ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


90 ಅಧ್ಯಾ. ೭೩.] ಏಕಾದಶಸ್ಕಂಧನ. ಲಾಡಿಸಿದರೂ, ನಿನ್ನ ಮೇಲೆ ಉಗುಳಿದರೂ, ಮಲಮೂತ್ರಗಳನ್ನು 'ಸುರಿದ ರೂ, ಇನ್ನೂ ಅನೇಕವಿಧದಿಂದ ನಿನಗೆ ಕಿರುಕುಳಗಳನ್ನು ಮಾಡಿದರೂ ಕೂಡ, ನೀನು ಶ್ರೇಯಸ್ಸನ್ನು ಬಯಸುವವನಾಗಿದ್ದರೆ, ಅವೊಂದನ್ನೂ ಗಮನಿಸದೆ, ಆತ್ಮಸ್ವರೂಪದರ್ಶನದಿಂದ ನಿನ್ನನ್ನು ನೀನೇ ಉದ್ಧರಿಸಿಕೊಳ್ಳಬಹುದು.”ಎಂ ದನು. ಉದ್ಧವನು ತಿರುಗಿ ಪ್ರಶ್ನೆ ಮಾಡುವನು. “ ಕೃಷ್ಣಾ ! ದುರ್ಜನರು ಮಾಡತಕ್ಕ ತಿರಸ್ಕಾರಗಳನ್ನು ಸಹಿಸಿಕೊಂಡು ಸುಮ್ಮನಿರುವುದೇನೋ ಬಹ ಳ ಕಷ್ಟಕಾರವೆಂದು ನನಗೆ ತೋರುವುದು. ಅದಕ್ಕೆ ಉಪಾಯವೇನೆಂಬು ದನ್ನೂ ನೀನೇ ನನ್ ತಿಳಿಸಬೇಕು. ಪ್ರಕೃತಿಸಂಬಂಧವಿದ್ದಾಗ ದೇಹಾತ್ಮಾ ಭಿಮಾನವೂ, ರಾಗದ್ವೇಷಾದಿಗಳೂ ವಿದ್ವಾಂಸರನ್ನೂ ಬಿಟ್ಟುದಲ್ಲ! ಇಂದ್ರಿ ಯಗಳನ್ನು ಜಯಿಸಿ, ಭಗವದ್ಯರನಿರತರಾಗಿ, ನಿನ್ನ ಪಾದಾರವಿಂದಗಳನ್ನೆ ನಂಬಿರತಕ್ಕವರಿಗೆಹೊರತು, ಉಳಿದವರಾರಿಗೂ ಅಂತಹ ಮನೋದಾರ್ಢ ವು ಶಕ್ಯವಲ್ಲ. ಆದುದರಿಂದ ಅದಕ್ಕೆ ತಕ್ಕ ಉಪಾಯವನ್ನೂ ನನಗೆ ತಿಳಿಸಬೇ ಕು?” ಎಂದನು. ಇದು ಇಪ್ಪತ್ತೆರಡನೆಯ ಅಧ್ಯಾಯವು. ( ಸುಖದುಃಖಗಳಿಗೆ ಅವರವರ ಮನಸ್ಸೇ ಹೇತುವೆಂ ) ++ಬುದನ್ನು ಕೃಷ್ಣನು ಉದ್ಧವನಿಗೆ ಯುಕ್ತಿಪೂರಕ {+w ವಾಗಿ ನಿರೂಪಿಸಿದುದು, ) - ಭಕ್ಟೋತ್ತಮನಾದ ಉದ್ಯವನ ಪ್ರಶ್ನೆಯನ್ನು ಕೇಳಿ ಕೃಷ್ಣನು, ಸಂತೋಷದಿಂದ ಅವನನ್ನು ಮನ್ನಿ ಸುತ್ತ ಹೀಗೆಂದು ಹೇಳುವನು. (ಉ ದ್ವಾ ! ಓ ಬೃಹಸ್ಪತಿಶಿಷ್ಯಾ ! ದುರ್ಜನರಾಡುವ ದುರ್ವಾಕ್ಯಗಳಿಂದ ನೊಂದ ಮನಸ್ಸನ್ನು ತಾನಾಗಿಯೇ ಸಮಾಧಾನಹೊಂದಿಸಬಲ್ಲ ಸಾಧುಗಳೇ ನೋ ಲೋಕದಲ್ಲಿ ದುರ್ಲಭರೇ ! ದುರ್ಜನರ ಮಾತುಗಳು ಮನುಷ್ಯನನ್ನು ಸಂಕಟಪಡಿಸುವಂತೆ, ಮರ್ಮಗಳಲ್ಲಿ ನಾಟಿದ ತೀಕ್ಷಬಾಣಗಳೂಕೂಡ ಸಂಕಟಗೊಳಿಸಲಾರವು. ಇದೇ ವಿಚಾರವಾಗಿ ಪ್ರತರವಾದ ಹಿಂದಿಹಾಸ ವನ್ನು ಹೇಳುವರು. ದುರ್ಜನರಿಂದ ಬಹಳವಾಗಿ ತಿರಸ್ಕರಿಸಲ್ಪಡುತ್ತಿದ್ದ ಒ ಬ್ಯಾನೊಬ್ಬ ಭಿಕ್ಷುಕನ್ನು,ತನಗುಂಟಾದ ಆ ತಿರಸ್ಕಾರಗಳೊಂದಕ್ಕೂ ಪರಿತಪಿ 164 8