ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೧೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೨.] ಏಕಾದಶಸ್ಕಂಧವು, ೨೩ CY ಪ್ತಿಗೂ, ದುಃಖನಿವೃತ್ತಿಗೂ ಯತ್ನಿ ಸುವನು. ಆ ಸುಖದುಃಖಗಳು ಆತ್ಮನಿ ಗಿಲ್ಲದ ಪಕ್ಷದಲ್ಲಿ ಅದಕ್ಕಾಗಿ ಯತ್ನಿ ಸಲಾರನಷ್ಮೆ ? ಈ ಕಾರಣಗಳಿಂದ ದೇಹವೇ ಸುಖದುಃಖಭಾಗಿಯೆಂದು ಹೇಳುವುದಕ್ಕಿಲ್ಲ! ಇದಲ್ಲದೆ, ಜಡವಾದ ದೇಹಕ್ಕೆ ಸುಖದುಃಖಕರ್ತೃತ್ವವನ್ನು ಹೇಳುವುದಕ್ಕೂ ಸಂಭವವಿಲ್ಲ. ಏಕೆಂ ದರೆ, ಕರ್ತೃತ್ವವೆಂಬುದು ಪ್ರಯತ್ನ ಮೂಲಕವಾದುದು. ಪ್ರಯತ್ನವೂ ಸುಖದುಃಖಗಳೂ ಜ್ಞಾನಾಶ್ರಯಗಳು, ಆಚೇತನಗಳಾದ ದೇಹಗಳಿಗೆ, ಜ್ಞಾನರೂಪಗಳಾದ ಯತ್ನಾ ಹಿಗಳನ್ನು ಹೇಳುವುದೂ ಅಸಂಭವವೇ ! ಒಬ್ಬ ಪುರುಷನೆಂಬುದಕ್ಕೆ ದೇಹಾತ್ಮಗಳೆರಡರ ಸಂಯೋಗವೆಂಬ ಅರ್ಥವನ್ನು ಗ್ರಹಿಸಿ, ದೇಹವಿಶಿಷ್ಟವಾದ ಒಂದಾತ್ಮವು, ಅದರಂತೆಯೇ ಇರುವ ಮತ್ತೊಂದಕ್ಕೆ ಸುಖದುಃಖಕಾರಣವೆಂದೂ ತಿಳಿಯುವುದಕ್ಕಿಲ್ಲ! ಏಕೆಂದರೆ, ಒಬ್ಬನು ಎಂದಾದರೂ ಒಮ್ಮೆ ತನ್ನ ಹಲ್ಲುಗಳಿಂದ ತನ್ನ ನಾಲಗೆಯನ್ನೇ ಕಚ್ಚಿಕೊಂಡು ಬಾಧೆಪಡುವುದುಂಟು ! ಆಗ ಅವನು ಯಾರಮೇಲೆ ಕೋಪಿ ಸಬೇಕು?ಇಲ್ಲಿ ಆತ್ಮವೊಂದೇ ಅಲ್ಲವೆ?ಆ ಆತ್ಮದಿಂದ ಅಧಿಷ್ಟಿತವಾದ ಒಂದೇ ಶರೀರದಲ್ಲಿ, ಒಂದವಯವವು ದುಃಖಕತೃವಾಗಿಯೂ, ಮತ್ತೊಂದು ಆ ದುಃ ಖಕ್ಕೆ ವಿಷಯವಾಗಿಯೂ ಇದ್ದಂತಾಯಿತೇ ಹೊರತು ಆತ್ಮವನ್ನು ಬೇರೆ ಯಾಗಿ ಹೇಳುವುದಕ್ಕಿಲ್ಲ. ಆ ಒಂದೇ ಆತ್ಮವು ತನಗೆ ತಾನೇ ದುಃಖಕಾರಣ ವಾಗುವುದೆಂಬುದನ್ನೂ ಒಪ್ಪವುದಕ್ಕಿಲ್ಲ. ಈ ನಿರೂಪಣರಿಂದ ದೇಹಕ್ಕೆ ಸುಖದುಃಖಕಾರಣತ್ವವನ್ನು ಹೇಳಿದಂತಾಗುವುದಲ್ಲವೆ ? ಆದರೆ ಮನ ಸ್ಸಿನ ಪ್ರಮಾದದಿಂದ, ಆತ್ಮವು ತನಗೆ ತಾನೆಯಾಗಲಿ, ಮತ್ತೊಬ್ಬರಿಗಾ ಗಲಿ ದುಃಖಕಾರಣವಾಗಬಹುದೆಂದು ತಿಳಿಯಬಾರದೆ”ಎಂದರೆ, ಆಗಲೂ ಮ ನಸ್ಸೇ ಸುಖದುಃಖಹೇತುವೆಂದು ಸ್ಪಷ್ಟವಾಗುವುದು. ಅಥವಾ ಆ ದೇ ಹಾತ್ಮಗಳೆರಡನ್ನೂ ಬಿಟ್ಟು, ಅವೆರಡಕ್ಕೂ ಅಂತರಾತ್ಮನಾದ ಈಶ್ವರನೇ ಹಿಂದು ಶರೀರದಲ್ಲಿದ್ದು ಸುಖದುಃಖಕಾರಣನಾಗಿಯೂ, ಮತ್ತೊಂದು ಶರೀರದಲ್ಲಿದ್ದು ಅವುಗಳನ್ನನುಭವಿಸತಕ್ಕವನಾಗಿಯೂ ಇರಬಾರದ?” ಎಂದರೆ, ಆಗಲೂ ಅ ಸುಖದುಃಖಗಳಲ್ಲಿ ಜೀವಾತ್ಮನಿಗೇನೂ ಸಂಬಂಧವಿಲ್ಲ ! ಇವಲ್ಲದೆ, ವೈಷಮ್ಯ, ನೈರ್ಮ್ನಲ್ಯ, ಸುಖ ದುಃಖಶೀಲತ್ಕಾರಿ ವಿಕಾ