ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೧೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೧೧ ಅಧ್ಯಾ, ೨೩.] ಏಕಾದಶಸ್ಕಂಧನ, ಹಗತಿಗಳಿಂದ ಪ್ರಾಣಿಗಳಿಗೆ ಸುಖದುಃಖಗಳುಂಟೆಂದು ಹೇಳಿದ ಜೋಷ, ರೇ, ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಪೀಡೆಯುಂಟೆಂದೂ ಹೇಳು ವರು. ಅವೆರಡಕ್ಕಿಂತಲೂ ಭಿನ್ನ ನಾದ ಪುರುಷನು ಯಾವುದಕ್ಕಾಗಿ ಕೋಪಿ ಸಬೇಕು? ಆದರೆ ಸುಖದುಃಖಗಳಿಗೆ ಕರವೇ ಮೂಲವೆಂದು ಹೇಳಬಾರದೆ ? ಎಂದರೆ, ಸ್ವಯಂಪ್ರಕಾಶರೂಪನಾಗಿಯೂ, ನಿರ್ವಿಕಾರನಾಗಿಯೂ, ಇರು ವ ಆತ್ಮನನ್ನು ಆ ಕರಗಳು ತಾನೇ ಏನುಮಾಡಬಲ್ಲುವು ? ಸುಖದುಃಖಗ ಳಾಗಲಿ, ತನ್ಮೂಲಕಗಳಾದ ಶುಭಾಶುಭಕರಗಳಾಗಲಿ ಆತ್ಮನಿಗಲ್ಲ. ಹಾಗಿ ಯೋ ದೇಹವೆಂಬುದು ಅಚೇತನವಾದುದರಿಂದ, ಅದೂ ತಾನಾಗಿ ಯಾವ ಕ ರಪ್ರವೃತ್ತಿಗೂ ಸಮರ್ಥವಲ್ಲ! ಜಡವಾದ ದೇಹವು ಕರಕ್ಕೆ ಸಾಧನಮಾತ್ರ ವಾಗಿರುವುದು. ಆದುದರಿಂದ ಜಡತ್ಯಾಜಡತ್ವಗಳೆಂಬ ವಿರುದ್ಧಭಾವಗಳೆರ ಡೂ ಏಕೀಭವಿಸಿದ್ದಕಡೆಯಲ್ಲಿಯೇ ಕರಪ್ರವೃತ್ತಿಯೂ, ಕಾಚರಣವೂ, ಕರ ಮೂಲಕಗಳಾದ ಸುಖದುಃಖಾನುಭವಗಳೂ ಇರಬೇಕು. ಈ ವಿರುದ್ಧ ಗುಣಗಳೆರಡೂ ಒಂದೇ ವಸ್ತುವಿನಲ್ಲಿ ಸೇರಿರುವ ಸಂಭವವಿಲ್ಲ!ಏಕೆಂದರೆ,ದೇ ಹವು ಜಡವೆನಿಸಿರುವುದು. ಜೀವಾತ್ಮನಾದರೋ ಸ್ವಯಂಪ್ರಕಾಶಸ್ವರೂ ಪನು. ಈ ಪರಸ್ಪರವಿರುದ್ಯಸ್ವಭಾವಗಳನ್ನು ಒಂದೇ ವಸ್ತುವಿನಲ್ಲಿ ಹೇಳು ವುದುಕ್ಕಿಲ್ಲ ! ಹೀಗಿರುವಾಗ ಕರಕ್ಕೆ ಯಾವುದು ಮೂಲವೆಂದು ತಿಳಿದು, ಯಾತರಮೇಲೆ ಕೋಪಿಸಿಕೊಳ್ಳಬಹುದು? ಆದುದರಿಂದ ಕರಗಳೇ ಸುಖ ದುಃಖಹೇತುಗಳೆಂಬುದೂ ಯುಕ್ತವಲ್ಲ. ಆದರೆ ಕರಗಳೇ ಜೀವನಿಗೆ ಸಂ ಸಾರಹೇತುವೆಂದು ತತ್ವಜ್ಞರಿಂದ ನಿರ್ಣಯಿಸಲ್ಪಟ್ಟಿದ್ದರೂ, ಆ ಕರಗ ಳಿಗೂ ಮನಸ್ಸಿನ ಅಜ್ಞತೆಯೇ ಮೂಲಕಾರಣವೆಂದು ಈ ವಿಚಾರಗಳಿಂದ ಸ್ಪಷ್ಟವಾಗುವುದು. ಕಾಲವನ್ನು ಸುಖದುಃಖಕಾರಣವೆಂದು ಹೇಳಬಾರದೆ ? ಎಂದರೆ, ಸ್ವಭಾವದಿಂದ ಸುಖದುಃಖಗಳಲ್ಲಿ ಸಂಬಂಧವಿಲ್ಲದ ಆತ್ಮನನ್ನು ಕಾಲವುತಾನೇ ಏನುಮಾಡಬಲ್ಲುದು ? ಸಹಜವಾಗಿ ಸುಖದುಃಖಸಂಬಂಥ ವಿಲ್ಲದ ಅತ್ಮಸ್ವರೂಪವು, ಕಾಲವಶದಿಂದ ಆ ಸುಖದುಃಖಗಳಿಗೆ ಈ ಡಾಗುವುದೆಂಬುದನ್ನು ಅಂಗೀಕರಿಸುವಪಕ್ಷದಲ್ಲಿ, ಅದೇಕಾಲದಿಂದ ಅಗ್ನಿಗೆ ಸ್ವಭಾವಸಿದ್ಧವಾದ ತಾಪವೂ, ಹಿಮಕ್ಕೆ ಸ್ವಭಾವಸಿದ್ಧವಾದ ಶೈತ್ಯವೂ