ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೯೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


986 ಶ್ರೀಮದ್ಭಾಗವತರ [ಅಧ್ಯಾ, ೨೨. ಪುರುಷನು, ತನ್ನಿಂದ ಸೃಷ್ಟವಾದ ಆ ಆಕಾಶಾದಿಭೂತಗಳೊಡಗೂಡಿ, ಅವುಗಳಿಂಲೇ ವ್ಯಷಿಪ್ರಪಂಚವನ್ನು ವಿಸ್ತರಿಸಿ, ಅವುಗಳಲ್ಲಿಯೂ ತಾನೇ ಅಂತರಾತ್ಮನಾಗಿದ್ದು, ಅವುಗಳ ಸ್ಥಿತಿಗತಿಗಳನ್ನು ನಿರ್ವಹಿಸುವನು. ನಾಲೈ ತತ್ವಗಳೆಂದು ಹೇಳುವವರು, ಪರಮಾತ್ಮನಿಂದ ತೇಜಸ್ಸು ನೀರು, ಅನ್ನ (ಭೂಮಿ) ವೆಂಬೀ ಮೂರುತತ್ವಗಳು ಹಟ್ಟಿದುದಾಗಿಯೂ, ಪರಮಾತ್ಮನೂ, ಆ ಮೂರುತತ್ವಗಳೂ ಸೇರಿ ನಾಲ್ವೇತತ್ವಗಳೆಂದೂ ಈ ನಾಲ್ಕರಿಂದಲೇ ಸಕಲಪ್ರಪಂಚನಿರ್ಮಾಣವೆಂದೂ ನಿರೂಪಿಸುವರು. ಹನ್ನೊಂದುತತ್ವಗಳೆಂದು ಹೇಳುವರು, ಪಂಚಮಹಾಭೂತಗಳ ನ್ಯೂ , ಪಂಚೇಂದ್ರಿಯಗಳನ್ನೂ , ಪರಮಾತ್ಮನನ್ನೂ ಸೇರಿಸಿ ಹನ್ನೊಂದು ತತ್ವಗಳೆಂದು ನಿರ್ಣಯಿಸಿರುವರು. ಉಳಿದ ತತ್ವಗಳಿಗೆ ಈ ಹನ್ನೊಂದರಲ್ಲಿ ಯೇ ಅಂತರ್ಭಾವವು. ಹದಿನೇಳುತತ್ವಗಳೆಂದು ಹೇಳುವವರು, ಪಂಚಮಹಾಭೂತಗಳು, ಪಂಚತನ್ಮಾತ್ರಗಳು, ಪಂಚೇಂದ್ರಿಯಗಳು, ಮನಸ್ಸು, ಪರಮಾತ್ಮನೆಂಬ ವಿಭಾಗವನ್ನು ತೋರಿಸಿ, ಹದಿನೇಳುತತ್ವಗಳೆಂದೂ, ಉಳಿದ ತತ್ವಗಳೆಲ್ಲವೂ ಇವುಗಳಲ್ಲಿಯೇ ಅಂತರ್ಗತಗಳೆಂದೂ ಹೇಳುವರು. ಹದಿನಾರು ತತ್ವಗಳೆಂದು ಹೇಳುವವರೂ, ಮೇಲಿನಂತೆಯೇ ವಿಭಾಗ ಗಳನ್ನು ಮಾಡಿ, ಮನಸ್ಸನ್ನು ಮಾತ್ರ ಪ್ರತ್ಯೇಕಿಸದೆ, ಅದಕ್ಕೆ ಆತ್ಮನಲ್ಲಿಯೇ ಅಂತರ್ಭಾವವನ್ನು ಹೇಳುವರು. - ಹದಿಮೂರು ತತ್ವಗಳೆಂದು ಹೇಳುವವರು, ಪಂಚಭೂತಗಳನ್ನೂ, ಪಂಚೇಂದ್ರಿಯಗಳನ್ನೂ, ಪ್ರಾಣವನ್ನೂ , ಮನಸ್ಸನ್ನೂ , ಆತ್ಮವನ್ನೂ ಸೇ ರಿಸಿ ಹದಿಮೂರುಸಂಖ್ಯೆಯಾಗಿ ವಿಭಾಗಿಸುವರು. ಹೀಗೆಯೇ ಮೂರೇತತ್ವಗಳೆಂದು ಹೇಳುವವರಪಕ್ಷದಲ್ಲಿ, ಚಿತ್ತು, ಅಚಿತ್ತು ಈಶ್ವರನೆಂದು ಮೂರೇವಿಭಾಗವು, ನಾಲ್ಕು ತತ್ವಗಳೆಂದು ಹೇಳುವ ವರು, ಈ ಮೂರರೊಡನೆ ವಾಯುವನ್ನು ಪ್ರತ್ಯೇಕವಾಗಿ ಹೇಳುವರು. ಐದು ತತ್ವಗಳೆಂದು ಹೇಳುವವರು, ಪೃಥಿವಿ, ಅಪ್ಪ ತೇಜಸ್ಸು, ವಾಯು, ಪರಮಾತ್ಮನೆಂಬ ಐದು ವಿಭಾಗವನ್ನು ಮಾಡಿರುವರು,