ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ., ೨೨) | ಏಕಾದಶಸ್ಕಂಧನ. ೨೮೫ ತತ್ವಗಳನ್ನು ಸೇರಿಸಿ ಇಪ್ಪತ್ತಾರುಸಂಖ್ಯೆಯನ್ನು ತೋರಿಸುವರು. ಜೀವೇ ಶ್ವರರನ್ನು ಪ್ರತ್ಯೇಕತತ್ವಗಳಾಗಿ ಹೇಳುವುದಕ್ಕೆ ಇವರು ತೋರಿಸುವ ಕಾ ರಣಗಳೇನೆಂದರೆ, ಜೀವನ ಅನಾದಿಯಾಗಿ ಅವಿದ್ಯೆಯಿಂದ ಆವರಿಸಲ್ಪಟ್ಟ ವನು. ಈಶ್ವರನಾದರೋ ಸ್ವತಃ ಸರೂಜ್ಯನು. ಹೀಗೆ ಅವಿದ್ಯೆಯಿಂದ ದೇಹಾತ್ಮಭಮವುಳ್ಳ ಜೀವನಿಗೆ ಆತ್ಮಸ್ವರೂಪಜ್ಞಾನವು ಆ ಈಶ್ವರಾ ನುಗ್ರಹದಿಂದ ಲಭಿಸಬೇಕಲ್ಲದೆ ಸ್ವತಃ ಸಂಭವಿಸದು ಈಶ್ವರನು ಸರೂವಿಷ ಯದಲ್ಲಿಯೂ ತಾನೇ ಪ್ರಾಜ್ಞನಾಗಿರುವನಲ್ಲದೆ, ಜೀವನಿಗೆ ಜ್ಞಾನಪ್ರದಾ ನವನ್ನೂ ಮಾಡಬಲ್ಲದು. ಆದುದರಿಂದ ಜೀವೇಶ್ವರರಿಬ್ಬರನ್ನೂ ಪ್ರತ್ಯೇಕ ತತ್ವಗಳನ್ನಾಗಿಯೇ ಹೇಳಬೇಕೆಂಬುದು ತತ್ವಗಳನ್ನು ಇಪ್ಪತ್ತಾರೆಂದು ಹೇ ಳುವವರ ಪಕ್ಷವು. ಇಪ್ಪತ್ತೈದು ತತ್ವಗಳೆಂದು ಹೇಳುವವರು, ಜೀವೇಶ್ವರರಿಬ್ಬರನ್ನೂ ಒಂದೇತತ್ವವನ್ನಾಗಿ ಸೇರಿಸಿ ಹೇಳುವರು. ಹೀಗೆ ಒಂದೇ ತತ್ವವನ್ನಾಗಿ ಹೇಳುವುದಕ್ಕೆ ಇವರು ನಿರೂಪಿಸುವ ಕಾರಣವೇನೆಂದರೆ, ಜೀವೇಶ್ವರರಿಗೆ ಆಜ್ಞತ್ವಪ್ರಾಜ್ಞತ್ವಗಳೆಂಬ ವೈ. ರವಿದ್ದರೂ, ಸ್ವರೂಪಸ್ವಭಾವಾಡಿಗ ಇಲ್ಲಿ ವೈಲಕ್ಷಣ್ಯವೇನೂ ಇಲ್ಲದುದರಿಂದ, ಜೀವೇಶ್ವರರನ್ನು ಪ್ರತ್ಯೇಕಿಸಿ ಹೇಳುವುದು ಯುಕ್ತವಲ್ಲ. ಜೀವನಿಗೆ ಅಜ್ಞಾನವೆಂಬುದು ಪ್ರಕೃತಿಸಂಬಂಧ ದಿಂದ ಆಗಂತುಕ ವಾಗಿ ಬರುವುದೇ ಹೊರತು ಸಹಜವಲ್ಲ. ಇದಲ್ಲದೆ ಮುಕ್ತಿ ದಶೆಯಲ್ಲಿ ಜೀವಸಿಗೆ ಈಶ್ವರನೊಡನೆ ಸಾಮ್ಯವುಂಟಾಗುವುದು. ಮತ್ತು ಜೀ ವನು ಪರಮಾತ್ಮನಿಗೆ ಶರೀರಭೂತನಾದುದರಿಂದ, ಪರಮಾತ್ಮನ ಅಂಶವೆಸಿ ಸುವನು. ಆದುದರಿಂದ ಜೀವೇಶ್ವರರಿಬ್ಬರನ್ನೂ ಒಂದೇ ತತ್ವವನ್ನಾಗಿ ಸೇರಿ ಸಬೇಕೆಂದು ನಿರೂಪಿಸಿ, ಇಪ್ಪತ್ತೈದುತತ್ವಗಳೆಂದು ಹೇಳುವರು. ಆದರೆ ಜೀವನಿಗೆ ಸತ್ತಾಗುಣಗಳಿಂದುಂಟಾದ ವೈಷಮ್ಯವುಂಟು? ಈಶ್ವರನಿಗೆ ಆಡಿಲ್ಲದುದರಿಂದ ಈ ಭಾಗದಲ್ಲಿಯಾದರೂ ಜೀವೇಶ್ವರರಿಗೆ ವೈಲಕ್ಷಣ್ಯ ವಿದ್ದೇ ಇರಬೇಕಲ್ಲವೆ ?” ಎಂದರೆ, ಸಾರಿಗುಣಗಳ ಸಾಮ್ಯಾವಸ್ಥೆಯುಳ್ಳ ಅಚಿವ್ಯವೇ ಪ್ರಕೃತಿಯೆನಿಸುವುದು. ಸೃಷ್ಟಿ ಸ್ಥಿತಿ ಲಯ ಕಾರಣಗ ಳಾದ ಆ ಮೂರುಗುಣಗಳೂ ಪ್ರಕೃತಿಗೆ ಸಂಬಂಧಿಸಿದುವೇ ಹೊ