ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಧ್ಯಾ. ೨೩.] ಏಕಾದಶಸ್ಕಂಧನ. ೨೩೦೭ ಲಸಾಕ್ಷಿಯಾಗಿಮಾತ್ರ ನೆಲೆಗೊಂಡಿರುವನೇಹೊರತು, ತಾನು ಆ ಜೀವ ನಂತೆ ಅಹಂಕಾರಮಮಕಾರಗಳಿಗೆ ತಕ್ಕ ಚೇಷ್ಟೆಗಳನ್ನು ನಡೆಸಲಾರನು. ಜೀವನಾದರೋ, ತನ್ನ ದೇಹವನ್ನೇ ಆತ್ಮವೆಂದು ಭ್ರಮಿಸುತ್ತ, ವಿಷಯಾ ನುಭವದಲ್ಲಿ ಬಿದ್ದು, ಶಬ್ದಾದಿವಿಷಯಗಳ ಸಂಗದಿಂದ ಬದ್ಧನಾಗುವನು. ಆದುದರಿಂದ ಒಂದೇದೇಹದಲ್ಲಿ ಜೀವಪರಮಾತ್ಮರಿಬ್ಬರೂ ನೆಲೆಗೊಂಡಿದ್ದ ರೂ, ಸುಖದುಃಖಗಳೆಲ್ಲವೂ ಜೀವನಿಗೇ ! ಗುಣಮೂಲಕಗಳಾದ ಕರಗಳಿಗೆ ವಶವಾಗುವುದರಿಂದಲೇ ಆ ಸುಖದುಃಖಗಳುಂಟಾಗುವುವೇಹೊರತು, ಶರೀ ರಸಂಬಂಧಮಾತ್ರದಿಂದಲೇ ಸುಖದುಃಖಗಳುಂಟಾಗಲಾರವು. ಪರಮಾತ್ಮ ನಿಗೆ ಗುಣಕರ ವಶ್ಯವಿಲ್ಲದುದರಿಂದ ಅವನಿಗೆ ಸುಖದುಃಖಗಳೂ ಇಲ್ಲವು. ಆದುದರಿಂದ ಮನಸೆ ಸುಖದುಃಖಗಳಿಗೆ ಮೂಲವು. ಆ ಮನೋನಿಗ್ರಹ ವೇ ಸುಖದುಃಖನಿವೃತ್ತಿಗೂ ಪ್ರಧಾನೋಪಾಯವು. ಆದುದರಿಂದ ಲೋಕ ದಲ್ಲಿ ಮನುಷ್ಯರು, ಪುರುಷರ ಸಾಧನೆಗಾಗಿ ನಡೆಸತಕ್ಕ ಬಾನಗಳು,ವರ್ಣಾ ಶ್ರಮಧರಗಳು, ಯಮನಿಯಮಗಳು, ವೇದಾಧ್ಯಯನಗಳು, ಯಜ್ಞಾದಿ ಕರಗಳು, ವ್ರತಗಳು, ಇವೆಲ್ಲಕ್ಕೂ ಮನೋನಿಗ್ರಹವೇ ಮುಖ್ಯಫಲವಾಗಿರ ಬೇಕು. ಆದರೆ ಈ ದಾನಾದಿಗಳೆಲ್ಲವೂ ಸಮಾಧಿಗೆ ಸಾಧನಗಳೆಂದು ಶ್ರುತಿ ಗಳಲ್ಲಿ ಹೇಳಿರುವಾಗ,ಮನೋನಿಗ್ರಹವೇ ಇವುಗಳಿಗೆ ಮುಖ್ಯಫಲವೆಂದು ಹೇ ಳುವುದಕ್ಕಾದೀತೆ?” ಎಂದರೆ, ಸಮಾಧಿಯೆಂಬುದೂ ಮನೋನಿಗ್ರಹವೇ!ಹೇ ಗೆಂದರೆ, ಬೇರೆ ವಿಷಯಗಳಿಗೆ ಹೋಗದಂತೆ ಮನಸ್ಸನ್ನಾಕರ್ಷಿಸಿ ಪರಮಾತ್ಮ ನಲ್ಲಿ ನಿಲ್ಲಿಸಿಡುವುದಲ್ಲವೇ ಸಮಾಧಿಯೆನಿಸುವುದು! ಈವಿಧವಾದ ಮನೋನಿಗ್ರ ಹವೇ ಉತ್ತಮವಾದ ಯೋಗವು, ಮೋಕದಲ್ಲಿಯೇ ದೃಷ್ಟಿಯಿಟ್ಟು ಈ ವಿ ಧವಾದ ಮನೋನಿಗ್ರಹವನ್ನು ಸಾಧಿಸಿ, ರಾಗಾದಿಗಳಿಂದ ಕಲುಷಿತವಾಗದ ಮನಸ್ಸುಳ್ಳವನಿಗೆ ದಾನಾದಿಗಳಿಂದ ಆಗಬೇಕಾದುದೇನೂ ಇಲ್ಲ ! ಮನೋ ನಿಗ್ರಹಕ್ಕೆ ಸಾಧನವಾಗದಿದ್ದ ಆ ದಾನಾದಿಗಳಿಂದ ಬೇರೆ ಯಾವ ಪ್ರ ಯೋಜನವೂಇಲ್ಲ! ದಾನಾದಿಗಳೆಲ್ಲವೂ ಮನೋನಿಗ್ರಹರೂಪವಾದ ಸಮಾ ಥಿಗೇ ಅಂಗಗಳಾಗಿರಬೇಕಲ್ಲದೆ ಬೇರೆಯಲ್ಲ. ಆ ಪರಮಪುರುಷನೊಬ್ಬನು ರತು, ಇತರದೇವತೆಗಳೆಲ್ಲರೂ ಮನಸ್ಸಿಗೆ ವಶವಾಗಿರತಕ್ಕವರೇಹೊರತು, ಮ