ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೯ ಅಧ್ಯಾ, ೨೧.] ಏಕಾದಶಸ್ಕಂದವು. ಬರವನ್ನೇ ಫಲವೆಂದು ಭ್ರಮಿಸತಕ್ಕ ಮೂಢರಂತೆ, ಸ್ವರ್ಗಾದಿಗಳನ್ನೇ ತಮಗೆ ಪುರುಷಾರವೆಂದು ತಿಳಿದು, ಅಗ್ನಿ ಮೂಲಕವಾದ ಯಜ್ಞಾದಿಕರಗ ಳಲ್ಲಿ ಪ್ರವರ್ತಿಸಿ, ಅನವರತವೂ ಹೊಗೆಯನ್ನು ಕುಡಿಯುತ್ತ, ಆ ಕರಗಳಿ ಗಾಗಿ ಪಡಬಾರದ ಕಷ್ಟಗಳನ್ನನುಭವಿಸುವರು. ಹೀಗೆ ಕರವಶರಾಗಿ, ಇಂದ್ರಿಯತೃಪ್ತಿಯಲ್ಲಿಯೇ ಆತುರವುಳ್ಳರು, ಕತ್ತಲೆ ಕವಿದಕಣ್ಣುಳ್ಳವರು ಸನ್ನಿಹಿತವಾದುದನ್ನೂ ತಿಳಿಯಲಾರದಂತೆ, ತಮ್ಮ ಹೃದಯದಲ್ಲಿಯೇ ಇ ರುವ ನನ್ನ ನಾಗಲಿ ತಮ್ಮ ಆತ್ಮಸ್ವರೂಪವನ್ನಾಗಲಿ ತಿಳಿಯಲಾರರು. ಎಲ್ಲ ರಿಗೂ ಸುಲಭಗ್ರಾಹ್ಯವಲ್ಲದ ಈ ಮತವನ್ನು ತಿಳಿಯದೆ, ಕೇವಲವಿಷಯ ಪ್ರವಣರಾದ ಕೆಲವುನಾಸ್ತಿಕರು, ಯಾಗವೆಂಬ ನೆಪದಿಂದ ವ್ಯರ್ಥವಾಗಿ ಪಶುಗಳನ್ನು ಕೊಲ್ಲುವುದುಂಟು. ಅಂತವರು ಮೃತಿಹೊಂದಿದಮೇಲೆ, ಇಲ್ಲಿ ಅವರಿಂದ ಕೊಲ್ಲಲ್ಪಟ್ಟ ಪಶುಗಳೇ, ಪರಲೋಕದಲ್ಲಿ ತೋಳ ಮೊದಲಾದ ಕ್ರೂರಮೃಗಗಳ ಸ್ವರೂಪದಿಂದ ಬಂದು, ಅವರನ್ನು ಬಾಧಿಸುವವು. ಮಾಂಸಭಕ್ಷಣದಲ್ಲಿ ಆಸೆಯಿಂದ ಯಾಗವನ್ನೇ ನೆಪವಾಗಿಟ್ಟುಕೊಂಡು ಕೊರಕೃತ್ಯವನ್ನು ಮಾಡತಕ್ಕವರಿಗೆ, ಪ್ರಾಣಿಹಿಂಸೆಯೇ ಒಂದು ಮಹೋತ್ಸವದಂತಿರುವುದು. ತಮ್ಮ ಸುಖಕ್ಕಾಗಿ ಯಾಗವೆಂಬ ನೆಪದಿಂದ ಪಶುಗಳನ್ನು ಕೊಂದು, ದೇವತೆಗಳನ್ನೂ,ಪಿತೃಗಳನ್ನೂ , ಭೂತಪತಿಗಳನ್ನೂ ಯಜಿಸತಕ್ಕವರನ್ನು ಕ್ರೂರಕರ್ಮಿಗಳೆಂದು ಹೇಳುವುದರಲ್ಲಿ ಸಂದೇಹವೇ ನಿದೆ ? ಹೀಗೆ ನಾಸ್ತಿಕಬುದ್ಧಿಯಿಂದ ಯಜ್ಞಗಳನ್ನು ನಡೆಸತಕ್ಕವರ ಸಂಗ ತಿಯು ಹಾಗಿರಲಿ ! ಒಂದುವೇಳೆ ಆಸ್ತಿಕೈಬುದ್ಧಿಯಿಂದಲೇ ಯಜ್ಞಗಳನ್ನು ನಡೆಸಿದರೂ, ಅದರಿಂದ ತಾನೇ ಅವರಿಗೆ ಯಾವಸುಖವುಂಟು ? ಲೋಭ ಬುದ್ದಿಯುಳ್ಳ ಒಬ್ಬ ವರ್ತಕನು, ಇನ್ನೂ ವಿಶೇಷವಾಗಿ ಹಣವನ್ನು ಸಂಪಾ ದಿಸಬೇಕೆಂಬ ದುರಾಶೆಯಿಂದ, ಮೊದಲು ತಾನು ಗಳಿಸಿಟ್ಟ ಧನವನ್ನೆಲ್ಲಾ ಹಡಗಿನ ವ್ಯಾಪಾರದಲ್ಲಿಟ್ಟು ಸಮುದ್ರದಲ್ಲಿ ಹೋಗುತ್ತಿರುವಾಗ, ಆಕಸ್ಮಿಕ ವಾಗಿ ಆ ಹಡಗು ಮುಳುಗಿಹೋದರೆ ಅವನ ಗತಿಯೇನು ? ಅವನ ಆಸೆಗೂ ಭಂಗವಾಗಿ, ಮೊದಲಿದ್ದ ಹಣವೂ ಹೋದುದರಿಂದ ಉಭಯಭ್ರಷ್ಟನಾದ ನಲ್ಲವೆ ? ಹಾಗೆಯೇ ಕರಫಲಗಳಲ್ಲಿ ಆಸೆಯುಳ್ಳವರು, ಸಪ್ನದಂತೆ ಆನಿತ್ಯ