ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೪ ಶ್ರೀಮದ್ಭಾಗವತವು [ಅಧ್ಯಾ, ೨೨. ಬುದನ್ನು ಈಗ ನಿನಗೆ ಸ್ಪಷ್ಟವಾಗಿ ತೋರಿಸುವೆನು ನೋಡು. ದುರತಿಕ್ರ ಮಗಳಾದ ನನ್ನ ಶಕ್ತಿಯೇ ಹೀಗೆ ಪ್ರಕೃತಿ ಮಹದಹಂಕಾರಾದಿರೂಪದಿಂದ ಅನೇಕ ವಿಧವಾಗಿ ಪ್ರಸರಿಸಿ, ಈ ವಿಧವಾದ ವಾದಗಳಿಗೆಲ್ಲಾ ಮೂಲವಾಗಿರು ವುದೆಂಬುದನ್ನು ಎಲ್ಲರೂ ಒಪ್ಪಿಕೊಂಡೇ ತೀರಬೇಕು. ಈ ಶಕ್ತಿಗಳೇ ಒಂದು ಸ್ಥಿತಿಯಲ್ಲಿ ಒಂದರಲ್ಲೊಂದು ಅಂತರ್ಭೂತವಾಗಿಯೂ, ಮತ್ತೊಂದುದಕ್ಕೆ ಯಲ್ಲಿ ಬೇರಾಗಿಯೂ ಇರುವುದರಿಂದ, ಅವರವರಿಗೆ ತೋರಿದಂತೆ ಪಕ್ಷಭೇದ ಗಳು ಹೊರಟಿರುವುವು. ಶಮದಮಾದಿಗುಣವುಳ್ಳವನಿಗೆ ಜಗತ್ತೆಲ್ಲವೂ ಮ ದಾತ್ಮಕವಾಗಿಯೇ ತೋರುವುದರಿಂದ, ಅಂತವನಲ್ಲಿ ಮೇಲೆ ಹೇಳಿದ ವಿಕಲ್ಪ ವಾಗಿತನ್ಮೂಲಕಗಳಾದ ವಾದಗಳಾಗಲಿ ತಲೆದೋರಲಾರವು ತತ್ವಗಳು ಒಂದರಲ್ಲಿ ಮತ್ತೊಂದು ಅಡಗಿರುವುದರಿಂದ, ವಾದಿಗಳು ತಮ್ಮ ತಮ್ಮ ಮನೋಭಾವನೆಗೆ ತಕ್ಕಂತೆ ವಿಭಾಗಿಸಿ, ಅವುಗಳ ಸಂಖ್ಯೆಯನ್ನು ಹೆಚ್ಚಿಸಿ ಯೂ, ತಗ್ಗಿಸಿಯೂ ಹೇಳುವರು, ಪಾರ್ಥಿವದ್ರವ್ಯವಾದ ಕಟ್ಟಿಗೆಯಲ್ಲಿ, ಬೆಂಕಿ, ನೀರು ಮೊದಲಾದ ಇತರದ್ರವ್ಯಗಳು ಕಲೆತಿರುವಂತೆ, ಒಂದು ತತ್ವ ದಲ್ಲಿ ಬೇರೆ ಹಲವು ತತ್ವಗಳು ಅಂತರ್ಭೂತವಾಗಿರುವುದುಂಟು. ಇದೂ ಅಲ್ಲದೆ ತತ್ವಗಳೆಲ್ಲವೂ ಒಂದರಿಂದೊಂದು ಹುಟ್ಟಿದುವ್ರಗಳಾದುದರಿಂದ, ಕಾರಣಭೂತವಾದ ತತ್ವದಲ್ಲಿಯಾಗಲಿ, ಕಾರಭೂತವಾದ ತತ್ವದಲ್ಲಿಯಾಗ ತಿ, ಬೇರೆ ಎಲ್ಲಾ ತತ್ವಗಳ ಅಂಶವೂ ಅಂತರ್ಗತವಾಗಿಯೇ ಇರುವುದು. ಆದುದರಿಂದ ಈ ತತ್ವಗಳನ್ನು ಅನೇಕರು ಅವರವರ ಇಷ್ಟಾನುಸಾರವಾಗಿ ವಿಭಾಗಿಸಿ, ನ್ಯೂನಾಧಿಕಸಂಖ್ಯೆಗಳನ್ನು ಹೇಳಿರುವರು ಆದರೇನು ? ಯು ಕೈಯಿಂದ ಅವರವರ ಮತಗಳನ್ನೇ ಸರಿಯೆಂದು ಸಮಸಬಹುದು. ಹೇ ಗೆಂದರೆ, ಪ್ರಧಾನವಾದ ಒಂದು ತತ್ವದಲ್ಲಿ ಇತರತತ್ವ ಗಳನ್ನ ಡಗಿಸಿ ಹೇಳು ವುದರಿಂದ ಸಂಖ್ಯೆಯು ತಗ್ಗುವುದು. ಅವುಗಳನ್ನೇ ಪ್ರತ್ಯೇಕಿಸಿ ಹೇಳುವಾಗ ಸಂಖ್ಯೆಯು ಹೆಚ್ಚುವುದು. ಇದೇರೀತಿಯಾಗಿ ಎಲ್ಲರ ಪಕ್ಷವನ್ನೂ ಸಮಗ್ಗಿಸ ಬಹುಮ. ಇವುಗಳಲ್ಲಿ ಇಪ್ಪತ್ತಾರುತತ್ವಗಳೆಂದು ಹೇಳುವವರು, ಪ್ರಕೃತಿ ಮೊದಲಾದ ಇಪ್ಪತ್ತು ನಾಲ್ಕು ತತ್ವಗಳೊಡನೆ ಜೀವೇಶ್ವರರೆಂಬ ಎರಡು