ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯ ಅಡ್ಯಾ, ೨೨.] ಏಕಾದಶಸ್ಕಂಧವ. ಬೇರೆ ಹೊಸಜ್ವಾಲೆಗಳು ಹೊರಡುತ್ತಿರುವುದನ್ನೂ , ಅಖಂಡವಾದ ಪ್ರವಾ ಹದಲ್ಲಿ ಮೊದಲಿದ್ದ ಜಲಕಣಗಳು ಮುಂದೆಮುಂದೆ ಹೋಗುತ್ತ ಹೊಸ ಹೊಸದಾಗಿ ಜಲಕಣಗಳು ಬರುವುದನ್ನೂ ಕಂಡು ಹಿಡಿಯುವುದು ಸಾ ಧ್ಯವೆ ? ಮತ್ತು ವೃಕ್ಷಗಳಲ್ಲಿ ಹಣ್ಣುಗಳು ಪ್ರತಿಕ್ಷಣವೂ ಪಕ್ವವಾಗುತ್ತ ಬರುವುದನ್ನು ಯಾರು ತಿಳಿಯಬಲ್ಲರು ? ಅದರಂತೆಯೇ ಪ್ರಾಣಿಗಳ ಶರೀರದಲ್ಲಿ ಕಾಲದಿಂದ ನಡೆಯುವ ಅವಸ್ಥಾಭೇದಗಳೂ ತಿಳಿಯಲಾರವು. ಆದರೆ ಕ್ಷಣಕ್ಷಣಕ್ಕೂ ಶರೀರದಲ್ಲಿ ಈ ವಿಕಾರಗಳುಂಟಾಗುತ್ತಿದ್ದ ಮೇಲೆ ( ಅವನೇ ಈ ಬಾಲನು” ಆಗ ಬಾಲನಾಗಿದ್ದವನೇ ಈಗ ಯುವಕನ” ಎಂ ಬವೇ ಮೊದಲಾಗಿ, ಹಿಂದುಮುಂದಿನ ಅವಸ್ಥೆಗಳನ್ನೆಲ್ಲಾ ಒಬ್ಬನಿಗೇ ಹೇಳು ವುದು ಹೇಗೆ” ಎಂದು ಕೇಳುವೆಯಾ? ದೀಪದುರಿಯಲ್ಲಿ, ಹಿಂದೆ ನಷ್ಟವಾದ ಜ್ವಾಲೆಗಳೂಮುಂದೆಮುಂದೆ ಹುಟ್ಟುವ ಜ್ವಾಲೆಗಳೂ ಸಮಾನಗಳಾಗಿಯೇ ಇರುವುದರಿಂದ, ಅದನ್ನು ನೋಡಿದವರು ಮೊದಲಿದ್ದ ದೀಪವೆಂದೇ ಭವಿ ಸುವರು. ಹಾಗೆಯೇ ಪ್ರಹಾರದಲ್ಲಿಯೂ ಮುಂದೆ ಹರಿದುಹೋದ ನೀರೂ. ಹಿಂದಿನಿಂದ ಬರುವ ನೀರೂ ಪರಸ್ಪರಭೇದವೇ ತಿಳಿಯದಂತೆ ಸಮಾನವಾಗಿ ರುವುದರಿಂದ ಆ ಪ್ರವಾಹವನ್ನೆಲ್ಲಾ ಒಂದೇ ಜಲವನ್ನಾಗಿ ಭವಿಸುವರು. ಇದರಂತೆಯೇ ಪ್ರಾಣಿಶರೀರವೆಂಬುದು ಕ್ಷಣಕ್ಷಣಕ್ಕೂ ನಾಶಹೊಂದಿ, ಹೊಸವಿಕಾರಗಳು ಏರ್ಪಡುತ್ತಿದ್ದರೂ, ಆ ವಿಕಾರಗಳು ಅತಿಸೂಕ್ಷ್ಮವಾಗಿರು ವುದರಿಂದ, ಬಾಲ್ಯ ಕೌಮಾರ ಯೌವನಾಡಿಗಳಲ್ಲಿ ಒಬ್ಬನೇ ಮನುಷ್ಯನೆಂದು ತೋರುವುದು. ಇದು ಕೇವಲಭಾಂತಿ ಯೇ ಹೊರತು ನಿಜವಲ್ಲ. ಉದ್ಯವಾ! ಈ ಶರೀರದ ಉತ್ಪತ್ತಿಗೆ ಕರವೇ ಬೀಜವು ಶರೀರಕ್ಕೆ ಮಾತ್ರವೇ ಉತ್ಪತ್ತಿ ವಿನಾಶಗಳುಂಟೇ ಹೊರತು ಜೀವನಿಗಿಲ್ಲ. ಜೀವನು ಉತ್ಪತ್ತಿ ವಿನಾಶಾಹಿವಿ ಕಾರಗಳಿಲ್ಲದವನಾದರೂ, ತನ್ನ ಮನೋಭಾಂತಿಯಿಂದಲೇ ತನ್ನ ಶರೀರ ದೊಡನೆ ತಾನು ಹುಟ್ಟಿದಂತೆಯೂ,ಅದರೊಡನೆ ತಾನು ಸತ್ತಂತೆಯೂ ಎಣಿ ಸುವನು. ಹೀಗೆ ಆತ್ಮನು ಹಟ್ಟುವುದೂ, ಸಾಯುವುದೂ, ಅವನ ಭ್ರಾಂತಿ ಯಿಂದಲೇ ಹೊರತು ಸ್ವಾಭಾವಿಕವಲ್ಲ. ಏಕೆಂದರೆ, ಆತ್ಮವೆಂಬುದು ದೇಹ ಕೃತಿಗೆ ಮೊದಲೂ, ದೇಹವು ಬಿಟ್ಟು ಹೋದಮೇಲೆಯೂ ಇರತಕ್ಕುದು.