ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


هاد ಶ್ರೀಮದ್ಭಾಗವತರು [ಅಧ್ಯಾ, ೨೪. ಯಥೇಚ್ಛ ಪ್ರವರ್ತನವನ್ನು ತಡೆಯುವುದೇ ಸಮಸ್ಯಯೋಗಗಳ ಸಾರವೆಂದು ತಿಳಿ ! ಉದ್ಯವಾ! ಭಿಕ್ಷುಕನಾದ ಆ ಬ್ರಾಹ್ಮಣನು ಹೇಳಿದ ಈ ಗಾಥೆಯನ್ನು ಶ್ರದ್ದೆಯಿಂದ ಕೇಳುವವರೂ, ಮತ್ತೊಬ್ಬರಿಗೆ ಉಪದೇಶಿಸುವರೂ, ಪ್ರಾಕೃತಜನರಂತೆ ಸುಖದುಃಖಾದಿ ದ್ವಂದ್ವಗಳಿಗೆ ಈಡಾಗದೆ, ಪರಮಾತ್ಮ ನಿಷ್ಠೆಯಿಂದ ಮುಕ್ತಿಯನ್ನು ಪಡೆಯುವರು. ಇದು ಇಪ್ಪತ್ತು ಮೂರನೆಯ ಅಧ್ಯಾಯವು. ದೇಶಿಸಿದುದು, +++ ( ಶ್ರೀಕೃಷ್ಣನು ಉದ್ಧವನಿಗೆ ಸಾಂಖ್ಯ ತತ್ವವನ್ನು ಪ

      • ದೇಶಿಸಿದುದು. * * J ಉದ್ಯವಾ!ಇನ್ನು ನಾನು ನಿನಗೆ ಸಾಂಖ್ಯವನ್ನು ಎಂದರೆ, ಪ್ರಕೃತಿ ರುಹೇಶ್ವರರೆಂಬ ತತ್ವತ್ರಯದ ಸ್ವರೂಪವಿಭಾಗವನ್ನು ತಿಳಿಸುವೆನು ಕೇಳು. ಪುರಾತನಮಹರ್ಷಿಗಳಿಂದ ನಿಶ್ಚಯಿಸಲ್ಪಟ್ಟ ಈ ತತ್ವವನ್ನು ತಿಳಿದವನಿಗೆ, ತಾನೆಂದೂ, ಅನ್ಯನೆಂದೂ, ದೇಹವೇ ಆತ್ಮವೆಂದೂ ನಾನಾವಿಧವಾಗಿ ಭೇದ ಬುದ್ದಿಯನ್ನು ಹುಟ್ಟಿಸತಕ್ಕ ಭ್ರಮಗಳೆಲ್ಲವೂ ಬಿಟ್ಟು ಹೋಗುವುವು. ಸೃಷ್ಟಿ ಗೆ ಮೊದಲು ಪ್ರಳಯಾವಸ್ಥೆಯಲ್ಲಿ ಚಿದಚಿತ್ತುಗಳೆಂಬ ಜೀವಪ್ರಕೃತಿಗಳೆರ ಡೂ, ನಾಮರೂಪವಿಭಾಗಗಳೇ ಇಲ್ಲದಂತೆ, ಅತಿಸೂಕ್ಷವಾಗಿ, ಈಶ್ವರನಿಗೆ ಶರೀರವೆನಿಸಿಕೊಂಡು, ಅವನೊಡನೆಯೇ ಸೇರಿದ್ದುದರಿಂದ, ಚಿದಚಿಹೇಶ್ವರ ರೆಂಬ ಮೂರುತ್ತತ್ವಗಳೂ ಒಂದೇ ಆಕಾರದಿಂದ ಕಾಣಿಸುತ್ತಿದ್ದುವು. ಪ್ರಳ ಯದಶೆಯು ಮುಗಿದಮೇಲೆ, ಮೊದಲನೆಯದಾದ ಮತ್ತು ನಿರುಪಮಾನವಾ ದ ಕೃತಯುಗದಲ್ಲಿ, ಚಿದಚಿ ದೀಶ್ವರರೆಂಬ ತತ್ವತ್ರಯವಿವೇಚನೆಯುಳ್ಳ ವಿದ್ವಾಂಸರು, ಸೂಕ್ಷಚಿದಚಿಕಿಷ್ಟವಾಗಿ ಸರಕಾರಣವೆನಿಸಿಕೊಂಡ ಆಪರಬ್ರಹ್ಮ ಸ್ವರೂಪವನ್ನೇ ಉಪಾಸಿಸುತಿದ್ದರು. ಆ ಬ್ರಹ್ಮ ಸ್ವರೂಪವು ಸತ್ಯಾಡಿಗುಣಗಳ ವೈಷಮ್ಯವಿಲ್ಲದುದು. ಜಾಗ್ಯಾದಿ ವಿಕಲ್ಪರಹಿತವಾದುದು. ಮನಸ್ಸಿಗೂ ವಾಕ್ಕಿಗೂ ಆಗೋಚರವಾದ ಸ್ವರೂಪಸ್ವಭಾವಗಳುಳ್ಳುದು, ನಿರೀಕಾರವಾದುದು. ಎಲ್ಲಕ್ಕಿಂತಲೂ ಬೃಹತ್ತಾದುದರಿಂದ ಬ್ರಹ್ಮಶಬ್ದವಾ ಚ್ಯವಾಗಿರುವುದು. ಆ ಬ್ರಹ್ಮಕ್ಕೆ ಪ್ರಳಯದಶೆಯಲ್ಲಿ, ಮಾಯೆ (ಪ್ರಕೃತಿ)