾರಣವಾಗಿಯೂ, ಇನ್ನೂ ಕಳೆಯಲಿಲ್ಲವೆಂಬ ಬುದ್ಧಿಯೇ ಅಶುದ್ದಿ ಕಾರಣವಾಗಿಯೂ ಇರುವುದು. ಭಗವದತ್ಸವಾದಿಗಳಲ್ಲಿ ಆಸ್ಪಶ್ಯವಾದುದನ್ನು ಮುಟ್ಟಿದರೂ ಆ ಉತ್ಸವಸಂಬಂಧದಿಂದ ಶುದ್ಧಿಯುಂಟು. ಹೀಗೆ ಶುದ್ಧಿಕಾರಿಗಳೆನಿಸಿದ ಈ ದ್ರವ್ಯವಚನಾದಿಗಳಲ್ಲವೂ, ಆಯಾ ದೇಶ ಕಾಲ ಸ್ಥಿತಿ ಗತಿಗಳನ್ನ ನುಸರಿಸಿ ಸ್ವತಃ ಶುದ್ಧವೆನಿಸಿದ ವಸ್ತುವಿಗೆ ಅಶುದ್ಧಿಯನ್ನೂ, ಅಶುದ್ಧವಾದುದಕ್ಕೆ ಶುದ್ದಿಯನ್ನೂ ಉಂಟುಮಾಡುವುವು. ಧಾನ್ಯಗಳು, ಮರದ ಪವಾರಗಳು, ಗಜದಂತವೇ ಮೊದಲಾದ ಆಸ್ತಿಗಳು, ನೂಲು, ದ್ರವಪದಾರಗಳು, ಕಂಚು ಮೊದಲಾದ ಲೋಹಗಳು, ಚರಗಳು, ಇತ್ಯಾದಿಗಳಿಗೆಲ್ಲಾ, ಗಾಳಿ, ಬೆಂಕಿ, ಬಿಸಿಲು, ಮಣ್ಣು, ಮುಂತಾದುವುಗಳಿಂದ ಒಂದೊಂದಕ್ಕೆ ಒಂದೊಂದು ವಿಧವಾದ ಶುದ್ಧಿಯುಂಟು. ಹೀಗೆಯೇ ಭೂಜನ್ಯವಾದ ಕೆಲಕೆಲವು ಪದಾರ ಗಳಿಗೆ ಇತರಸದಾರಗಳ ಸಂಯೋಗವಿಯೋಗಗಳಿಂದ ಶುಚಿತ್ಯಾಶುಚಿತ್ವಗ