ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೭ ಅಧ್ಯಾ, ೨೨.] ಏಕಾದಶಸ್ಕಂಧನು. ಶಬ್ದ, ಗಂಧ, ರಸ, ಸ್ಪರ್ಶಗಳೆಂಬ ಜ್ಞಾನೇಂದ್ರಿಯವಿಷಯಗಳು, ನಡೆ, ನುಡಿ, ಕಲಸ,ಮಲ ಮೂತ್ರ ವೀರೊತ್ಸರ್ಜನಗಳೆಂಬ ಕರೀಂದ್ರಿಯ ವ್ಯಾ ಪಾರಗಳು, ಇಷ್ಟರಿಂದಲೆ ಈ ವ್ಯಷಿಪ್ರಪಂಚನಿರಾಣವು. ಇವೆಲ್ಲಕ್ಕೂ ಬೀಜಭೂತವಾದುದು ಪ್ರಕೃತಿಯೇ ಸೃಷ್ಮಾರಂಭದಲ್ಲಿ ಆ ಪ್ರಕೃತಿಯೇ, ಸತ್ತಾಗುಣಗಳೊಡನೆ ಕಲೆತು, ಮಹತ್ತು ಮೊದಲಾದ ಕಾರಣರೂಪ ದಿಂದಲೂ, ಆಕಾಶಾದಿಕಾರರೂಪದಿಂದಲೂ ವ್ಯಕ್ತವಾಗಿ, ವ್ಯಷಿಪ್ರಪಂ ಚವನ್ನುಂಟುಮಾಡುವುದು ಆದರೆ ಈ ಪ್ರಕೃತಿಗೂ ತಾನಾಗಿ ಪ್ರಪಂಚವ ನ್ನು ಂಟುಮಾಡುವ ಶಕ್ತಿಯಿಲ್ಲ.ಇಂದ್ರಿಯಗಳಿಗೆ ಅಗೋಚರನಾಗಿಯೂ,ವೇ ದಾಂತೈಕವೇದ್ಯನಾಗಿಯೂ ಇರುವ ಸತ್ಯೇಶ್ವರನು,ಸೃಷ್ಟಿಗಾಗಿ ಸಂಕಲ್ಪಿಸಿ ತನ್ನ ಕಣ್ಣಿಂದ ನೋಡಿದೊಡನೆ, ಆ ಪ್ರಕೃತಿಯಿಂದ ಪ್ರಪಂಚಸೃಷ್ಟಿಯು ಆರಂಭವಾಯಿತು. ಹೀಗೆ ಆ ಪರಮಪುರುಷನ ವೀಕಣದಿಂದ ಹುಟ್ಟಿದ ಮ ಹದಾ ತತ್ವಗಳೂ ಕೂಡ, ಆತನ ವೀಕ್ಷಣದಿಂದಲೇ ಸೃಷ್ಟಿ ಸಾಮರವನ್ನು ಪಡೆದು ಒಂದಕ್ಕೊಂದು ಸಂಮಿಳಿತವಾಗಿ ವಿಕಾರಹೊಂದುತ್ವ, ತಮಗೆ ಕಾರಣವಾದ ಪ್ರಕೃತಿ ಯಬಲದಿಂದ ಬ್ರಹ್ಮಾಂಡವನ್ನು ಸೃಷ್ಟಿಸುವುವು. ಇದು ಸೃಷ್ಟಿಕ್ರಮವು ತತ್ವಗಳು ಏಳೆಂದು ಹೇಳುವವರಪಕ್ಷದಲ್ಲಿ ಆಕಾಶಾದಿಭೂತಗಳ್ಳಿ ದೂ, ಜ್ಞಾನಸ್ವರೂಪನಾದ ಜೀವಸೂ, ಆ ಜೀವನಿಗೂ ಆಕಾಶಾದಿಭ ತಗಳಿಗೂ ಆಧಾರನಾದ ಪರಮಾತ್ಮನೂ ಸೇರಿ, ಏಳುತತ್ವಗಳಾಗುವುವು. ಈ ಏಳುತತ್ವಗಳಲ್ಲಿಯೇ ದೇಹೇಂದ್ರಿಯಪ್ಪಾಣಾದಿಗಳೆಲ್ಲವೂ ಅಂತರ್ಗತಗಳಾ ಗುವುವು. ಏಕೆಂದರೆ, ದೇಹೇಂದ್ರಿಯಾದಿಗಳೊಂದೊಂದೂ ಆಕಾಶಾದಿ ತತ್ವಗಳೊಡನೆ ಕಲೆತೇ ಇರಬೇಕು. ಹೀಗೆ ಪರಸ್ಪರಾನುಪ್ರವೇಶವಿರುವುದರಿo ದ, ಈ ಸಪ್ತಸಂಖ್ಯೆಯಲ್ಲಿಯೇ ಎಲ್ಲಾ ತತ್ವಗಳನ್ನೂ ಹೇಳಿದಂತಾಗುವುದು. ತತ್ವಗಳು ಆರೇ ಎಂದು ಹೇಳುವವರು, ಆಕಾಶಾದಿಗಳೆದು, ಪರಮ ಪುರುಷನೊಬ್ಬನು,ಇವಾರೇ ತತ್ವಗಳೆಂದು ನಿರ್ಣಯಿಸುವರು. * ಆ ಪರಮ

  • ಇಲ್ಲಿ ಜೀವನಿಗೆ ಪರಮಾತ್ಮನಲ್ಲಿ ಶರೀರರಸದಿಂದ ಅಂತರ್ಭಾವವು, ದೇಹೇಂ ಯಾದಿಗಳಿಗೆ ಆಕಾಶಾದಿಗಳಲ್ಲಿ ಅಂತರ್ಭಾವವು.

- - - -