ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೧ ಅಧ್ಯಾ, ೨] ಏಕಾದಶಸ್ಕಂಧವು. ಪಾವನರಾಗುವರು. ಇದಲ್ಲದೆ ಈಗ ನೀನು ಆ ಭಗವಂತನ ಗುಣಗಳನ್ನು ಹೇಳುವಂತೆ ನನ್ನನ್ನು ಪ್ರೇರಿಸಿ, ನನಗೆ ಆ ಭಗವದ್ದು ಣಾನುಭವದಲ್ಲಿ ಸ್ಮರಣೆಯನ್ನುಂಟುಮಾಡಿದುದರಿಂದ, ನಾನೂ ಕೃತಾರನಾದೆನು. ಇದೇ ಭಾಗವತಧರ ವಿಚಾರವಾಗಿ, ಹಿಂದೆ ವಿದೇಹರಾಜನಾದ ಜನಕನಿಗೂ, ಆರ್ಷಭರೆಂಬವರಿಗೂ, ನಡೆದ ಸಂವಾದರೂಪವಾದ ಇತಿಹಾಸವೊಂ ದುಂಟು.ಅದನ್ನೇ ನಿನಗೆ ತಿಳಿಸುವೆನು ಕೇಳು.ಪೂರದಲ್ಲಿ ಸ್ವಾಯಂಭುವನೆಂಬ ಮನುವಿಗೆ ಪ್ರಿಯವ್ರತನೆಂಬ ಮಗನಾದನು. ಅವನಿಂದ ಆಗ್ನಿ ಧ್ರನೂ, ಅಗ್ನಿಥನಿಂದ ನಾಭಿಯೆಂಬವನೂ, ಆ ನಾಭಿಯಿಂದ ಋಷಭನೆಂಬ ವನೂ ಜನಿಸಿದರು. ಲೋಕದಲ್ಲಿ ಮೋಕ್ಷಗಳನ್ನು ಪ್ರಚಾರಗೊಳಿಸುವು ದಕ್ಕಾಗಿ, ಭಗವಂತನೇ ತನ್ನ ಅಂಶದಿಂದ, ಈ ಋಷಭರೂಪದಿಂದ ಅವತರಿ ಸಿದ್ದುದಾಗಿ ಹಿರಿಯರು ಹೇಳುವರು. ಈ ಋಷಭನಿಗೆ ನೂರುಮಂದಿ ಪತ್ರ ರಾದರು. ಇವರೆಲ್ಲರೂ, ವೇದಾಧ್ಯಯನದಲ್ಲಿಯೂ, ಬ್ರಹ್ಮಜ್ಞಾನದಲ್ಲಿಯೂ ಪಾರಂಗತರೆನಿಸಿದರು. ಇವರಲ್ಲಿ ಭರತನೆಂಬವನೇ ಜೈಷ್ಟನು. ಆತನು ಪರಮಭಾಗವತೋತ್ತಮನು. ಈ ದೇಶಕ್ಕೆ ಭರತವರ್ಷವೆಂಬ ಪ್ರಸಿದ್ಧವಾದ ಹೆಸರು ಬಂದುದೂ ಆತನ ಧರ ಪರಿಪಾಲನದಿಂದಲೇ ! ಈ ಭರತನು ಬಹು ಕಾಲದವರೆಗೆ ಈ ಭೂಮಿಯನ್ನು ಪಾಲಿಸುತ್ತಿದ್ದು, ಆಮೇಲೆ ವಿರಕ್ತನಾಗಿ ತಪೋವನದಲ್ಲಿದ್ದು, ತನ್ನ ವರ್ಣಾಶ್ರಮಧರ್ಮಗಳಿಂದ ಭಗವಂತನನ್ನಾ ರಾಧಿಸುತ್ತ, ಹಾಗೆಯೇ ಮೂರುಜನ್ಮಗಳನ್ನು ಕಳೆದು, ಕೊನೆಗೆ ತನ್ನ ಪುಣ್ಯ ಫಲದಿಂದ ವಿಷ್ಣು ಸ್ಥಾನವನ್ನು ಸೇರಿದನು. ಆ ಭರತನ ತೊಂಬತ್ತೊಂಬತ್ತು ಮಂದಿ ತಮ್ಮಂದಿರಲ್ಲಿ, ಇಳಾವರನೇ ಮೊದಲಾದ ಒಂಬತ್ತು ಮಂದಿ, ಈ ಭಾರತವರ್ಷದಸುತ್ತಲೂ, ಬೇರೆಬೇರೆ ಒಂಬತ್ತು ದ್ವೀಪಗಳಿಗೆ ಅಧಿಪತಿಗ ಳಾಗಿ ಭರದಿಂದ ಪಾಲಿಸುತ್ತಿದ್ದರು. ಆ ದ್ವೀಪಗಳು ಈಗಲೂ ಅವರ ಹೆಸರಿನಿಂದಲೇ ಪ್ರಸಿದ್ಧಿಗಳಾಗಿರುವುವು. ಉಳಿದ ತೊಂಬತ್ತು ಮಂದಿ ಕುಮಾರರಲ್ಲಿ ಎಂಬತ್ತೊಂದುಮಂದಿ ದ್ವಿಜರಾಗಿ, ಕರತಂತ್ರಗಳಿಗೆ ಪ್ರವ ರ್ತಕರಾದರು.ಉಳಿದ ಒಂಬತ್ತು ಮಂದಿ ಕುಮಾರರು,ಮುನಿಗಳೆನಿಸಿಕೊಂಡು, ಜ್ಞಾನವೈರಾಗ್ಯಸಂಪನ್ನರಾಗಿ, ಪರಮಾಧ್ಯತತ್ವವನ್ನು ಉಪದೇಶಿಸತಕ್ಕವ