ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೭೮ ಶ್ರೀಮದ್ಭಾಗವತವು [ಅಧ್ಯಾ, ೨೧. ಪ್ರಾಯದಿಂದಲ್ಲ ! ಮೋಕ್ಷದಲ್ಲಿ ರುಚಿಯನ್ನು ಹೆಚ್ಚಿಸುವುದಕ್ಕಾಗಿ ಈ ಅಲ್ಲ ಫಲಗಳನ್ನು ಹೇಳಬೇಕಾಯಿತು. ಇಹಲೋಕಸುಖಕ್ಕಿಂತಲೂ ಸ್ವರ್ಗಾದಿ ಸುಖಗಳಲ್ಲಿ ಅತಿಶಯವುಂಟೆಂದೂ, ಅದಕ್ಕಿಂತಲೂ ಅಪವರ್ಗಸುಖವು ಮೇಲೆಂದೂ, ಒಂದಕ್ಕೊಂದಕ್ಕೆ ಮೇಲೆಯನ್ನು ತೋರಿಸಿ, ಇವೆಲ್ಲಕ್ಕಿಂತಲೂ ಮೋಕ್ಷಸುಖವು ನಿರತಿಶಯಪುರುಷಾರವೆಂದು ಬೋಧಿಸಿ, ಅವುಗಳ ಪರ ಸ್ಪರತಾರತಮ್ಯವನ್ನು ತೋರಿಸಬೇಕೆಂಬುದೇ ಸ್ವರ್ಗಾದಿಫಲಗಳನ್ನು ಹೇಳಿದ ಉದ್ದೇಶವೆಂದು ತಿಳಿ ! ಮತ್ತು ಮಕ್ಕಳಿಗೆ ಔಷಧವನ್ನು ಕುಡಿಸು ವಾಗ, ಸಕ್ಕರೆ, ಬೆಲ್ಲ, ಮೊದಲಾದ ಮಧುರಸದಾರಗಳನ್ನು ಮುಂದಿಟ್ಟು ಆಸೆಯನ್ನು ತೋರಿಸುವರಲ್ಲವೆ? ಅಲ್ಲಿ ಆ ಮಗುವಿಗೆ ತಿನ್ನಿಸಬೇಕಾದ ಮುಖ್ಯ ವಸ್ತುವು ಔಷಧವೇ ಹೊರತು ಸಕ್ಕರೆಬೆಲ್ಲಗಳಲ್ಲ. ಹಾಗೆಯೇ ವೇದಗಳೂ, ಜನರಿಗೆ ಮೋಕ್ಷಸುಖದಲ್ಲಿ ಹೆಚ್ಚಾಗಿ ಅಭಿರುಚಿಯನ್ನು ಹುಟ್ಟಿಸುವುದಕ್ಕಾ ಗಿಯೇ ಈ ಸ್ವರ್ಗಾದಿಫಲಗಳನ್ನು ಹೇಳಿರುವುವು. ಸಮಸ್ತ ಜನರಿಗೂ ವಿಷ ಯಾಸಕ್ತಿಯೆಂಬುದು ಜನ್ಮಸಿದ್ಧವಾಗಿರುವುದು. ತಮ್ಮ ಶ್ರೇಯಸ್ಸನ್ನು ತಿಳಿಯದೆ, ಬಂಧಹೇತುಗಳಾದ ಆ ಕಾಮಾದಿಗಳಲ್ಲಿ ಮನಸ್ಸಿಟ್ಟು, ಒಬ್ಬೊ ಬ್ಬರೂ ತಾವಾಗಿಯೇ ಸಂಸಾರಮಾರ್ಗವನ್ನವಲಂಬಿಸಿ ಕೊನೆಗೆ ಸ್ಥಾನ ರತ್ವವನ್ನೂ ಹೊಂದುವರು. ಹೀಗೆ ಜನರು ಸಹಜವಾಗಿಯೇ ಕೆಟ್ಟು ಹೋಗು ತಿರುವಾಗ, ವೇದಗಳು ಅವರಿಗೆ ಮತ್ತಷ್ಟು ದುರ್ಬೋಧನೆಯನ್ನು ಮಾಡಿ, ಅನರಹೇತುಗಳಾದ ಕಾಮಗಳಲ್ಲಿಯೇ ಪ್ರವರ್ತಿಸುವಂತೆ ಮಾಡುವುದೆ ? ಎಂದಿಗೂ ಇಲ್ಲ. ಲೋಕದ ಶ್ರೇಯಸ್ಸಿಗಾಗಿಯೇ ಪ್ರವರ್ತಿಸಿರುವಶ್ರುತಿಗಳು ಹಾಗೆ ಜನರಿಗೆ ಕಾಮಮಾರ್ಗದಲ್ಲಿ ಆಸೆಹುಟ್ಟಿಸುವಹಾಗಿದ್ದರೆ ಅದರಲ್ಲಿ ಯಾರಿಗೆ ನಂಬಿಕೆ ಹುಟ್ಟುತಿತ್ತು? ಆದುದರಿಂದ ವೇದತಾತ್ಸಲ್ಯವನ್ನು ತಿಳಿದ ವರು, ವೇದೋಕ್ಷಗಳಾದ ಸ್ವರ್ಗಾದಿಫಲಗಳಿಗೆ ಪ್ರಾಧಾನ್ಯವನ್ನು ಹೇಳ ಲಾರರು. ಪಷ್ಟಗಳನ್ನು ಮಾತ್ರ ತೋರಿಸಿ, ಫಲಬಿಡದೆ ಇರುವ ವೃಕ್ಷಗಳಂತೆ ಆ ಫಲಶ್ರುತಿಗಳೆಲ್ಲವೂ, ಮೇಲೆಮೇಲೆ ಕಿವಿಗಿಂಪಾಗಿಮಾತ್ರ ತೋರತಕ್ಕ ವುಗಳೆಂಬುದನ್ನು ತತ್ವಜ್ಞರು ಚೆನ್ನಾಗಿ ಬಲ್ಲರು. ಕಾಮಿಗಳಾದರೋ ಸ್ವರ್ಗಾದಿಫಲಗಳಲ್ಲಿಯೇ ಆಸೆಯುಳ್ಳವರಾದುದರಿಂದ, ಕೇವಲ ಪಾಡಂ