ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


9Y ಅಧ್ಯಾ. ೨೧.] ಏಕಾದಶಸ್ಕಂಧನು. ತುವಾಗುವುದು. ಏಕೆಂದರೆ, ಮೇಲೇರಿದವನು ಕೆಳಕ್ಕೆ ಬಿಳಬಹುದೇಹೊರತು ಮೊದಲೇ ನೆಲದಮೇಲೆ ಮಲಗಿದ್ದವನಿಗೆ ಪತನವಿಲ್ಲವಷ್ಟೆ? ಹಾಗೆಯೇ ಸಂಗಪರಿತ್ಯಾಗದಿಂದ ಉತ್ತಮಸ್ಥಿತಿಯನ್ನು ಹೊಂದಿದ ಯತಿಯು, ತಿರುಗಿ ವಿಷಯಾಭಿಲಾಷೆಗೆ ಬಿದ್ದಾಗ ಪತಿತನೆನಿಸುವನು. ಗೃಹಸ್ಥನಾದರೋ ಮೊದ ಲಿಂದ ವಿಷಯೋಪಭೋಗದಲ್ಲಿಯೇ ಇರುವುದರಿಂದ, ಅವನಿಗೆ ಆ ವಿಷ ಯೋಪಭೋಗವು ದೋಷಾಸ್ಪದವಾಗದು. ವಿಷಯಾಸಕ್ತಿಯೆಂಬುದು ಸಕಲಪ್ರಾಣಿಗಳಿಗೂ ಜಸಿದ್ಧವಾದುದು. ಆ ವಿಷಯಾಸಕ್ತಿಯೇ ಆಥೋ ಗತಿಗೆ ಕಾರಣವು. ಆದುದರಿಂದ ಮನುಷ್ಯನು ಮೆಲ್ಲಮೆಲ್ಲಗೆ ಆ ವಿಷಯಸಂಗ ಗಳನ್ನು ತ್ಯಜಿಸುತ್ತಬರ ಬೇಕು. ಆದುದರಿಂದ ಮನುಷ್ಯನು ತನಗೆ ಯಾವ ಯಾವ ವಿಷಯದೊಡನೆ ಸಂಬಂಧವು ದೈವಿಕವಾಗಿ ತಪ್ಪಿ ಹೋಗುವುದೋ, ಅವುಗಳನ್ನು ತಿರುಗಿ ಸಮೀಪಕ್ಕೆ ಹೊಸದೆ, ಸಂಪೂರ್ಣವಾಗಿ ಕಡೆಗಣಿ ಸುತ್ತ ಬರಬೇಕು! ವಿಷಮಪರಿತ್ಯಾಗವೇ ಮನುಷ್ಯನಿಗೆ ಶೋಕ, ಮೋಹ, ಭಯಾದಿಗಳನ್ನು ನೀಗಿಸಿ ಶ್ರೇಯಸ್ಸನ್ನುಂಟುಮಾಡತಕ್ಕ ಉತ್ತಮಧರವು. ಶಬ್ದಾದಿವಿಷಯಗಳಲ್ಲಿ ಗುಣಭಾವನೆಯನ್ನಿಟ್ಟು ಅದನ್ನು ಚಿಂತಿಸುತ್ತಿರು ವವನಿಗೆ ಅದರಲ್ಲಿಯೇ ಮನಸ್ಸು ತಗುಲಿರುವುದು. ಅದರಿಂದ ಹೇಗಾ ದರೂ ಆ ಇಷ್ಟವಿಷಯಗಳನ್ನ ನುಭವಿಸದೆ ತೀರದೆಂಬ ಕಾಮವು ಹುಟ್ಟು ವುದು. ಆ ಕಾಮದಿಂದ ಬೇರೆಯವರೊಡನೆ ದ್ವೇಷವೂ, ಅದರಿಂದ ದುಸ್ಸಹ ವಾದ ಕ್ರೋಧವೂ, ಆ ಕ್ರೋಧದಿಂದ ಯುಕ್ತಾಯುಕ್ತ ವಿವೇಚನೆಯಿಲ್ಲದ ಸಂಮೋಹವೂ ಹುಟ್ಟುವುದು. ಆ ಸಮ್ಮೋಹದಿಂದ ಪುರುಷನಿಗೆ ಸಹಜ ಧರವಾದ ಜ್ಞಾನವು ಸಂಕುಚಿತವಾಗುವುದು. ಉದ್ಧವಾ ! ಹೀಗೆ ಜ್ಞಾನ ಶೂನ್ಯನಾದ ಜೀವನು, ಮೂರ್ಛಿತನಂತೆಯೂ, ಮೃತನಂತೆಯೂ, ಸ್ವಪರ ವಿವೇಕಜ್ಞಾನವೂ ಇಲ್ಲದೆ ಅಸಾಯನೆನಿಸುವನು. ಹೀಗೆ ವಿಷಯಾತುರ ನಾದವನು ತನ್ನನ್ನಾಗಲಿ, ಇತರರನ್ನಾಗಲಿ ತಿಳಿಯಲಾಗದೆ, ಅಚೇತನಗ ಳಾದ ವೃಕ್ಷಗಳಂತೆ ಜೀವಿಸುತ್ತ, ಚರದ ತಿತ್ತಿಯಂತೆ ವ್ಯರ್ಥವಾಗಿ ಉಸಿ ರಾಡಿಸುತ್ತಿರುವರು. ಉದ್ಧವಾ ! ಶ್ರುತಿಗಳಲ್ಲಿ ಸ್ವರ್ಗಾದಿಫಲಗಳನ್ನು ಹೇಳಿ ದರೂ, ಅವು ಮನುಷ್ಯನಿಗೆ ಪುರುಷಾರಗಳೆಂದು ಬೋಧಿಸುವ ಅಭಿ