ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೧೯೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ, ೨.] ಏಕಾದಶಸ್ಕಂಧನ, ೮೯ ಉದ್ಯವಾ ! ಹೀಗೆ ಪುರಾತನಮಹರ್ಷಿಗಳು ತತ್ವಗಳ ಸಂಖ್ಯೆಯನ್ನು ಬೇರೆಬೇರೆ ವಿಧವಾಗಿ ನಿರ್ಣಯಿಸಿದ್ದರೂ,ಯುಕ್ತಿಯಿಂದ ಅವೆಲ್ಲವನ್ನೂ ಸಮ ರ್ಥನಮಾಡಬಹುದು. ಹೇಗೆಂದರೆ, ಕೆಲವನ್ನು ಪ್ರಧಾನತತ್ವಗಳನ್ನಾಗಿ ಹೇಳಿ, ಬೇರೆ ಕೆಲವನ್ನು ಆವುಗಳಲ್ಲಿ ಅಂತರ್ಗತಗಳನ್ನಾಗಿ ಮಾಡುವುದರಿಂದ ತತ್ವಗಳ ಸಂಖ್ಯೆಯು ತಗ್ಗುವುದು. ಆ ತತ್ವಗಳನ್ನೇ ಪ್ರತ್ಯೇಕಿಸಿ ಹೇಳುವುದ ರಿಂದ ಸಂಖ್ಯೆಯು ಹೆಚ್ಚುವುದು. ವಿದ್ವಾಂಸರಿಗೆ ಯುಕ್ತಿಯಿಂದ ಅಸಾಧ್ಯ ವಾದುದೊಂದಿಲ್ಲ” ಎಂದನು. ಉದ್ದವನು ತಿರುಗಿ ಪ್ರಶ್ನೆ ಮಾಡುವನು. (( ಕೃಷ್ಟ ! ಹಿಂದೆ ಹೇಳಿ ದ ನಾನಾಬಗೆಯ ತತ್ವವಿಭಾಗಗಳಲ್ಲಿ, ಪ್ರಕೃತಿಪುರುಷರಿಬ್ಬರನ್ನೂ ಪ್ರತ್ಯೇ ಕತತ್ವಗಳನ್ನಾಗಿಯೇ ತೋರಿಸಿರುವರಷ್ಟೆ? ಈ ವಿಚಾರದಲ್ಲಿ ನನಗೆ ಸಂದೇಹ ವು ತೋರುವುದು. ಪ್ರಕೃತಿಪುರುಷರಿಗೆ ಸಹಜವಾಗಿ ಸ್ವರೂಪದಲ್ಲಿ ಪರ ಸ್ಪರವೈಲಕ್ಷಣ್ಯವಿದ್ದರೂ, ಅವೆರಡರಲ್ಲಿ ಒಂದನ್ನು ಬಿಟ್ಟು, ಮತ್ತೊಂದು ಪ್ರ ತ್ಯೇಕವಾಗಿರುವಂತೆ ಎಲ್ಲಿಯೂ ಕಾಣಿಸುವುದಿಲ್ಲ. ಎಂದರೆ, ಪ್ರಕೃತಿಕಾರ ವಾದ ದೇಹದೊಡನೆಯೇ ಆತ್ಮವಿರುವುದು. ಆತ್ಮನೊಡನೆಯೇ ದೇಹವಿರು ವುದು. ಒಂದನ್ನು ಬಿಟ್ಟು ಮತ್ತೊಂದು ಕಾಣಿಸದು. ಇದಲ್ಲದೆ ಸಹಜವಾಗಿ ದೇಹಿಗೆ, “ನಾನು ದೇವನು,” ನಾನು ಮನುಷ್ಯನು” ಎಂದು, ದೇಹದೊ ಡನೆ ಆತ್ಮಕ್ಕೆ ಅಭೇದವೇ ತೋರುತ್ತಿರುವುದು. ಇದರಿಂದ ದೇಹಾತ್ಮಗಳಿಗೆ ಭೇದವೇ ಕಾಣಿಸದು. ಹೀಗಿರುವಾಗ ಅವೆರಡನ್ನೂ ಪ್ರತ್ಯೇಕತತ್ವಗಳನ್ನಾ ಗಿ ವಿಭಾಗಿಸುವುದೇಕೆಂದು ನನಗೆ ಸಂದೇಹವು ಹುಟ್ಟಿರುವುದು. ಸೀನು ಸತ್ವ ಜ್ಞನಾದುದರಿಂದ, ಯುಕ್ತಿಯುಕ್ತವಾದ ಉಪಪಾದನದಿಂದ ಈ ನನ್ನ ಸಂದೇಹವನ್ನು ನೀಗಿಸಬೇಕು. ಜೀವಕೋಟಿಯಲ್ಲಿ ಸೇರಿದ ನಮಗೆ, ಆಯಾ ಅರಗಳನ್ನು ಯಥಾಸ್ಥಿತವಾಗಿ ಕಂಡುಕೊಳ್ಳತಕ್ಕ ಜ್ಞಾನವು ಲಭಿಸಬೇಕಾ ದುದು ನಿನ್ನ ಅನುಗ್ರಹಬಲದಿಂದಲೇ ! ಅವರಿಗೆ ನಿನ್ನ ಮಾಯಾಶಕ್ತಿಯಿಂದ ಸಹಜವಾಗಿಯೇ ಜ್ಞಾನವು ಸಂಕುಚಿತವಾಗಿರುವುದು. ನೀನೊಬ್ಬನೇ ಸರ, ಜ್ಞನು, ನಿನ್ನ ಮಾಯೆಯ ಸ್ವರೂಪವನ್ನು ನೀನೇ ತಿಳಿಯಬಲ್ಲವನೇಹೊರತು,