ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܐܦ ಅಣ್ಯಾ, ೨೫ || ಏಕಾದಶಸ್ಕಂಧವು. ದೈನ್ಯ, ಅತ್ಯಾಶೆ, ಭಯ, ಸೋಮಾರಿತನ, ಇವೆಲ್ಲವೂ ತಮೋಗುಣವುಳ್ಳವರ ಲಕ್ಷಣಗಳು. ಮೇಲೆ ಹೇಳಿದ ಬೇರೆಬೇರೆ ಲಕ್ಷಣಗಳಿಂದ, ಮನುಷ್ಯನು ಸಾತ್ವಿಕನೆಂದೂ, ರಾಜಸನೆಂದೂ, ತಾಮಸನೆಂದೂ ಹೇಳಲ್ಪಡುವನು. ಒಬ್ಬನಲ್ಲಿಯೇ ಈ ಗುಣಗಳು ಮಿಶ್ರವಾಗಿ ಕಲೆತಿದ್ದಾಗ,ಅವನ ಲಕ್ಷಣಗಳನ್ನು ತಿಳಿಸುವೆನು ಕೇಳು. 14ನಾನು” “ನನ್ನ ದು” ಎಂಬ ಅಹಂಕಾರಮಮಕಾರ ಪ್ರಯುಕ್ತವಾದ ಬುದ್ಧಿಯೇ ಆ ಗುಣಗಳ ಮಿಶ್ರಣದಿಂದುಂಟಾದ ಕಾರ್ ವು ! ಮತ್ತು ಆ ಅಹಂಕಾರಮಮಕಾರಗಳಮೂಲಕವಾಗಿ, ಮನಸ್ಸು, ಇಂದ್ರಿಯಗಳು, ದೇಹ, ಪ್ರಾಣಗಳು ಇವುಗಳಿಂದ ನಡೆಯುವ ವ್ಯವ ಹಾರಗಳೂ ಆ ಮಿಶ್ರಗುಣಗಳ ಕಾರವೇ ! ಮತ್ತು ಪುರುಷನು ಧರಾ ರ್ಥಕಾಮಗಳೆಂಬ ತ್ರಿವರ್ಗಗಳಲ್ಲಿ ನಿಷ್ಠೆಯುಳ್ಳವನಾಗಿ, ಶ್ರದ್ಧೆಯನ್ನೂ, ಧನವನ್ನೂ, ರತಿಯನ್ನೂ ಹೆಚ್ಚಿಸತಕ್ಕ ಯಾವಯಾವ ಕಾವ್ಯಗಳನ್ನು ನಡ ಸುವನೋ ಅವೆಲ್ಲವೂ ಸಾಧಿಗುಣಗಳ ಮಿಶ್ರಣದಿಂದಲೇ ಉಂಟಾಗತಕ್ಕ ವ್ಯಾಪಾರಗಳು. ಈ ಥರಾ ರ್ಥಕಾಮಗಳಲ್ಲಿ ಯಾವನು ನಿಷ್ಠೆಯುಳ್ಳವ ನಾಗಿರುವನೋ, ಅವನು ತನ್ನ ವರ್ಣಾಶ್ರಮಧುಗಳೆಲ್ಲವನ್ನೂ ಫಲಾ ಪೇಕ್ಷೆಯಿಂದಲೇ ನಡೆಸುವನು. ಈ ವಿಧವಾದ ಪೃವೃತ್ತಿಧರನಿಷ್ಠೆಯೂ ಆ ಮಿಶ್ರಗುಣಗಳ ಕಾಠ್ಯವೆಂದೇ ತಿಳಿಯಬೇಕು. ಉದ್ದವಾ ! ಮುಖ್ಯವಾಗಿ ಒಬ್ಬ ಮನುಷ್ಯನಲ್ಲಿ ಶಮದಮಾರಿಗುಣಗಳು ಕಂಡುಬಂದಾಗ, ಅವನನ್ನು ಸಾತ್ವಿಕನೆಂದೂ, ಕಾಮಾದಿಗಳು ಕಂಡುಬಂದಾಗ ಅಂತವನನ್ನು ರಾಜಸ ನೆಂದೂ, ಕ್ರೋಧಾದಿದುರ್ಗುಣಗಳಿದ್ದಾಗ ಆ ಮನುಷ್ಯನನ್ನು ತಾಮಸ ನೆಂದೂ ಅನುಮಾನಿಸಿ ತಿಳಿದುಕೊಳ್ಳಬಹುದು. ಫಲಾಪೇಕ್ಷೆಯಿಲ್ಲದೆ, ತನ್ನ ತನ್ನ ವರ್ಣಾಶ್ರಮಧರಗಳಿಂದ ಭಕ್ತಿಪೂರೈಕವಾಗಿ ನನ್ನನ್ನಾ ರಾಧಿಸತಕ್ಕ ವರು, ಪುರುಷರಾಗಲಿ, ಸ್ತ್ರೀಯರಾಗಲಿ, ಅವರನ್ನು ಸಾಕಪ್ರಕೃತಿಯುಳ್ಳ ವರೆಂದೇ ತಿಳಿಯಬೇಕು. ಫಲಾಪೇಕ್ಷೆಯಿಂದ ನನ್ನ ನಾರಾಧಿಸತಕ್ಕವರು ರಾಜಸಪ್ರಕೃತಿಗಳು. ಶತ್ರುವನವೇ ಮೊದಲಾದ ಹಿಂಸೆಗಳನ್ನುದ್ದೇಶಿಸಿ ಆದ ಕ್ಯಾಗಿಯೇ ನನ್ನ ನ್ಯಾಧಿಸಿದರೆ, ಅಂತವರನ್ನು ಶಾಮಶಪ್ರಕೃತಿಯುಳ್ಳವ ರೆಂದು ತಿಳಿಯಬೇಕು. ಸತ್ವರಜಸ್ತಮಸ್ಸುಗಳೆಂಬ ಈ ಮೂರುಗುಣಗಳೂ