ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೬ ಶ್ರೀಮದ್ಭಾಗವತವು [ಅಧ್ಯಾ, ೨೩: ಬಾಧೆಗಳನ್ನಾಗಲಿ,ವಯಸ್ಸಿನಿಂದ ತನ್ನ ದೇಹವನ್ಯಗಳಾದ ಜರಾದಿದುಃಖಗ ಳನ್ನಾಗಲಿ ಗಮನಿಸದೆ, ತಾಳ್ಮೆಯಿಂದ ಸಹಿಸಿಕೊಂಡು, ಅವೆಲ್ಲವೂ ತನ್ನ ಪ್ರಾರಬ್ದ ಕಳಿಂದಲೇ ಉಂಟಾದುವೆಂದೂ, ಅವುಗಳನ್ನು ತಾನು ಅನುಭವಿ ಸಿಯೇ ತೀರಬೇಕೆಂದೂ ನಿಶ್ಚಯಿಸಿ, ಒಂದೇ ದೃಢದಿಂದಿದ್ದನು. ಅನೇಕರು ರ್ಜನರುತನ್ನನ್ನು ಅವಮಾನಪಡಿಸಿ,ನಾನಾಕಡೆಗೆ ಎಳೆದಾಡುತ್ತಿರುವಾಗಲೂ ಆ ಬ್ರಾಹ್ಮಣನು, ತನ್ನ ಧರವನ್ನೂ, ಸಾತ್ವಿಕವಾದ ದೃಶ್ಯವನ್ನೂ ಬಿಡದೆ ಈ ಮುಂದೆ ಹೇಳುವ ಗಾಥೆಯನ್ನು ಹಾಡಿದನು. (ಈನನ್ನ ಕಷ್ಟಕ್ಕೆ ಬೇರೆ ಜನರಾರೂ ಕಾರಣರಲ್ಲ. ಅಥವಾ ಸತ್ಯೇಶ್ವರನನ್ನಾಗಲಿ, ಗ್ರಹಗತಿಯನ್ನಾಗ ತಿ, ಕರಗಳನ್ನಾಗಲಿ, ಕಾಲವನ್ನಾಗಲಿ ಸುಖದುಃಖಗಳಿಗೆ ಕಾರಣವೆಂದು ಹೇಳುವುದಕ್ಕಿಲ್ಲ! ಮುಖ್ಯವಾಗಿ ಸುಖದುಃಖಗಳೆಲ್ಲಕ್ಕೂ ಮೂಲಕಾರಣವು ಅವರವರ ಮನಸ್ಸೇ ! ಜ್ಞಾನಿಗಳಾದ ಹಿರಿಯರ ಅಭಿಪ್ರಾಯವೂ ಇದೇ ! ಏಕೆಂದರೆ, ಮನಸ್ಸೇ ಜನರನ್ನು ಸಂಸಾರಚಕ್ರದಲ್ಲಿ ಸುತ್ತಿಸುವುದು. ದುರ್ದಮವಾದ ಆಯಾಮನುಷ್ಯನ ಮನಸ್ಸೇ ಅವನಲ್ಲಿ ಸತ್ಯಾದಿಗುಣಗ ಳನ್ನು ಹುಟ್ಟಿಸುವುದು. ಆಯಾಗುಣಗಳಿಗೆ ತಕ್ಕಂತೆ ಮನುಷ್ಯನು ಸಾತ್ವಿಕ ರಾಜಸ ತಾಮಸಗಳೆಂಬ ಕುಗಳಲ್ಲಿ, ಪ್ರವರ್ತಿಸುವನು. ಆ ಕರಗಳಿಗೆ ತಕ್ಕಂತೆ ದೇವರನುಷ್ಯಾರಿಜನ್ಮಗಳುಂಟಾಗುವುವು. ೬ ಯಾಜಮ್ಮಗ ಳಲ್ಲಿಯೂ ತಿರುಗಿ ಆ ಮನಸ್ಸೇ ಗುಣಗಳ ಸೃಷ್ಟಿಗೆ ಕಾರಣವಾಗಿ, ಅದರಿಂದ ಕರಪ್ರವೃತ್ತಿಯೂ, ಆ ಕರಗಳಿಂದ ಪುನರ್ಜನ್ಮವೂ ಉಂಟಾಗುವುದು. ಆದರೆ ಮನಸ್ಸು ದೇಹಸಂಬಂಧದಿಂದ ಪ್ರಾಣಿಗಳಿಗೆ ಸುಖದುಃಖಗ ಇನ್ನುಂಟುಮಾಡುವುದಾದರೆ, ಸಜೀವಾಂತರಾತ್ಮನಾದ ಪರಮಾತ್ಮನೂ ಎಲ್ಲಾ ದೇಹದೊಳಗೆ ಸೇರುವಾಗ ಅವನಿಗೂ ಆ ಸುಖದುಃಖಾನುಭವವಿರ ಬೇಕಲ್ಲವೇ?” ಎಂದರೆ, ಪರಮಾತ್ಮನು ನನ್ನಂತಹ ಎಲ್ಲಾ ಜೀವಗಳಿಗೂ ಧಾರ ಕನಾಗಿಯೂ ನಿಯಾಮಕನಾಗಿಯೂ ಇದ್ದು, ಎಡಬಿಡದೆ ಅವುಗಳಲ್ಲಿ ಸೇರಿ ದರೂ, ದೇಹಧರಗಳು ಅವನನ್ನು ಮುಟ್ಟಲಾರವು. ಅವನು ಸುವರ್ಣದಂ ತೆ ಸ್ವಯಂಪ್ರಕಾಶವುಳ್ಳವನು. ಚೇತನನ ಮನಸ್ಸು ನಾನಾಬಗೆಯ ಸಂಕ ವಿಕಲ್ಪಗಳಿಗೆ ಎಡೆಯಾದರೂ, ಪರಮಾತ್ಮನು ಆ ಚೇತನನ ಬುದ್ಧಿಗೆ ಕೇವ