ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩ ಶ್ರೀಮದ್ಭಾಗವತವು [ಅಜ್ಞ. ೨೧. ಘುಂಟು. ಹೇಗೆಂದರೆ, ಅನ್ನದಲ್ಲಿ ಕೂದಲು ಸಿಕ್ಕಿದಾಗ ಅದನ್ನು ತೆಗೆದುಹಾಕಿ, ಆಜ್ಯಾದಿಗಳನ್ನು ಸೇರಿಸುವುದರಿಂದ ಆ ಅನ್ನವು ಶುದ್ಧವಾಗುವುದು. ಕಶ್ನ ಲವು ಅಂಟಿದ್ದ ಪಾತ್ರೆಗಳು, ವಸ್ತುಗಳು ಮುಂತಾದುವುಗಳಿಗೆ, ಆ ಕಲ ಸಂಬಂಧವೂ, ಅದರ ದುರ್ಗಂಧವೂ ಸಂಪೂರ್ಣವಾಗಿ ನೀಗಿ, ಶುದ್ಧ ರೂಪವನ್ನು ಹೊಂದುವವರೆಗೆ, ಹುಳಿ, ನೀರು ಮೊದಲಾದವುಗಳಿಂದ ಬಾರಿ ಬಾರಿಗೂ ಶುದ್ಧಿ ಮಾಡುತ್ತಿರಬೇಕು. ಇವೆಲ್ಲವೂ ದ್ರವ್ಯಶುದ್ಧಿಕ್ರಮಗಳು. ಕರ್ತೃವಿಗೆ, ಸ್ನಾನ, ದಾನ ತಪಸ್ಸುಗಳಿಂದಲೂ, ಅನುಷ್ಠಾನಯೋಗ್ಯವಾದ ವಯಸ್ಸಿನಿಂದಲೂ, ಶಕ್ತಿಯಿಂದಲೂ ಉಪನಯನಾದಿಸಂಸ್ಕಾರಗಳಿಂ ದಲೂ, ಸಂದ್ಯೋಪಾಸನಾದಿಕರಗಳಿಂದಲೂ, ನನ್ನ ಸ್ಮರಣೆಯಿಂದಲೂ ಶುದ್ದಿಯುಂಟು. ಹೀಗೆ ಶರೀರವನ್ನೂ ತನ್ನ ನ್ಯೂ ಶುದ್ಧಿ ಮಾಡಿಕೊಂಡು, ಅಧಿ ಕಾರೋಚಿತಗಳಾದ ಕರೆಗಳನ್ನು ನಡೆಸಬಹುದು. ಮಂತ್ರಗಳಿಗೆ ಆಚಾರ ಮುಖದಿಂದ ಚೆನ್ನಾಗಿ ಪ್ರಯೋಗಜ್ಞಾನವನ್ನು ಪಡೆಯುವುದೇ ಶುದ್ಧಿಯು. ಕರಗಳಿಗೆ ಭಗವದರ್ಪಣವೆಂಬ ಭಾವದಿಂದ ನಡೆಸುವುದೇ ಶುದ್ಧಿಯು. ಹೀಗೆ ದೇಶ, ಕಾಲ, ದ್ರವ್ಯ, ಕರ್ತೃ, ಮಂತ್ರ, ಕರಗಳೆಂಬಿವಾರೂ, ಮೇಲೆ ಹೇಳಿದ ಕ್ರಮದಿಂದ ಶುದ್ಧಿ ಹೊಂದಿದಾಗಲೇ,ಪುರುಷನಿಗೆ ತನ್ನ ತನ್ನ ಆಧಿಕಾ ರೋಚಿತವಾದ ಧರವು ಸಿದ್ಧಿಸುವುದು. ಹಾಗಿಲ್ಲದೆ ಅವು ಆಶುದ್ಧಗಳಾಗಿ Kಲ್ಲಿ ಅಧ್ಯುಕೇತುಗಳಾಗುವುವು. ಕೆಲಕೆಲವುಸಂದರ್ಭಗಳಲ್ಲಿ ವಿಶೇಷವಿಧಿ ಯನ್ನನುಸರಿಸಿ ಗುಣವೇ ದೋಷವಾಗಿಯೂ, ದೋಷವೇ ಗುಣವಾಗಿಯೂ ಆಗುವುದುಂಟು. ಹೇಗೆಂದರೆ, ಎಲ್ಲರಿಗೂ ಶುದ್ಧಿಹೇತುವಾದ ಸ್ಥಾನವು ರೋಗಿಗೆ ನಿಷಿದ್ಧವೆನಿಸುವುದು. ನಿಷಿದ್ಧವಾದ ಪಶುಹಿಂಸೆಯು ಯಜ್ಞಕಾಲ ದಲ್ಲಿ ಪ್ರಶಸ್ತವೆನಿಸುವುದು. ಆದುದರಿಂದ ಈ ವಿಶೇಷಶಾಸ್ತನಿಯಮದಿಂದ ಸಾಮಾನ್ಯ ಶಾಸ್ತ್ರವಿಹಿತಗಳಾದ ಗುಣದೋಷಗಳಿಗೆ ಅಪವಾದಗಳುಂಟು. ಶುದ್ಧರಾದವರಿಗೆ ಪತಿತರೊಡನೆ ಸಹಭೋಜನ ಸಂಭಾಷಣಾದಿಗಳು ದೋಷ ಹೇತುವೆನಿಸಿದ್ದರೂ, ಪತಿತರಿಗೆ ಪತಿತರೊಡನೆ ಸಹಭೋಜನಾದಿಗಳು ದೋಷಾಸ್ಪದವಲ್ಲ. ಗೃಹಸ್ಥನಿಗೆ ವಿಷಯೋಪಭೋಗವು ಸ್ವಾಭಾವಿಕವಾದು ದರಿಂದ, ಆದರಿಂದ ಅವನಿಗೆ ದೋಷವಿಲ್ಲ. ಯತಿಗಳಿಗೆ ಆದೇದೋಷಹೇ