ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೨೪.) ಏಕಾದಶಸ್ಕಂಧವು. ೨೭೧೬ ರೂಪವಾಗಿ, ಮಹರ್ಲೋಕ, ಜನಲೋಕ, ತಪೋಲೋಕ, ಸತ್ಯಲೋಕಗ ಳೆಂಬ ಕೇವಲಸಮಯಗಳಾದ ಪುಣ್ಯಲೋಕಗಳು ಏರ್ಪ್ಪಟ್ಟಿರುವುವು. ನನ್ನಲ್ಲಿ ಭಕ್ತಿಯೋಗವುಳ್ಳವರಿಗೆ ನನ್ನ ನಿಜಸ್ಥಾನವಾದ ಪರಮಪದವೇ ಲ ಭಿಸುವುದು. ಉದ್ಯವಾ! ಕರಪ್ರಾಪ್ಯಗಳಾದ ಸಮಸ್ತಲೋಕಗಳನ್ನೂ ನಾನೇ ಅಂತರಾತ್ಮರೂಪದಿಂದ ಒಳಗೂ, ಕಾಲರೂಪದಿಂದ ಹೊರಗೂ ವ್ಯಾಪಿಸಿ, ಭರಿಸುತ್ತ, ಅವುಗಳನ್ನು ನಡೆಸುತ್ತಿರುವೆನು. ಆದುದರಿಂದ ನನ್ನಿ೦ ದಲೇ ಸಮಸ್ತ ಜಗತ್ತೂ ಸತ್ಯಾಣಗುಣಗಳ ಪ್ರವಾಹರೂಪವಾದ ಪ್ರಕೃ. ತಿಯಲ್ಲಿ ಆಗಾಗ ಗೋಚರಿಸುತ್ತಲೂ, ಲಯಿಸುತ್ತಲೂ ಇರುವುವು. ಆ ದರೆ, ಈ ಉತ್ಪತ್ತಿಲಯಗಳೆಲ್ಲವೂ ಅವರವರ ಕರೆಗಳಿಗನುಸಾರವಾಗಿ ನಡೆಸಲ್ಪಡುವುವೇ ಹೊರತು ನಾನು ಸ್ವಚ್ಛೆಯಿಂದ ನಡೆಸುವವನಲ್ಲ. ಲೋಕದಲ್ಲಿ ಚಿಕ್ಕದು, ದೊಡ್ಡದು, ಸಣ್ಣದು, ಮಹತ್ತಾದುದು, ಎಂಬೀ ಆಕಾರಭೇದಗಳುಳ್ಳ ಯಾವಯಾವ ಪದಾರಗಳುಂಟೋ ಅವೆಲ್ಲವೂ ಪ್ರ ಕೃತಿಪುರುಷರೆಂಬ ಎರಡರ ಸಂಯೋಗದಿಂದಲೇ ತೋರುತ್ತಿರುವುವು. ಕಾರ ರೂಪವಾದ ಒಂದು ವಸ್ತುವಿನ ಉತ್ಪತ್ತಿಗೆ ಮೊದಲೂ, ಅಂತ್ಯದಲ್ಲಿಯೂ ಯಾವುದು ಕಾರಣವೆನಿಸಿರುವುದೋ, ಅದೇ ಇವುಗಳ ಮಧ್ಯಕಾಲ ದಲ್ಲಿಯೂ ಎಂದರೆ, ಆ ಕಾಲ್ಯಾವಸ್ಥೆಯಲ್ಲಿಯೂ ಕಾರಣರೂಪವಾಗಿ ಆ ವಸ್ತುವಿನಲ್ಲಿ ಸೇರಿಯೇ ಇರುವುದು. ಹೇಗೆಂದರೆ, ಕಿರೀಟಕುಂಡಲಾದ್ಯಾಭ ರಣಗಳಿಗೂ, ಹರವಿ, ಮಡಕೆ, ಮುಂತಾದ ಪಾತ್ರೆಗಳಿಗೂ, ಆದ್ಯಂತಗಳಲ್ಲಿ ಕಾರಣರೂಪವಾಗಿದ್ದ ಬಂಗಾರವೂ, ಮಣ್ಣೂ, ಅವುಗಳ ಕಾರೈದಶೆಯಲ್ಲಿ ಯೂ ಸೇರಿರುವುವಲ್ಲವೆ? ಇದರಿಂದ ಒಂದೇ ವಸ್ತುವಿಗೆ ಬೇರೆಬೇರೆ ಆವಸ್ತಾ ಭೇದಗಳಲ್ಲಿ ಬೇರೆಬೇರೆ ನಾಮಗಳು ವ್ಯವಹರಿಸಲ್ಪಡುವುವೇಹೊರತು ಬೇರೆಯಲ್ಲ. ಆದುದರಿಂದ ಈ ವಿಕಾರಗಳೆಲ್ಲವೂ ಕೇವಲವ್ಯವಹಾರಾರ್ ವಾಗಿಯೇ ಎಂಬುದು ಸ್ಪಷ್ಟವು. ಈ ನಿದರ್ಶನದಿಂದ ಒಂದವಸ್ಥೆಯಲ್ಲಿ ರುವ ಒಂದು ಪದಾರವು, ಯಾವ ದ್ರವ್ಯವನ್ನು ಉಪಾದಾನಕಾರಣವಾಗಿ ಹೊಂದಿ, ಆ ಅವಸ್ಥೆಯನ್ನು ಹೊಂದಿರುವುದೋ, ಆ ಉಪಾದಾನವಸ್ತುವಿನ ಸ್ವರೂಪವಾಗಿಯೇ ಇದ್ದು, ಕೊನೆಗೆ ಕಾರೈದಶೆಯಲ್ಲಿ ತನಗಿದ್ದ ಆಕಾರವು