ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5401 ಅಧ್ಯಾ. ೨೩.] ಏಕಾದಶಸ್ಕಂಧನು. ಶ್ರೇಯಸ್ಸಿಗೆ ಪ್ರಯತ್ನಿ ಸದೆ,ಅವರ ಹೇತುವಾದ ಧನಕ್ಕಾಗಿ ಆಸೆಪಟ್ಟು,ತನ್ನ ಹಿತವನ್ನೇ ತಾನು ಕೆಡಿಸಿಕೊಳ್ಳುವನೋ,ಅಂತವನಿಗೆ ಸತ್ತ ಮೇಲೆಯೂ ನರ ಕಗತಿಯುತಪ್ಪದು.ಮನುಷ್ಯ ದೇಹವೇ ಸ್ವರ್ಗಾಪವರ್ಗಗಳೆರಡಕ್ಕೂ ಸಾಧನ ವೆನಿಸಿರುವುದು.ಇಂತಹ ಜನ್ಮವನ್ನು ಪಡೆದೂ ವಿವೇಕಿಯಾದ ಯಾವನು ತಾ ನೇ ಆನರಹೇತುವಾದ ದ್ರವ್ಯ ಕ್ಯಾಸೆಪಡುವನು? ಆದರೆ “ಪಂಚಮಹಾಯ ಜ್ಯಗಳಿಗೂ ದ್ರವ್ಯವೇ ಸಾಧನವಾಗಿರುವಾಗ, ಅದನ್ನು ಅನಾವಹವೆಂದು ನಿ ರಾಕರಿಸಬಹುದೆ”ಎಂದರೆ, ದೇವತೆಗಳಿಗೂ,ಋಷಿಗಳಿಗೂ, ಪಿತೃಗಳಿಗೂ, ಇತರ ಭೂತಗಳಿಗೂ, ಜ್ಞಾತಿಗಳಿಗೂ, ಬಂಧುಗಳಿಗೂ, ಹೀಗೆಯೇ ತಾನು ಸಂಪಾ ದಿಸಿದ ದ್ರವ್ಯಕ್ಕೆ ನ್ಯಾಯವಾಗಿ ಭಾಗಿಗಳೆನಿಸಿದವರೆಲ್ಲರಿಗೂ, ತನ್ನ ದೇಹ ಪೋಷಣೆಗೂ ಉಪಯೋಗಪಡಿಸದೆ, ನಿರರಕವಾಗಿ ಹಣವನ್ನು ಬಚ್ಚಿಟ್ಟ ನನ್ನಂತವನಿಗೆ ಅಧೋಗತಿಯಲ್ಲದೆ ಬೇರೇನು ! ವ್ಯವಾದ ಆ ಹಣದಾಸೆಯಿಂದ ವಿವೇಕಹೀನನಾಗಿ ದುಡಿಯುತ್ತಿದ್ದ ನನಗೆ, ಶ್ರಮಪಟ್ಟು ಗಳಿಸಿದ ಹಣವೂ ಹೋಯಿತು. ನಯನ್ನೂ ವ್ಯರ್ಥವಾಗಿ ಕಳೆದುಹೋ ಯಿತು!ದೇಹಬಲವೂ ತಗ್ಗಿ ತು!ಹೀಗೆ ಧರಾದಿಪುರುಷಾ‌ ಸಾಧನೆಗೆ ಅತ್ಯವಶ್ಯ ವಾದ ಆಯು, ಧನ, ದೇಹಶಕ್ತಿ, ಎಂಬಿವು ಮೂರೂ ಹೋದ ಮೇಲೆ, ಈಗ ವೃದ್ಧನಾದ ನಾನು ಇನ್ನೇನು ಮಾಡಬಲ್ಲೆನು ? ಈಗ ನನ್ನ ಸಂಗತಿಯೂ ಹಾಗಿರಲಿ! ಅರವು ಅವರ ಹೇತುವೆಂಬುದನ್ನು ಚೆನ್ನಾಗಿ ತಿಳಿದ ವಿದ್ವಾಂಸರೂಕೂಡ ಆ ಹಣದಾಸೆಯಿಂದ ದುಡಿಯುವರು! ಮುಖ್ಯವಾಗಿ ಆ ಭಗವಂತನ ಮಾಯಾಪ್ರಭಾವವೇ ಇದು! ಲೋಕವೆಲ್ಲವೂ ಆ ಒಬ್ಬನ ಮಾಯೆಗೆ ಮರುಳಾಗಿ ಚೇಷ್ಟೆಗಳನ್ನು ನಡೆಸುತ್ತಿರುವುದು. ಆದರೆ ಹಣ ವನ್ನು ನಿರುಪಯೋಗವಾಗಿ ಬಚ್ಚಿಡದೆ, ತನ್ನ ಭೋಗಗಕ್ಕಾಗಲಿ, ದಾನ ಧರಗಳಿಗಾಗಲಿ, ಯಜ್ಞಾದಿಕರಗಳಿಗಾಗಲಿ ಉಪಯೋಗಿಸಿದಾಗ ಅದು ಪುರುಷಾರಸಾಧನವೆನಿಸುವುದಿಲ್ಲವೆ”ಎಂದರೆ, ಅವೂ ಉತ್ತಮವಾದ ಪುರುಷಾ ರಗಳಲ್ಲ!ಏಕೆಂದರೆ, ಧನವನ್ನು ಭೋಗಕ್ಕುಪಯೋಗಿಸುವುದರಿಂದ ಕಾಮವ ನ್ನು ತೀರಿಸಿಕೊಳ್ಳಬಹುದು.ಆ ಧನವನ್ನು ದಾನಮಾಡುವುದರಿಂದ ಮತ್ತಷ್ಟು ಭಾಗ್ಯವು ವೃದ್ಧಿಯಾಗಬಹುದು. ಯಜ್ಞಾದಿಕರಗಳಿಗಾಗಿ ಆ ಧನವನ್ನು ಪ