ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೨೦ ಶ್ರೀಮದ್ಭಾಗವತರ [ಅಧ್ಯಾ, ೨೫, ಗವಿಯೋಗಗಳೂ ಇಲ್ಲ. ಉದ್ದವಾ! ಹೀಗೆ, ಪ್ರಕೃತಿ, ಪುರುಷ, ಕಾಲ, ಈ ಶ್ವರರೆಂಬ ನಾಲ್ಕು ಬಗೆಯ ತತ್ವಗಳನ್ನೂ, ಅವುಗಳಿಂದೇರ್ಪ್ಪಡುವ ಪ್ರ ಪಂಚದ ಉತ್ಪತ್ತಿಲಯಕ್ರಮಗಳನ್ನೂ ವಿಮರ್ಶಯಿಂದ ತಿಳಿದವರಿಗೆ, ಸೂರೋದಯದಿಂದ ಅಂಧಕಾರವು ಹೇಗೋ ಹಾಗೆ, ದೇಹಾತ್ಮವಿಚಾರ ವಾದ ವೈಕಲ್ಪಿಕ ಭಮಗಳೆಲ್ಲವೂ ಬಿಟ್ಟು ಹೋಗುವುವು. ಪರಾವರ ತತ್ವ ಗಳೆಲ್ಲವನ್ನೂ ಸಾಕ್ಷಾತ್ಕರಿಸಬಲ್ಲ ನಾನು, ನಿನ್ನ ಸಮಸ್ತ ಸಂಶಯಗಳೂ ನೀಗುವಂತೆ, ಈ ಸಾಂಖ್ಯವಿಧಿಯನ್ನು ಸೃಷ್ಟಿಕ್ರಮದಿಂದಲೂ, ಲಯಕ್ರಮ ದಿಂದಲೂ ವಿವರವಾಗಿ ತಿಳಿಸಿರುವೆನು. ಇದು ಇಪ್ಪತ್ತು ನಾಲ್ಕನೆಯ ಅಧ್ಯಾಯವು. ... ( ಸತಾದಿಗುಳಗಳ ಸಂಬಂಧದಿಂದಲೂ, ನಿರ್ಗುಸನ್ನ

  • * ದಿಂದಲೂ ಉಂಟಾಗುವ ಫಲಗಳು. "

ಉದ್ದವಾ ! ಮನುಷ್ಯರಲ್ಲಿ ಸತ್ವರಜಸ್ತಮೋಗುಣಗಳು ಪ್ರತ್ಯೇಕ ವಾಗಿಯಾಗಲಿ, ಮಿಶ್ರವಾಗಿಯಾಗಲಿ ಕಲೆತಿದ್ದಾಗ, ಅಂತವನು ಯಾವ ಯಾವಗುಣಗಳಿಂದ ಯಾವವಿಧವಾದ ಅಭಿನಿವೇಶವುಳ್ಳವನಾಗುವನೆಂಬು ದನ್ನು ನಿನಗೆ ಹೇಳುವೆನು ಕೇಳು. ಮನೋನಿಗ್ರಹರೂಪವಾದ ಶಮ, ಬಾಂದ್ರಿಯನಿಗ್ರಹರೂಪವಾದ ದಮ, ತತ್ವವಿಮರ್ಶೆ, ತಪಸ್ಸು, ಸತ್ಯ, ಸ್ಮತಿ, ತುಷಿ, ತ್ಯಾಗ, ವೈರಾಗ್ಯ, ಆಸ್ತಿ, ಆಯುಕ್ತ ಕಾರಗಳಲ್ಲಿ ನಾಚಿಕೆ, ದಾನ, ಋಜುತ್ವ, ವಿನಯ, ಮೊದಲಾದ ಸುಗುಣ ಗಳೂ, ಆತ್ಮಾನುಭವದಿಂದುಂಟಾದ ಸುಖಾನುಭವವೂ ಸತ್ವಗುಣದ ಚಿಹ್ನೆಗಳು. ವಿಷಯಾನುಭವದಲ್ಲಿ ಆತುರ, ಕಾಮೋಪಭೋಗಗಳಿ ಗಾಗಿ ಪ್ರವರ್ತನೆ, ಮದ, ಕೃಷ್ಣ, ಗತ್ವ, ಅಶ್ರವೈಷಮ್ಯ, ವಿಷಯಾಸಕ್ತಿ, ಸಾಹಸಕಗಳಲ್ಲಿ ಉತ್ಸಾಹ, ಸ್ತೋತ್ರಪ್ರಿಯತ್ವ, ಅಪಹಾಸ್ಯ, ತನ್ನ ಹೆಮ್ಮೆಯನ್ನು ಹೇಳಿಕೊಳ್ಳುವುದು, ಬಲದಿಂದ ಕಾವ್ಯಸಾಧನೆ, ಇವೆ ಲವೂ ರಜೋಗುಣದ ಚಿಹ್ನಗಳು, ಕೋಧ, ಲೋಭ, ಅನೃತ, ಹಿಂಸೆ, ಯಾಚನೆ, ಪಂಭ (ವಂಚನೆ) ಬಳಲಿಕ, ಕಲಹ, ಶೋಕ, ಮೋಹ, ದುಃಖ