ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೪ ಶ್ರೀಮದ್ಭಾಗವತವು [ಅಧ್ಯಾ. ೨. ನಾಗಿದ್ದರೂ, ನಿನ್ನ ದರ್ಶನಮಾತ್ರದಿಂದಲೇ ನಾವು ಕೃತಾರರಾಗಿದ್ದರೂ, ಒಂದು ವಿಷಯವನ್ನು ನಿನ್ನಿಂದ ಕೇಳಿ ತಿಳಿಯಬೇಕೆಂದಿರುವೆನು. ಓ ಬ್ರಾಹ್ಮ ತಮಾ ! ನೀನು ಭಗವಂತನನ್ನು ನಿನ್ನಲ್ಲಿ ಪ್ರಸನ್ನನನ್ನಾಗಿ ಮಾಡಿ ಕೊಳ್ಳುವುದಕ್ಕಾಗಿ ನಡೆಸಿದ ಧರಗಳಾವುವು ? ನೀನು ನಡೆಸತಕ್ಕ ಆ ದೃಶ್ಯಗಳನ್ನು ಕಿವಿಯಿಂದ ಕೇಳಿದಮಾತ್ರದಲ್ಲಿಯೇ ಮನುಷ್ಯನಿಗೆ ಸಾಂಸಾ ಏಕವಾದ ಭಯವೆಲ್ಲವೂ ನೀಗುವುದು. ಆದರೆ “ಸಾಕ್ಷಾದ್ಭಗವಂತನೇ ನಿನಗೆ ಪುತ್ರನಾಗಿ ಅವತರಿಸಿರುವಾಗಲೂ, ನೀನು ಹೀಗೆ ಸಾಮಾನ್ಯಜನದಂತೆ ಸಂಸಾರಭಯದಿಂದ ಕೊರಗುವುದೇಕೆ ? ” ಎಂದು ನೀನು ನನ್ನನ್ನು ಆಕ್ಷೇ ಪಿಸಬಹುದು. ಆ ಭಗವಂತನು ನನ್ನ ಗರ್ಭದಲ್ಲಿ ಪುತ್ರರೂಪದಿಂದ ಜನಿ ಸಿರುವುದೇನೋ ವಾಸ್ತವವೇ ! ಆದರೇನು ? ಹಿಂದೆ ನಾನು ಆ ಭಗವಂತ ನನ್ನು ಆರಾಧಿಸಿದಾಗ, ಆ ಭಗವಂತನ ಮಾಯೆಯಿಂದಲೇ ಮೋಹಿತನಾಗಿ, ನಾನು ಅವನನ್ನು ಪತ್ರಾರ್ಥಿಯಾಗಿ ಭಜಿಸಿದೆನೇಹೊರತು, ಮೋಕ್ಷಾ ಯಾಗಿ ಭಜಿಸಲಿಲ್ಲ. ನನ್ನ ಅಜ್ಞಾನಕ್ಕೆ ತಕ್ಕಂತೆಯೇ ಅವನೂ ನನ್ನಲ್ಲಿ ಅನು ಗ್ರಹವನ್ನು ತೋರಿಸಿಬಿಟ್ಟನು. ಇಷ್ಟು ಮಾತ್ರಕ್ಕೆ ನಾನು ಕೃತಾರ್ ನಾಗ ಲಿಲ್ಲ ! ಆದುದರಿಂದ ದುಃಖಪ್ರಚುರವಾದ ಈ ಸಂಸಾರದಿಂದ, ನನಗೆ ಶೀಘ್ರದಲ್ಲಿ ಮುಕ್ತಿಯುಂಟಾಗುವ ಉಪಾಯವಾವುದೋ ಅದನ್ನು ತೋರಿಸಿಕೊಡಬೇಕು” ಎಂದು ಪ್ರಾರ್ಥಿಸಿದನು. ವಸುದೇವನು ಹೀಗೆ ಪ್ರಶ್ನೆ ಮಾಡಿದೊಡನೆ, ನಾರದನಿಗೆ ಭಗವಂತನ ಗುಣಗಳ ಸ್ಮರಣೆಯಂ ಲಾಗಿ, ಅವನ ಮನಸ್ಸಿಗೆ ಬಹಳ ಸಂತೋಷವು ಹುಟ್ಟಿತು. ಆಗ ನಾರದನು ವಸುದೇವನನ್ನು ಕುರಿತು ( ಓ ಯದೂತ್ತಮಾ ! ಈಗ ನಿನಗೆ ಹುಟ್ಟಿದ ಈ ಉದ್ದೇಶವು ಅತ್ಯುತ್ತಮವಾದುದು. ಭಾಗವತಧಮ್ಮ ವಿಷಯವಾಗಿ ಈಗ ನೀನು ಕೇಳಿದ ಪ್ರಶ್ನವು, ನಿನಗೆ ಮಾತ್ರವಲ್ಲದೆ, ಇತರಲೋಕಕ್ಕೂ ಅಭ್ಯುದಯಕಾರಣವೆನಿಸಿರುವುದು. ಆ ಭಾಗವತಧಗಳನ್ನು ನಿಯಮ ದಿಂದ ಅನುಷ್ಟಿಸುವುದು ಹಾಗಿರಲಿ ! ಇವುಗಳನ್ನು ಒಂದಾವರ್ತಿ ಕಿವಿ ಯಿಂದ ಹೇಳಿದರೂ, ಬಾಯಿಂದ ಹೇಳಿದರೂ, ಮನಸ್ಸಿನಿಂದ ಸ್ಮರಿಸಿದರೂ, ಆದರಿಸಿದರೂ, ಅನುಮೋದಿಸಿದರೂ, ಭೂತದ್ರೋಹಿಗಳಾದ ಪಾಪಿಗಳ