ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೭ ಅಧ್ಯಾ, ೨ || ಏಕಾದಶಸ್ಕಂಧವ ಮಾಡುವುದಕ್ಕಾಗಿ, ಅಲ್ಲಲ್ಲಿ ಸಂಚರಿಸುತ್ತಿರುವುದು ಸಹಜವೇ ! ಅದು ಹಾಗಿ ರಲಿ ! ಜೀವಕೋಟಿಗೆ ನಾನಾಬಗೆಯ ದೇಹಸಂಬಂಧವುಂಟು. ಅವುಗಳಲ್ಲಿ ಮನುಷ್ಯ ದೇಹವುಮಾತ್ರ ಸುಲಭವಾಗಿ ಸಿಕ್ಕುವುದಿಲ್ಲ ! ಆನೇಕಜನ್ಮಗಳ ಸುಕೃತದಿಂದ ಇದನ್ನು ಪಡೆಯುವರು. ಅಷ್ಟು ಪುಣ್ಯವನ್ನು ಮಾಡಿ ಇದನ್ನು ಪಡೆದರೂ, ಇದು ಬಹಳದಿನಗಳವರೆಗೆ ನಿಲ್ಲತಕ್ಕುದಲ್ಲ. ಇಂತಹ ಮನುಷ್ಯ ಜನ್ಮವನ್ನೆತ್ತಿರುವಾಗಲೂ, ವೈಕುಂಠಪ್ರಿಯರಾದ ನಿಮ್ಮಂತವರ ದರ್ಶ ನವು ಎಲ್ಲರಿಗೂ ಸುಲಭವಲ್ಲ ! ಈ ಸಂಸಾರದಲ್ಲಿ ಅರ್ಧಕ್ಷಣವಾ ದರೂ ನಿಮ್ಮಂತಹ ಸಜ್ಜನರೊಡನೆ ಸಹವಾಸವು ಲಭಿಸಿದರೆ, ಅದೇ ಮನುಷ್ಯರಿಗೆ ದೊಡ್ಡ ಪುರುಷಾರ್ಥವೆಂಬುದರಲ್ಲಿ ಸಂದೇಹವಿಲ್ಲ. ಆದುದ ರಿಂದ ಈಗ ನಿಮ್ಮ ದರ್ಶನಕ್ಕೆ ಪಾತ್ರನಾಗಿ ನಾನು ಕೃತಾರ್ಥನಾದೆನು. ಓ ಮಹಾತ್ಮರೆ! ಲೋಕದಲ್ಲಿ ಮನುಷ್ಯನಿಗೆ ನಿರತಿಶಯವಾದ ಮತ್ತು ನಿರ್ಭಯ ವಾದ ಶ್ರೇಯಸ್ಸು ಯಾತರಿಂದುಂಟಾಗುವುದೋ,ಅದಕ್ಕೆ ಸಾಧನಗಳೇನೋ, ಅದನ್ನು ನನಗೆ ತಿಳಿಸಬೇಕು' ಭಗವತ್ಪಾಪಿಯೆ ಉತ್ತಮಪುರುಷಾರವೆಂ ದೂ, ಭಾಗವತಧಗಳೆ ಅದಕ್ಕೆ ಸಾಧನಗಳೆಂದೂ ನಾನು ಕೇಳಿರುವೆನು. ಆ ಭಾಗವತಧಮ್ಮಗಳಾವುವು? ನಾನು ಕೇಳಬಹುದಾಗಿದ್ದರೆ, ತಾವು ಅವುಗಳ ನ್ನು ನನಗೆ ವಿವರಿಸಿ ತಿಳಿಸಬೇಕು.” ಎಂದನು. ಮನುಷ್ಯನಿಗೆ ಉತ್ತಮವಾದ ಶ್ರೇಯಸ್ಸು, "1 ಯಸ್ಸು, ಮತ್ತು " ಅದಕ್ಕೆ ಸಾಧನಗಳು, ಮೊದಲು ಆ ಮಹರ್ಷಿಗಳಲ್ಲಿ ಮೊದಲನೆಯವನಾದ ಕವಿಯು ವಿದೇಹವನ್ನು ಕುರಿತು. ರಾಜೇಂದ್ರಾ ಕೇಳು! ಚೇತನರಿಗೆ ಸತ್ಯ ಮವಾದ ಶ್ರೇಯಸ್ವಾವುದೆಂದೂ, ಅದಕ್ಕೆ ಸಾಧನವೇನೆಂದೂ ಕೇಳಿದೆ ಯಲ್ಲವೆ” ಚೇತನರಿಗೆ ಸಂಸಾರವಿಮುಕ್ತಿಯೇ ಉತ್ತಮವಾದ ಶ್ರೇಯಸ್ಸು! ಮುಕ್ತಿಯೆಂಬುದು ಬೇರೆಯಲ್ಲ ! ಲೋಕದಲ್ಲಿ ಯಾವುದರಿಂದಲೂ ಭಯವಿಲ್ಲದೆ ನಿಶ್ಚಿಂತನಾಗಿರುವುದೇ ಮುಕ್ಕಿ ! ಈ ಜೀವದಶೆಯಲ್ಲಿ ನಿತ್ಯವೂ ಭಗವಂತನ ಪಾದಾರವಿಂದವನ್ನು ಉಪಾಸಿಸುತ್ತಿರುವುದೊಂದೇ ನಿರ್ಭಯ ವಾದ ಮಾರ್ಗವು. ಅದೇ ಸರೊತ್ತಮವಾದ ಶ್ರೇಯಸ್ಸಿಗೆ ಸಾಧನವು.