ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬am ಶ್ರೀಮದ್ಭಾಗವತವು [ಅಧ್ಯಾ: ೨೩. ಸದೆ, ಕರಾಚೀನವಾದ ಅವರವರ ಮನಸ್ಸೇ ಅವರವರ ಸುಖದುಃಖಗಳಿಗೆ ಕಾರಣವೆಂದು ಯೋಚಿಸಿ, ಥಿರಮನಸ್ಕನಾಗಿದ್ದು, ಒಂ*) ಗಾಥೆಯನ್ನು ಹಾಡಿರುವನು. ಆ ಗಾಥೆಯನ್ನು ತಿಳಿಸುವೆನು ಕೇಳು ! ಅವಂತೀದೇಶದಲ್ಲಿ ಒಬ್ಬಾನೊಬ್ಬ ಬ್ರಾಹ್ಮಣನಿದ್ದನು. ಅವನು ಬಹಳ ಧನಿಕನು ! ಆದರೆ ಪರಮಲುಬ್ಬನು ! ಬಹಳ ಮುಂಗೋಪವು ಇವನು. ಅವನಿಗೆ ಹಣದಾಸೆಯು ಮೇಲೆಮೇಲೆ ಮಿತಿಮೀರಿದುದರಿಂದ, ತನ್ನ ವರ್ಣಾಶ್ರಮಧರಗಳಿಗೆ ವಿರುದ್ಧವಾದ ಕೃಷಿವಾಣಿಜ್ಯಾದಿಗಳಿಂದಲೂ ಹಣ ವನ್ನು ಸಂಗ್ರಹಿಸಿಡುತಿದ್ದನು. ತನ್ನ ಉದರಪೋಷಣವೊಂದಕ್ಕೆ ಮಾತ್ರವಲ್ಲ ದೆ,ಬೇರೆ ಯಾವ ಥರ ಕಾರಕೂಆ ಹಣವನ್ನು ವೆಚ್ಚ ಮಾಡತಕ್ಕವನಲ್ಲ. ಬಂ ಧುಗಳಾಗಲಿ, ಅತಿಥಿಗಳಾಗಲಿ ಮನೆಗೆ ಬಂದರೂ, ಅವರನ್ನು ಬರೀಮಾತುಗ ಳಿಂದಾದರೂ ಆದರಿಸುತ್ತಿರಲಿಲ್ಲ ! ಇದಕ್ಕಾಗಿ ಅತಿಥಿಗಳಾರೂ ಅವನ ಮನೆ ಗೆ ಬರುತ್ತಿರಲಿಲ್ಲ. ತನ್ನ ಸುಖಕ್ಕಾದರೂ ತಾನು ಹಣವನ್ನು ವೆಚ್ಚ ಮಾಡ ಲಾರದೆ, ಬಹಳ ಕೃಪಣನಾಗಿ, ಕೇವಲದುಸ್ವಭಾವದಿಂದಿದ್ದ ಅವನ ಲೋಭಬುದ್ಧಿಯನ್ನು ಕಂಡು, ಹೆಂಡಿರು, ಮಕ್ಕಳು, ಬಂಧುಗಳು, ಸೇವಕ ರು ಮುಂತಾಗಿ ಅವನ ಪರಿವಾರಗಳೆಲ್ಲವೂ ಅಸಹ್ಯಪಟ್ಟು, ಅವನನ್ನು ದ್ವೇಷಿಸುತ್ತಿದ್ದರು.ಅವನಿಗೆ ಯಾರೂ ಅನುಕೂಲರಾಗಿರಲಿಲ್ಲ. ಹೀಗೆ ಆಲೋ ಭಿಯು, ಕುಬೇರನಂತೆ ಧನಿಕನಾಗಿದ್ದರೂ, ಆ ಹಣವನ್ನು ಇಹಲೋ ಕದ ಭೋಗಕ್ಕಾಗಲಿ, ಪರಲೋಕಸಾಧನಗಳಾದ ಧರಕಾರಗಳಿಗಾಗಲಿ ಉಪಯೋಗಿಸದೆ ಹೋದುದರಿಂದ, ಉಭಯಲೋಕಕ್ಕೂ ಬಾಹ್ಯನಾಗಿದ್ದ ನು. ಉದ್ದದಾ ! ಮನುಷ್ಯನು ಹುಟ್ಟುವಾಗಲೇ, ದೇವತೆಗಳು, ಪಿತೃಗಳು, ಭೂತಗಳು, ಮನುಷ್ಯರು, ಬ್ರಾಹ್ಮಣರೆಂಬ ಐದುಮಂದಿಗೆ ಋಣಿಯಾ ಗಿರುವನು. ಪಂಚಮಹಾಯಜ್ಞಗಳಿಂದ ಆ ಐವರನ್ನೂ ತೃಪ್ತಿಗೊಳಿಸಬೇ ಕಾದುದು ಬ್ರಾಹ್ಮಣನ ಕರ್ತವ್ಯವು, ಲುಬ್ಬನಾದ ಆ ಬ್ರಾಹ್ಮಣನು, ಆ ಪಂಚಮಹಾಯಜ್ಞಗಳನ್ನೂ ಸರಿಯಾಗಿ ನಡೆಸದೆಹೋದುದರಿಂದ, ಆ ಯಜ್ಞದೇವತೆಗಳೂ ಅವನ ವಿಷಯದಲ್ಲಿ ಕುಪಿತರಾಗಿದ್ದರು. ಅವರ ಕೋಶ ಕೈ ಫಲವಾಗಿ, ಈ ಬ್ರಾಹ್ಮಣನ ಸಂಪತ್ತಿಗೆ ಮೂಲವೆನಿಸಿದ ಪುಣ್ಯಫಲವು