ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೮೦ ಶ್ರೀಮದ್ಭಾಗವತವು [ಅಧ್ಯಾ, ೨೧. ಗಳಾಗಿಯೂ, ಕಿವಿಯಿಂದ ಕೇಳುವಾಗಮಾತ್ರ ಆಸೆಹುಟ್ಟಿಸತಕ್ಕವುಗಳಾ ಗಿಯೂ, ವಾಸ್ತವದಲ್ಲಿ ಅಪಾಯಗಳಾಗಿಯೂ ಇರುವ ಸ್ವರ್ಗಾದಿ ಸುಖಗಳಿಗಾಗಿಯೂ, ಇತರಕಾಮಗಳಿಗಾಗಿಯೂ ಆಸೆಪಟ್ಟು ತಮ್ಮಲ್ಲಿ ರುವ ಥನವನ್ನೂ ಕಾಮಸಾಧಕಗಳಾದ ಯಜ್ಞಾದಿಕರ್ಮಗಳಿಗೆ ವಿನಿಯೋ ಗಿಸಿ, ಕೊನೆಗೆ ಉಭಯಭ್ರಷ್ಟತೆಯಿಂದ ದುಃಖಕ್ಕೆ ಪಾತ್ರರಾಗುವರು. ಉವಾ ! ಮುಖ್ಯವಾಗಿ, ರಜಸ್ಸು, ಸತ್ವ, ತಮಸ್ಸುಗಳೆಂಬ ಮೂರು ಗುಣಗಳಲ್ಲಿ ಯಾರುಯಾರಿಗೆ ಯಾವಯಾವಗುಣವು ಸಹಜವೋ, ಅವರು ಆಯಾಗುಣಕ್ಕೆ ತಕ್ಕತಕ್ಕೆ ಕರಗಳಲ್ಲಿಯೇ ನಿರತರಾಗಿ, ತಮ್ಮ ಗುಣಗಳಿಗೆ ಅನುರೂಪರಾದ ಇಂದ್ರಾದಿದೇವತೆಗಳನ್ನೇ ಉಪಾಸಿಸುವರು. ಹಾಗೆ ಇಂದ್ರಾದಿಗಳನ್ನು ಉಪಾಸನೆಮಾಡಿದರೂ, ಅವರನ್ನೂ ಭಗವದಾತ್ಮಕ ರೆಂದೇ ಭಾವಿಸಿ ನಡೆಸಿದರೆ ಅದು ಸರಿಯಾದ ಉಪಾಸನವೆನಿಸಿಕೊಂಡು ಫಲಕಾರಿಯಾಗಬಹುದು. ಹಾಗಿಲ್ಲದಿದ್ದರೆ ಅವರು ನಡೆಸತಕ್ಕ ಉಪಾಸ ನವು ಯಥಾಯೋಗ್ಯವಾದುದಲ್ಲ. ನನ್ನನ್ನು ಸಾಕ್ಷಾತ್ತಾಗಿಯೂ ಅವರು ಉಪಾಸಿಸತಕ್ಕವರಲ್ಲ. ಆದರೆ ಆಕಾಮ್ಯಕರ್ಮಗಳಲ್ಲಿ ಬಿದ್ದವರಮನೋರಥಗ ಳಾದರೋ ಅಪಾರವಾಗಿರುವುವು. ಅವರು ಕರ್ಮಗಳನ್ನಾರಂಭಿಸುವಾಗಲೇ ತಮ್ಮಲ್ಲಿ ತಾವು ಇಲ್ಲಿ ನಾವು ಈ ಯಜ್ಞಾದಿಕರ್ಮಗಳಿಂದ ದೇವತೆಗಳ ನಾರಾಧಿಸಿದರೆ, ಸ್ವರ್ಗಕ್ಕೆ ಹೋಗಿ ಅಲ್ಲಿ ಬೇಕಾದ ಭೋಗಗಳನ್ನನುಭವಿಸ ಬಹುದು. ಆ ಭೋಗವು ತೀರಿದಮೇಲೆ ತಿರುಗಿ ಇಹಲೋಕಕ್ಕೆ ಬಂದರೂ ನಮಗೆ ಕೊರತೆಯೇನೂ ಇರದು. ದೊಡ್ಡ ಮನೆತನದಲ್ಲಿ ಹುಟ್ಟಿ, ದೊಡ್ಡ ಗೃಹಾಧಿಪತಿಗಳಾಗಿದ್ದು, ತಿರುಗಿ ಕರಗಳನ್ನು ನಡೆಸಿ, ತಿರುಗಿ ಸ್ವರ್ಗಸುಖ ನನ್ನನುಭವಿಸಬಹುದು.” ಎಂಬಿವೇ ಮೊದಲಾಗಿ, ಕರ ಕಾಂಡದಲ್ಲಿ ಪ್ರತಿ ಪಾದಿಕಗಳಾದ ಕರಫಲಗಳಿಗೆ ಮರುಳಾಗಿ,ಆ ವ್ಯ-ಮನೋರಥಗಳಿಂದಲೇ ಹಿಗ್ಗುತ್ತ, ತಮಗೆ ಸಮಾನರಿಲ್ಲವೆಂದು ಹೆಮ್ಮೆಯಿಂದ ಬೀಗುತ್ತಿರುವರು. ಇಂತವರಿಗೆ ನನ್ನ ವಿಷಯವಾದ ಮಾತೇ ರುಚಿಸದು. ಹೀಗಿರುವಾಗ ಅವರಿಗೆ ಸಂಸಾರಬಂಧದಿಂದ ವಿಮೋಚನವಾಗುವ ಬಗೆಯೇನು ? ವೇದಗಳು ಕಡೆ ಕಾಂಡ, ಜ್ಞಾನಕಾಂಡ, ಬ್ರಹ್ಮ ಕಾಂಡಗಳೆಂಬ ಮೂರುಬಗೆಯ ವಿಷಯ