ಅಭ್ಯಾ. ೩.]
ಏಕದಳಕ್ಕಂಧರ,
MIL ನಿನ್ನನ್ನು ಯಾವಸಾಧನಗಳಿಂದ, ಎಲ್ಲೆಲ್ಲಿ, ಯಾವವಿಧವಾಗಿ ಪೂಜಿಸುವರೆಂ ಬುದನ್ನು ಹೇಳು : ಪೂಜ್ಯನಾದ ನಾರದನೂ, ವ್ಯಾಸಮಹರ್ಷಿಯೂ, ದೇವಗುರುವಾದ ಬೃಹಸ್ಪತಿಯೂ, ಇನ್ನೂ ಅನೇಕಮಹರ್ಷಿಗಳೂ ಕೂಡ, ಕರಯೋಗಗಳೊಳಗೆಲ್ಲಾ ನಿನ್ನ ಆರಾಧನರೂಪವಾದ ಕರವೇ ಉತ್ತಮ ಪುರುಷಾರಸಾ ಧಕವೆಂದು ಹೇಳಿರುವರು. ಈ ನಿನ್ನ ಆರಾಧನಕ್ರಮವು ಮೊದಲು ನಿನ್ನ ಬಾಯಿಂದಲೇ ಹೊರಟು ಚತುರಖಬ್ರಹ್ಮನಿಗೆ ಉಪ ದೇಶಿಸಲ್ಪಟ್ಟಿತು. ಆ ಬ್ರಹ್ಮನು, ಭ್ರಗು ಮೊದಲಾದ ತನ್ನ ಪುತ್ರರಿಗೆ ಉಪ ದೇಶಿಸಿರುವನು. ಭಗವಂತನಾದ ರುದ್ರನು ಇದನ್ನೇ ತನ್ನ ಪತ್ನಿಯಾದ ಪಾಶ್ವತಿಗೆ ಉಪದೇಶಿಸಿರುವನು ಓ ಪುರುಷೋತ್ತಮಾ ! ನಿನ್ನ ಆರಾಧನವು ಎಲ್ಲಾ ವರ್ಣಾಶ್ರಮಗಳಿಗೂ, ಶೂದಾಜಗಳಗ, ಉತ್ತಮವಾದ ಶ್ರೀ
ಯಸ್ಕಾಧನೆಗೆ ಸುಲಭೋಪಾಯವಾಗಿರುವುದು. ಓ ಪುಂಡರೀಕಾಕ್ಷಾ! ಕಮ್ಮ ಬಂಧವನ್ನು ಬಿಡಿಸತಕ್ಕ ಆ ನಿನ್ನ ಆರಾಧನಕ್ರಮವನ್ನು ಭಕ್ತನೂ, ನಿನ್ನಲ್ಲಿ ಅಮರಕ್ಕನೂ ಆದ ನನಗೆ ಉಪದೇಶಿಸಬೇಕು. ಈ ಉಪದೇಶವ ಬ್ರಹ್ಮಾದಿ ಗಳಿಂದ ಉಪದೇಶಪರಂಪರೆಯಾಗಿ ಲೋಕದಲ್ಲಿ ಹರಡಿದ್ಧರೂ, ಆ ಬ್ರ ಹ್ಯಾ ಸಗಳಿಗೂ ಪ್ರಭುವಾದ ನಿನ್ನ ಮುಖಾರವಿಂದದಿಂದಲೇ ಕೇಳುವುದು ನನ್ನ ಪರಮಭಾಗ್ಯವಲ್ಲವೆ?” ಎಂದನು.
ಆದಕ್ಕಾ ಭಗವಂತನು 1 ಉದ್ಯವಾ ! ಕೇಳು ' ಲೋಕದಲ್ಲಿ ಕಮ್ಮ ಬೋಧಕಗಳಾದ ಶಾಸ್ತ್ರಗಳು ಅಪಾರವಾಗಿರುವವ ಹಾಗಿದ್ದರೂ ನಿನಗೆ ಅದನ್ನು ಸಂಕ್ಷೇಪಿಸಿ ಯಥಾಸ್ಥಿತವಾಗಿ ಹೇಳುವೆನು ಕೇಳು. ನನ್ನ ಆರಾಧನ ರೂಪವಾದ ಯಜ್ಞದಲ್ಲಿ, ವೈದಿಕವೆಂದೂ, ಶಾoತ್ರಿತವೆಂದೂ, ಮಿಶ್ರವೆಂ ದೂ ಮೂರುಪಿಧಗಳುಂಟು. ಈ ಮೂರರಲ್ಲಿ !ಅವರವರಿಗೆ ಇಷ್ಟವಾದ ವಿಧಿಯಿಂದ ನನ್ನ ನಾರಾಧಿಸಬಹುದು. ಬ್ರಾಹ್ಮಣ ಕ್ಷತ್ರಿಯ ವೈಶ್ಯರೆಂಬ ತ್ರಿವರ್ಣದವರೂ, ವೇದೋಕ್ತ ವಿಧಿಯಿಂದ ಉಪನಯನಸಂಸ್ಕಾರವನ್ನು ಹೊಂದಿ, ದ್ವಿಜತ್ವವನ್ನು ಪಡೆದಮೇಲೆ, ನನ್ನನ್ನು ಭಕ್ತಿಯಿಂದಲೂ, ಶ್ರದ್ದೆ ಯಿಂದಲೂ ಆರಾಧಿಸಬೇಕಾದ ಕ್ರಮವನ್ನು ಮೊದಲು ಹಸುವೆನು ಕೇಳು. ಪ್ರತಿಮೆ (ಎಂದರೆ ಅರ್ಚಾವಿಗ್ರಹಗಳು), ಸಂ(ವೆಂದರೆ ಜಾ
ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೩೯
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
