ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


410 ಶ್ರೀಮದ್ಭಾಗವತರು [ಅಧ್ಯಾ, ೨. ಮಾಡಿದ ಅಪಕಾರವೇನು ? ಈ ದೇಹವೆಂಬುದು ದುರ್ಗಂಧಾದಿದೋಷ ಗಳಿಗೆ ನೆಲೆಯಾಗಿ, ಅಶುಚಿಯಾಗಿಯಾಗಿರುವುದು. ಕೇವಲ ಮಲಿನವಾದ ಈ ದೇಹದಲ್ಲಿ ಸೌಗಂಧ್ಯವೇ ಮೊದಲಾಗಿ ಮನೋಹರಗಳಾದ ಗುಣಗಳನ್ನು ಭಾ ವಿಸಿ ಅಭಿಮಾನಿಸುವುದು ಅಜ್ಞಾನದ ಕಾರವಲ್ಲವೆ? ದೇಹವನ್ನು ಯಾರ ಸ್ವ ತೆಂದು ಹೇಳಬಹುದು. ಈ ದೇಹವನ್ನು ಹುಟ್ಟಿಸಿದ ತಾಯಿತಂದೆಗಳಿಗೆ ಸೇ ರಿದುದೆ?ಅಥವಾ ಈ ದೇಹಸಂಬಂಧದಿಂದ ಸುಖಾನುಭವವನ್ನು ಮಾಡತಕ್ಕ ಹೆಂಡಿರದೆ?ಅನ್ನ ವಿನ್ನು ಕಾಪಾಡತಕ್ಕೆ ಒಡೆಯನಾದೆ' ಕೊನೆಗೆ ಇದನ್ನು ಭಸ್ಮ ಮಾಡತಕ್ಕ ಅಗ್ನಿಗೆ ಸೇರಿದುದೆ ? ಆಹಾರವಾಗಿ ಭಕ್ಷಿಸತಕ್ಕ ನಾಯಿ, ನರಿ, ಹದ್ದು ಮುಂತಾದ ಪ್ರಾಣಿಗಳಿಗೆ ಸೇರಿದುದೆ? ತನ್ನ ಅಸಿಗಾದರೂ ಆ ದು ಸ್ವಂತವೆ ? ಅನುಬಂಧಿಗಳಾದ ಇಷ್ಟಮಿತ್ರಬಂಧುಗಳದೆ ? ಇವರಲ್ಲಿ ಯಾರಿಗೆ ಈ ದೇಹವನ್ನು ಸ್ವಂತವೆಂದು ಹೇಳಬಹುದು' ಹೀಗೆ ಈ ದೇಹ ದಲ್ಲಿ ಅನೇಕರಿಗೆ ಬಾಧ್ಯತೆಯುಂಟೆಂಬುದನ್ನು ತಿಳಿದು,ಯಾವನು, ಅದನ್ನು ತನ್ನ ದಲ್ಲವೆಂದು ಅವರ ಅಭಿಮಾನವನ್ನು ಬಿಡುವನೋ, ಅವನಿಗೆ ಯಾವ ವಿಧ ಒಂದಲೂ ದುಃಖವಿಲ್ಲ ! ದೇಹವೆಂಬುದು ಹುಟ್ಟಿದುದು ಮೊದಲು ಅಶುಚಿ ಯಾಗಿಯೇ ಇದ್ದು! ಕೊನೆಗೆ ಏನೂ ಇಲ್ಲದಂತೆಯೂ ಹೋಗುವುದು, ಇಂತಹ ದೇಹವನ್ನು ನೋಡಿ ಮೂಢಜನರು « ಆಹಾ ! ಆ ಸುಂದರಿಯ ಮೈಕಟ್ಟು ಎಷ್ಟು ಮನೋಹರವಾಗಿರುವುದು ? ಅವಳ ಮೂಗೋ ! ಆ ಎಲ ಕಣೋ! ಮುಗುಳಗೆಯನ್ನು ಬೀರುತ್ತಿರುವ ಅವಳ ಮುಖವೋ ! ಆ ಸೌಂದರವನ್ನು ಎಷ್ಟು ವರ್ಣಿಸಿದರೂ ತೀರದು” ಎಂದು ಅದರಲ್ಲಿ ಮೋಹಿತರಾಗಿ ಕಳವಳಿಸುವರು. ರಕ್ತ, ಮಾಂಸ ಮೇದಸ್ಸು, ಮಜ್ಜೆ, 'ಸ್ನಾಯು, ಅಪ್ಪಿ, ಚರ್ಮ,ಗಳೆಂಬ ಸಪ್ತಧಾತುಗಳಿಂದಲೂ, ಮಲಮೂ ಗ್ರಾದಿ ದುರ್ಗಂಥಗಳಿಂದಲೂ ತುಂಬಿದ ಇಂತಹ ದೇಹದಲ್ಲಿ ಮೋಹವನ್ನಿ ಮೈು, ಅದರೊಡನೆ ರಮಿಸತಕ್ಕವರಿಗೂ, ಕೀವು, ರಕ್ತಮಾಂಸ, ಮಲ, ಮೂ ಶ್ರಾದಿಗಳಲ್ಲಿಯೇ ಬಿದ್ದು, ಅವುಗಳನ್ನು ತಿಂದು ಜೀವಿಸುವ ಕ್ರಿಮಿಗಳಿಗೂ ವ್ಯತ್ಯಾಸವೇನು ? ಆತ್ಮಹಿತವನ್ನು ಬಯಸತಕ್ಕವನು, ಇಂತಹ ಸ್ತ್ರೀಯ ರಲ್ಲಿಯೂ, ಸ್ತ್ರೀಸಂಗವುಳ್ಳವರಲ್ಲಿಯೂಎಂದಿಗೂ ಕಲೆರಿರಬಾರದು. ಇಂ