ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೧೨ ಶ್ರೀಮದ್ಭಾಗವತವು [ಅಧ್ಯಾ, ೨೩, ತಪ್ಪಿಹೋಗಬೇಕಲ್ಲವೆ? ಹೀಗಾಗುವ ಸಂಭವವಿಲ್ಲ. ಅದರಂತೆಯೇ ಕಾಲ ವು ಆತ್ಮನಿಗೆ ಸುಖದುಃಖಹೇತುವಾಗುವುದೆಂಬುದನ್ನೂ ಒಪ್ಪಿಕೊಳ್ಳುವುದ ಕ್ಕಿಲ್ಲ. ಆದುದರಿಂದ ಒಬ್ಬನಿಗೆ ಬೇರೊಬ್ಬನು ಸುಖದುಃಖಕಾರಣನಾಗುವ ನೆಂದು ತಿಳಿಯುವುದೇ ತಪ್ಪ ! ಅವನವನ ಮನಸ್ಸೇ ಅವನವನ ಸುಖಕ್ಕೂ ದುಃಖಕ್ಕೂ ಮೂಲವು. ಆದರೆ ಮನಸ್ಸೇ ಕಾರಣವೆಂಬುದನ್ನು ಅಂಗೀಕರಿಸಿ ದರೂ, ಅಸುಖದುಃಖಸಂಬಂಧದಲ್ಲಿ ಆತ್ಮನ ನಿಜಸ್ವಭಾವಕ್ಕೆ ಹಾನಿಯುಂ ಟಾದಹಾಗೆಯೇ ಆಯಿತಲ್ಲವೆ? ಎಂದು ಶಂಕಿಸಬಾರದು. ಆಗಲೂ ಆತ್ಮ ಸ್ವಭಾವಕ್ಕೇನೂ ಹಾನಿಯಿಲ್ಲ. ಅಗ್ನಿ ಜಲಾದಿಗಳಿಂದ ಮನುಷ್ಯನಿಗೆ ಅಪಾಯ ವು ಸಹಜವಾಗಿದ್ದರೂ, ಅಗ್ನಿ ಸಂಭ, ಜಲಸ್ತಂಭಾರಿಶಕ್ತಿಯುಳ್ಳವನು,ತನ್ನ ಶಕ್ತಿಯಿಂದ ಅವುಗಳನ್ನು ತಡೆಯಬಲ್ಲನಲ್ಲವೆ ? ಇದರಿಂದ ಆ ಅಗ್ನಿ ಜಲಾದಿ ಗಳ ಸ್ವಭಾವವೇ ಕೆಟ್ಟುಹೋಯಿತೆಂದು ಗ್ರಹಿಸಬಹುದೆ ? ಅದರಂತೆಯೇ ಆತ್ಮನು ಮನಸ್ಸನ್ನು ಸ್ತಂಭಿಸುವುದರಿಂದ, ಅಮನಸ್ಸಿನಮೂಲಕವಾಗಿ ಬಂದೊದಗತಕ್ಕ ಸುಖದುಃಖಗಳಿಗೆ ತಾನು ಈಡಾಗದೆ, ನಿಜಸ್ವಭಾವದಲ್ಲಿ ಯೇ ಇರಬಹುದು. ಮುಖ್ಯವಾಗಿ ದೇಹಕ್ಕಿಂತಲೂ ವಿಲಕ್ಷಣನಾದ ಆತ್ಮ ನಿಗೆ, ಹಿಂದೆ ಹೇಳಿದಂತೆ ಇತರಜನವಾಗಲಿ, ಅಂತರಾತ್ಮನಾಗಲಿ, ಆತ್ಮವಾ ಗಲಿ, ಗ್ರಹಗಳಾಗಲಿ, ಕಾಲವಾಗಲಿ, ಕರವಾಗಲಿ ಅಥವಾ ಬೇರೆಯಾವು ದಾಗಲಿ, ಯಾವಾಗಲೂ, ಎಲ್ಲಿಯೂ, ಯಾವ ವಿಧದಿಂದಲೂ ಸುಖದುಖ ಗಳನ್ನುಂಟುಮಾಡಲಾರವು, ಸಂಸಾರಕಾರಣವಾದ ಮನಸ್ಸೇ ದೇಹದಲ್ಲಿ ಆತ್ಮಾಭಿಮಾನವನ್ನು ಹುಟ್ಟಿಸಿ, ಅಹಂಕಾರಮಮಕಾರಗಳನ್ನುಂಟುಮಾ ಡುವುದು. ಆ ಉಪಾಧಿವಶದಿಂದಲೇ ಆತ್ಮನಿಗೆ ಸುಖದುಃಖಗಳು ತೋರುವುವೇಹೊರತು, ಅವು ಆತ್ಮನಿಗೆ ಸ್ವರೂಪದಿಂದ ಬಂದುವಲ್ಲ. ಎಂದರೆ, ಸಂಕಲ್ಪವಿಕಲ್ಪಾತ್ಮಕವಾದ ಮನಸ್ಸು ಎಚ್ಚರತಪ್ಪ ವುದರಿಂದಲೇ ಅಹಂಕಾರಮಮಕಾರಗಳು ಹುಟ್ಟುವುವು. ಆ ಅಭಿಮಾನ ದಿಂದ ದ್ವೇಷಾದಿಗಳೂ, ಆ ದ್ವೇಷಾದಿಗಳಿಂದ ಕರಪ್ರವೃತ್ತಿಯೂ, ಆ ಕರಗಳಿಂದ ಜನ್ಮಗಳೂ, ಆ ಜನ್ಮಗಳಿಂದ ಸುಖದುಃಖಗಳೂ ಸಂಭ ವಿಸುವುವು. ಈ ತತ್ವವನ್ನು ಯಾವನು ಚೆನ್ನಾಗಿ ತಿಳಿದಿರುವನೋ, ಅವನು