ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ܐܦܬܝ ಅಧ್ಯಾ, ೨೩.] ಏಕಾದಶಸ್ಕಂಧನು, ಗಿರುವುದೊ, ಅವನಿಗೆ ಎಷ್ಟು ವಿದ್ಯೆಯಿದ್ದರೇನು ? ಎಷ್ಟು ವಿವೇಕವಿದ್ದ ರೇನು ? ಮತ್ತು ಅವನಿಗೆ ತಪಸ್ಸಿನಿಂದಾಗಲಿ, ದಾನದಿಂದಾಗಲಿ, ಶಾಸ್ತ್ರ ಶ್ರವಣದಿಂದಾಗಲಿ, ವಿವಿಕ್ತವಾಸದಿಂದಾಗಲಿ, ಮೌನದಿಂದಾಗಲಿ, ಪ್ರ ಯೋಜನವೇನು ? ಆಹಾ ! ನಾನು ಸಾಲ್ವಭಮಪದವಿಯನ್ನು ಹೊಂದಿ ದರೂ, ಒಬ್ಬ ಸ್ತ್ರೀಗೆ ವಶನಾಗಿ, ಪಶುವಿನಂತೆಯೂ, ಕತ್ತೆಯಂತೆಯೂ ಅವಳನ್ನು ಹಿಂಬಾಲಿಸಿ ಓಡಿಹೋದೆನು! ಹೀಗೆ ನಾನು ನನ್ನ ಶ್ರೇಯಸ್ಸನ್ನೇ ತಿಳಿಯದ ಮೂಢನಾಗಿದ್ದರೂ, ನಾನೇ ಪಂಡಿತನೆಂಬ ಅಭಿಮಾನವುಮಾತ್ರ ಇದುವರೆಗೂ ನನ್ನನ್ನು ಬಿಟ್ಟ ಹಾಗಿಲ್ಲ. ಛೇ ! ಈ ನನ್ನ ಜನ್ಮವನ್ನು ಸುಡ ಬೇಕಲ್ಲವೆ ? ಈ ನನ್ನ ಜನ್ಮವೊಂದು ಜನ್ಮವೆ? ಹಿಂದೆ ಅನೇಕವರ್ಷಗಳವ ರೆಗೆ ನಾನು ಆಗಾಗ ಆ ವೇಶೈಯ ಅಧರಪಾನವನ್ನು ಮಾಡುತಿದ್ದರೂ, ನನ್ನ ಮನಸ್ಸಿಗೆ ತೃಪ್ತಿಯಿಲ್ಲದೆ ಹೋಯಿತು. ಆಹುತಿಯನ್ನಿಕ್ಕಿದಷ್ಟೂ ಆಗ್ನಿ ಯು ಮೇಲೆಮೇಲೆ ಜ್ವಲಿಸುವಂತೆ, ನಾನು ವಿಷಯಸು ಖಗಳನ್ನನುಭವಿಸಿದಷ್ಟೂ, ಕಾಮವು ಹೆಚ್ಚುತ್ತಲೇ ಬಂದಿತು. ಇಂತಹ ಜಾರೆಯರಿಂದ ಅಪಹರಿಸಲ್ಪಡುವ ಮನಸ್ಸನ್ನು ಹಿಂತಿರುಗಿಸಬೇಕೆಂದರೆ, ಆತ್ಮಾರಾಮನಾದ ಆ ಸರೇಶ್ವರನೊಬ್ಬನಹೊರತು ಬೇರೊಬ್ಬರೂ ಸ ಮರರಲ್ಲವೆಂದೇ ನನಗೆ ತೋರುವುದು. ಅಥವಾ ಆ ಸ್ತ್ರೀಯರನ್ನು ತಾನೇ ಏಕೆ ನಿಂದಿಸಬೇಕು? ಆ ಊಧ್ವತಿಯು ನನಗೆ ಮೊದಲು ಎಷ್ಟೋ ವಿಧವಾಗಿ ಬುದ್ಧಿವಾದಗಳನ್ನು ಹೇಳಿ ಬೋಧಿಸಿದಳು. ಅವಳಲ್ಲಿ ಸ್ವಲ್ಪ ಮಾತ್ರವೂ ತಪ್ಪಿದ್ದವು. ನಾನೇ ಇಂದ್ರಿಯಗಳನ್ನು ಜಯಿಸಲಾರದೆ ಬುದ್ಧಿಗೆಟ್ಟು ಅವ ಇನ್ನು 'ಹಿಂಬಾಲಿಸಿದನು. ಅವಳು ಎಷ್ಟೊವಿಧದಲ್ಲಿ ನನಗೆ ಹಿತವನ್ನು ಹೇಳಿ ನಿವಾರಿಸಿದರೂ ನನ್ನ ಮನಸ್ಸಿನ ಮಹಾಮೋಹವು ನನ್ನನ್ನು ಬಿಡದೆ ಹೂ ಯಿತು. ಅವಳು ನನಗೆ ಮಾಡಿದ ತಪ್ಪೇನು ? ಒಂದು ಹಗ್ಗವನ್ನು ನೋಡಿ ಅದರ ನಿಜಸ್ವರೂಪವನ್ನು ತಿಳಿಯಲಾರದ ಮೂಢನು. ಅದನ್ನು ಸರ್ಪ ವೆಂದು ಭ್ರಮಿಸಿದರೆ, ಅದು ಅವನ ಮನಸ್ಸಿನ ಭ್ರಾಂತಿಯೇ ಹೊರತು ಅಲ್ಲಿ ಆಹಗ್ಗವು ಮಾಡಿದ ಅಪಕಾರವೇನು? ಹಾಗೆಯೇ ಇಂದ್ರಿಯಗಳನ್ನು ಜಯಿ ಸಲಾರದವನು, ದೇಹವನ್ನೇ ಆತ್ಮವೆಂದು ಭ್ರಮಿಸಿದರೆ, ಅದರಲ್ಲಿ ದೇಹವು