ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ. ೨೩.| ಏಕಾದಶಸ್ಕಂಧನ, ೨೩an ಕ್ಷೀಣಿಸುತ್ತ ಬಂದು, ಕ್ರಮಕ್ರಮವಾಗಿ ಅವನು ಕಷ್ಟಪಟ್ಟು ಗಳಿಸಿಟ್ಟ ಧನ ವೆಲ್ಲವೂ ನಾನಾವಿಧದಿಂದ ಕರಗುತ್ತ ಬಂದಿತು. ಅವನ ಆಸ್ತಿಯಲ್ಲಿ ಸ್ವಲ್ಪ ಭಾಗವು ಜ್ಞಾನಿಗಳಿಗೆ ಸೇರಿಹೋಯಿತು! ಸ್ವಲ್ಪ ಭಾಗವನ್ನು , ಕಳ್ಳರು ಅಪ ಹರಿಸಿಕೊಂಡು ಹೋದರು ! ಮನೆಗೆ ಬೆಂಕಿ ಬಿದ್ದು ದೈವಿಕವಾಗಿ ಕೆಲವು ದ್ರವ್ಯಗಳು ನಷ್ಟವಾದುವು. ದುಷ್ಕಾಲವಶದಿಂದ ಕೆಲವುಭಾಗವು ನಮ್ಮ ವಾಯಿತು. ರಾಜಭಟರು ಬಲಾತ್ಕಾರದಿಂದ ಕೆಲವುಧನವನ್ನು ಕಿತ್ತು ಕೊಂಡುಹೋದರು. ಆಗ ಅವನ ದುಸ್ಥಿತಿಯನ್ನು ಕೇಳಬೇಕೆ?ಸಂಗ್ರಹಿಸಿಟ್ಟ ಹಣವೂ ಹೋಯಿತು! ಬಂಧುಗಳೂ ತನ್ನನ್ನು ಲಕ್ಷ್ಯಮಾಡದೆ ಕೈಬಿಟ್ಟರು! ಇದರಿಂದ ಅವನು ದುಸ್ಸಹವಾದ ಚಿಂತೆಗೆ ಗುರಿಯಾಗಿ, ಅಹೋರಾತ್ರ ಕೊರಗುತಿದ್ದನು. ಹೀಗೆ ಅಪಾರದ,ಃಖದಿಂದ ನವೆಯುತಿದ್ದ ಆ ಬಡಬ್ರಾ ಹ್ಮಣನಿಗೆ, ಕ್ರಮಕ್ರಮವಾಗಿ ಮನಸ್ಸಿನಲ್ಲಿ ವಿರಕ್ತಿಯು ಹುಟ್ಟುತ್ತ ಬಂದಿತು. ತನ್ನ ಹಿಂದಿನ ನಡತೆಯನ್ನು ಕುರಿತು ಪಶ್ಚಾತ್ತಾಪಪಡುತ್ತ ಆ ಬ್ರಾಹ್ಮಣನು ತನ್ನಲ್ಲಿತಾನು ಹೀಗೆಂದು ಯೋಚಿಸುವನು. ( ಅಯ್ಯೋ ! ನಾನೆಂತಹ ಬುದ್ಧಿಹೀನನು? ಎಷ್ಕ ಷ್ಟಪಟ್ಟು ಹಣವನ್ನು ಸಂಪಾದಿಸಿ ದೆನು ! ಅದರಿಂದ ಫಲವೇನಾಯಿತು ? ಒಂದು ಥರ ಕಾರಕ್ಕಾದರೂ ಉಪಯೋಗಿಸಲಿಲ್ಲ! ನಾನೂ ಅದರಿಂದ ಸುಖಪಡಲಿಲ್ಲ. ಆ ದ್ರವ್ಯ ಸಂಗ್ರ ಹಕ್ಕಾಗಿ ನನ್ನ ಈ ದೇಹವನ್ನು ವ್ಯಕ್ತವಾಗಿ ಕಷ್ಟಪಡಿಸಿದಂತಾಯಿತಲ್ಲವೆ? ಲೋಭಿಗಳಿಗೆ ಹಣವೆಂಬುದು ಅವರ ಕೈಹೊರತು ಸುಖಕ್ಕಲ್ಲ! ಲೋಭಿಗ ಇಲ್ಲಿರುವ ಹಣವು ಇಲ್ಲಿ ನಾನಾವಿಧಚಿಂತೆಗೂ, ಸತ್ತ ಮೇಲೆ ನರಕಕ್ಕೂ ಕಾರಣವಾಗುವುದು. ಮನುಷ್ಯನು ಎಷ್ಮೆ ಉತ್ತಮವಾದ ಕೀರ್ತಿಯನ್ನು ಸಂಪಾದಿಸಿರಲಿ ! ಎಷ್ಮೆ ಸುಗುಣಗಳುಳ್ಳವನಾಗಿರಲಿ ! ಅವನಲ್ಲಿ ಲೋಭ ಬುದ್ದಿಯ ಲೇಶಮಾತ್ರವಿದ್ದರೆ ಸಾಕು! ವಿಶೇಷರೂಪಸಂಪತ್ತಿಯುಳ್ಳ ಪುರುಷನಿಗೆ ದೇಹದಲ್ಲಿ ಲೇಶಮಾತ್ರವಾದರೂ ಶ್ವೇತಕುಷವು ಕಂಡುಬಂದ ರೆ, ಅದರಿಂದ ಅವನ ಸೌಂದರವು ಹೇಗೆ ಶೋಭಿಸಲಾರದೋ, ಹಾಗೆ, ಆ ಲೋಭಬುದ್ಧಿಯಿಂದ ಅವನ ಕೀರ್ತಿಗುಣಗಳೆಲ್ಲವೂ ನಾಶವಾಗುವುವು. ಆಹಾ ! ಅರವೆಂಬುದು ಯಾವಾಗಲೂ ಅವರ ಹೇತುವೇ ! ಏಕೆಂದರೆ