ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


94ce ಶ್ರೀಮದ್ಭಾಗವತವು ಅಧ್ಯಾ, ೨೦, ನಸ್ಸು ಅವರೊಬ್ಬರಿಗೂ ವಶವಾಗತಕ್ಕುದಲ್ಲ ! ಹಾಗಿದ್ದರೆ ಒಬ್ಬರಿಗೂ ವಶವಾಗದ ಮನಸ್ಸನ್ನು ದಾನಾದಿಗಳಿಂದ ವಶಗೊಳಿಸುವುದಕ್ಕಾದೀತೆ ? ಎಂದರೆ, ಇಂದ್ರಿಯಾಧಿದೇವತೆಗಳಿಗೂ ದೇವನಾಗಿ, ಬಲಾಡ್ಯರಿಗೂ ಬಲಾ ಢನಾಗಿ, ನಿಜತೇಜಸ್ಸಿನಿಂದಲೇ ಬೆಳಗುತ್ತಿರುವ ಪರಮಪುರುಷನು, ದಾನಾ ದಿಗಳಿಂದ ಆರಾಧಿಸಲ್ಪಟ್ಟರೆ, ಅವನು ದುರ್ಸಿಗ್ರಹವಾದ ಆ ಮನಸ್ಸನ್ನೂ ವಶದಲ್ಲಿರಿಸಬಲ್ಲನು. ಆದುದರಿಂದ ಮೇಲೆ ಹೇಳಿದಂತೆ ಭಗವದಾರಾಧನವೊಂ ದುಹೊರತು ಬೇರೆ ಉಪಾಯಗಳಿಂದ ದುರ್ಜಯವಾಗಿಯೂ, ಶತ್ರುವಿನಂತೆ ಯಾವಾಗಲೂ ದುಃಖಪ್ರದವಾಗಿಯೂ, ರಾಗದ್ವೇಷಗಳೇ ಮೊದಲಾದ ನಿರಂಕುಶವೇಗವುಳುದಾಗಿಯೂ ಇರುವ ಆ ಮನಸ್ಸನ್ನು ನಿಗ್ರ ಹಿಸಲಾರದುದಕ್ಕಾಗಿಯೇ ಅನೇಕ ಮೂಢರು, ಆ ಮನಸ್ಸಿನ ಪ್ರವರ್ತನೆಗೆ ತಕ್ಕಂತೆ, ಕೆಲವರಲ್ಲಿ ನಿಷ್ಕಾರಣವೈರವನ್ನೂ, ಕೆಲವರಲ್ಲಿ ಸ್ನೇಹವನ್ನೂ, ಕೆಲ ವರಲ್ಲಿ ಔದಾಸೀನ್ಯವನ್ನೂ ತೋರಿಸುವರು. ದೇಹೋತ್ಪತ್ತಿಗೆ ಮನಸ್ಸು ಮೂಲವು. ಮೂಢಬುದ್ಧಿಯುಳ್ಳವರು ದೇವಮನುಷ್ಯಾದ್ಯಾಕಾರಗಳಿಂದ ಅನೇಕವಿಧವಾಗಿರುವ ತಮ್ಮ ದೇಹವನ್ನೇ ತಾವೆಂದು ತಿಳಿದು, ಅಹಂ ಕಾರಮಮಕಾರಗಳಿಂದ ಬುದ್ಧಿಗೆಟ್ಟು, ತಾನೆಂದೂ, ಆನ್ಯನೆಂದೂ ಬ್ರಾಹ್ಮಣನೆಂದೂ, ಶೂದ್ರನೆಂದೂ ಭೇದಭ್ರಾಂತಿಯಿಂದ ದುರಂತ ವಾದ ಸಂಸಾರವೆಂಬ ತಮಸ್ಸಿನಲ್ಲಿ ಬಿದ್ದು ಕಳವಳಿಸುವರು, ಒಬ್ಬ ಪುರುಷನು ಮತ್ತೊಬ್ಬನ ಸುಖದುಃಖಗಳಿಗೆ ಕಾರಣವೆಂಬುದು ಹೇಗೆ ? ಇಲ್ಲಿ ಪುರುಷನೆಂಬ ಶಬ್ದಾರವಾವುದು ? ದೇಹವೇ? ಆತ್ಮವೇ? ಇವೆ ರಡೂ ಸೇರಿದುದೆ ! ಆಥವಾ ಆ ದೇಹಾತ್ಮಗಳೆರಡಕ್ಕೂ ಅಂತರಾತ್ಮನಾದ ಪರಮಪುರುಷನೆ? ಇವುಗಳಲ್ಲಿ ಯಾವುದೆಂದು ಗ್ರಹಿಸಬಹುದು. ಯಾವುದೂ ಸಮಂಜಸವಾಗುವುದಿಲ್ಲ. ಪುರುಷಶಬ್ಬಕ್ಕೆ ಶರೀರಮಾತ್ರವೆಂದೇ ಗ್ರಹಿಸಿ, ಸುಖದುಃಖಕಾರಣವೂ, ಆ ಸುಖದುಃಖಗಳನ್ನು ಅನುಭವಿಸುವುದೂ ಶರೀರ ಮಾತ್ರವೇ ಎಂದು ಹೇಳಿದಪಕ್ಷದಲ್ಲಿ, ಅದರಿಂದ ಆತ್ಮನಿಗೇನಾಯಿತು? ಶರೀರಮಾತ್ರಗಳಲ್ಲಿ ಪಠ್ಯವಸಾನಹೊಂದುವ ಸುಖದುಃಖಗಳಿಗಾಗಿ ಆತ್ಮನು ಚಿಂತಿಸಬೇಕಾದುದೇಇಲ್ಲ ! ಪ್ರತಿಯೊಬ್ಬನೂ ತನ್ನ (ಆತ್ಮದ ಸುಖಪ್ರಾ