ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧. ಆಧ್ಯ. ೩.] ಏಕಾದಶಕ್ಕಂಥನ ದ್ರಿಯಗಳೊಡನೆ ಶಬ್ದಾದಿವಿಷಯಗಳ ಸಂಬಂಧವಿದ್ದಾಗ ಮನಸ್ಸು ಕರು ವುದೇಕೊರತು, ಆ ವಿಷಯಗಳನ್ನು ಕಣ್ಣಿಂದ ನೋಡದೆಯೂ, ಕಿವಿ ಯಿಂದ ಕೇಳದೆಯೂ ಇದ್ದಾಗ, ಮನಕ್ಕೂ ಕಲಗಲಾರದು. ಪುರುಷರು, ತನ್ನ ಇಂದ್ರಿಯಗಳಿಗೆ ಅಂತಹ ದುರ್ವಿಷಯಗಳನ್ನು ದೂರಮಾಡಿದ್ದರೆ, ಆ ವನ ಮನಸ್ಸು ನಿಶ್ಚಲವಾಗಿಯೂ, ಶಾಂತವಾಗಿಯೂ ಇರುವುದು. ಆದುದ ರಿಂದ ಏವೇಕಿಯಾದವನು, ಸ್ತ್ರೀಯರೊಡನೆಯಾಗಲಿ, ಸ್ತ್ರೀಸಂಗವುಳ್ಳವ ರೊಡನೆಯಾಗಲಿ ಸಂಪರ್ಕವನ್ನೇ ಮಾಡಬಾರದು. ಇಂದ್ರಿಯಗಳಾರೂ, ಬಹಳ ಬಲವತ್ತರಗಳು ! ವಿದ್ವಾಂಸನನ್ನಾದರೂ ವಂಚಿಸದೆ ಬಿಡವು. ಹೀಗಿ ರುವಾಗ ನಮ್ಮಂತವರ ಪಾಡೇನು?” ಎಂದನು. ಉದ್ಯವಾ ! ರಾಜರಾಜನೆನಿಸಿಕೊಂಡ ಆ ಪುರೂರವನು ಹೀಗೆಂದು ಹೇಳಿ, ಒಡನೆಯೇ ಆ ಊರಶೀಲೋಕವನ್ನು ಬಿಟ್ಟು ಹಿಂತಿರುಗಿ ಬಂದು, ತನ್ನಲ್ಲಿ ಅಂತರಾತ್ಮನಾದ ನನ್ನನ್ನು ಧ್ಯಾನೋಪಾಸನೆಗಳಿಂದ ಸಾಕ್ಷಾತ್ಕರಿಸು ತ್ಯ, ಆ ಉಪಾಸನಾರೂಪವಾದ ಜ್ಞಾನಬಲದಿಂದ, ದೇಹಾಭಿಮಾನವೆಂಬ ' ಮೋಹವನ್ನು ನೀಗಿ, ಕೊನೆಗೆ ಮುಕ್ತನಾದನು. ಆದುದರಿಂದ ಉದ್ಭವಾ ! ತನ್ನ ಶ್ರೇಯಸ್ಸನ್ನು ಬಯಸತಕ್ಕ ವಿವೇಕಿಗಳು, ದುಸ್ಸಂಗವನ್ನು ಬಿಟ್ಟು ಸತ್ಸಂಗವನ್ನೇ ಮಾಡುತ್ತಿರಬೇಕು. ಸತ್ಪುರುಷರು, ವಿಷಯಾಸಕ್ತಿಯಲ್ಲಿರು ವ ಅನರ್ಥಗಳನ್ನು ಆಗಾಗ ಬೋಧಿಸುತ್ತ, ಅವನ ಮನಸ್ಸನ್ನು ತಿದ್ದಿ, ದುರ್ವಿ ಷಯಗಳ ಕಡೆಗೆ ಹೋಗದಂತೆ ತಡೆಯುವರು. ಸಹವಾಸಯೋಗ್ಯರಾದ ಅಂತ ಹ ಸತ್ಪುರುಷರ ಲಕ್ಷಣಗಳೇನೆಂದರೆ; ಯಾವುದರಲ್ಲಿಯೂ ಅಪೇಕ್ಷೆಯಿಲ್ಲದೆ, ನನ್ನಲ್ಲಿಯೇ ನಮ್ಮ ಮನಸ್ಸುಳ್ಳವರಾಗಿಯೂ, ರಾಗಾದಿದೋಷಗಳಿಲ್ಲದ ಶಾಂತರಾಗಿಯೂ, ಸಮದರ್ಶಿಗಳಾಗಿಯೂ, ಅಹಂಕಾರ ಮಮಕಾರಗಳನ್ನು ನಿಶೇಷವಾಗಿ ತ್ಯಜಿಸಿದವರಾಗಿಯೂ, ಸುಖದುಃಖಾದಿಧ್ವಂದ್ವ ಳನ್ನು ಜ ಯಿಸಿದವರಾಗಿಯೂ, ಪರಿಗ್ರಹವಿಲ್ಲದವರಾಗಿಯೂ ಇರುವವರು ಯಾರೋ ಅವರೇ ಸತ್ಪುರುಷರು. ಅಂತಹ ಮಹಾತ್ಮರು ಯಾವಾಗಲೂ ನನ್ನ ಕಥೆಗಳನ್ನೇ ಅನುಭವಿಸುತ್ತಿರುವುದರಿಂದ, ಅವರ ಸಹವಾಸದಲ್ಲಿರುವವ ರೂ, ಸಮಪಾನನಿವಾರಕಗಳಾದ ಆ ಭಗವತ್ಕಥೆಗಳನ್ನು ಕೇಳಿ 166)