ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೨೨ ಶ್ರೀಮದ್ಭಾಗವತರು [ಅಜ್ಞಾ, ೨೫, ಜೀವನನ್ನು ಬಂಧಿಸುವುವೇ ಹೊರತು, ನನ್ನನ್ನು ಬಂಧಿಸಲಾರವು. ಏಕೆಂ ದರೆ, ಈ ಗುಣಗಳು ಆಯಾಜೀವನ ಮಗ ಹುಟ್ಟಿಸುವುದರಿಂದಲೇ, ಅವನು ಪಂಚಭೂತಪರಿಣಾಮಾತ್ಮಕವಾದ ದೇಹದಲ್ಲಿಯೂ,ಆದೇಹಕ್ಕೆ ಸಂಬಂಧಿಸಿದ ವಿಷಯಗಳಲ್ಲಿಯೂ ಬಂಧಿಸಲ್ಪಡು ವನು. ರಜಸ್ತಮೋಗುಣಗಳಡಗಿಸಿ ಸತ್ವಗುಣವು ತಲೆಯೆತ್ತಿದಾಗ ಮನು ವ್ಯನ ಮನಸ್ಸು, ಸ್ವಚ್ಛವಾಗಿಯೂ, ನಿಷ್ಕಲ್ಮಷವಾಗಿಯೂ, ಶಾಂತವಾ ಗಿಯೂ ಆಗುವುದು. ಆಗ ಪುರುಷನು ಧರೆ, ಜ್ಞಾನ, ಶಮ, ದಮಾದಿಗುಣ ಗಳುಳ್ಳವನಾಗಿ ಸುಖಿಸುವನು. ಯಾವಾಗ ತಮೋಗುಣಸತ್ವಗುಣಗಳೆರ ಡನೂ ಅಡಗಿಸಿ, ರಜೋಗುಣವು ತಲೆಯೆತು ವದೋ, ಆಗ ಪುರುಷನ ಮನಸ್ಸು ಭೋಗಾಸಕ್ತವಾಗಿ, ಶಬ್ದಾದಿವಿಷಯಾನುಭವದಕಡೆಗೇ ಓಡು ತಿರುವುದು. ಇದರಿಂದ ಮನುಷ್ಯನು ಮನಸ್ಸಿನಲ್ಲಿ ಶಾಂತಿಯಿಲ್ಲದೆ, ಫಲಾ ಪೇಕ್ಷೆಯುಳ್ಳ ಕರಗಳಿಗಾಗಿಯ, ಯಶಸ್ಸಿಗಾಗಿಯೂ, ಸಂಪತ್ತಿಗಾ ಗಿಯೂ ಆತುರಪಟ್ಟು ದುಃಖಿಸುವನು. ಸತ್ವರಜೋಗುಣಗಳೆರಡನ್ನೂ ನಿಗ್ರಹಿಸಿ ಯಾವಾಗ ತಮೋಗುಣವು ತಲೆಯೆತ್ತುವುದೋ, ಆಗ ಮನಸ್ಸು ವಿವೇಕಜ್ಞಾನವಿಲ್ಲದೆ, ಕೇವಲಜಡವಾಗಿಯೂ, ಉತ್ಸಾಹಹೀನವಾಗಿಯೂ ಆಗುವುದು. ಇದರಿಂದ ಮನುಷ್ಯನು ಶೋಕ, ಮೋಹ, ನಿದ್ರೆ, ಭೂತ ದ್ರೋಹ, ಅತ್ಯಾಶೆ, ಮೊದಲಾದ ವಿಕಲ್ಪಗಳಿಗೆ ಈಡಾಗುವನು. ಯಾವಾಗ ಮನಸ್ಸು ಶಾಂತವಾಗಿರುವುದೋ, ಆಗ ಇಂದ್ರಿಯಗಳು ವಿಷಯಾತುರವನ್ನು ಬಿಟ್ಟು ನೆಮ್ಮದಿಯಿಂದಿರುವುವು. ದೇಹದಲ್ಲಿಯೂ ರೋಗಾದಿಗಳ ಭಯವು ತೋರದು ಮನಸ್ಸು ವಿಷಯಾಸಕ್ತಿಯಿಂದುಂಟಾದ ಕಳವಳವಿಲ್ಲದಿರುವುದು. ಈ ಲಕ್ಷಣಗಳಿದ್ದಾಗ ಸತ್ವಗುಣವು ಉದ್ರೇಕಹೊಂದಿರುವುದಾಗಿ ತಿಳಿ ! ಈ ವಿಧವಾದ ಸ್ಥಿತಿಯೇ ನನ್ನ ಸ್ವರೂಪವನ್ನು ಸಾಕ್ಷಾತ್ಕರಿಸುವುದಕ್ಕೆ ಸಹ ಕಾರಿಯಾಗುವುದು. ಯಾವಾಗ ಪುರುಷನು ಒಳ್ಳೆಯದಾಗಲಿ, ಕೆಟ್ಟುದಾ ಗಲಿ,ಯಾವುದಾದರೂ ಒಂದು ಕಾವ್ಯದಲ್ಲಿ ಆಸಕ್ತನಾಗಿ,ಅದನ್ನು ನಡೆಸುತ್ತ, ಆ ಕರಗಳಿಗೆ ಘಲರೂಪವಾದ ಹರ್ಷಶೋಕಾದಿವಿಕಾರಗಳನ್ನೂ ಅನುಭವಿ ಸುತ್ತ,ಅದರಿಂದ ಮನಶ್ಯಾಂತಿಯಿಲ್ಲದಿರುವನೋ, ಮತ್ತು ಅವನ ಜ್ಞಾನೇಂ