ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


416 ಶ್ರೀಮದ್ಭಾಗವತರು [ಅಥ್, M. ನ್ಯೂ, ಪುರುಷಸೂಕ್ತವನ್ನೂ, ನೀರಾಜನ, ರೋಹಿಣಾಮಂತ್ರಗಳನ್ನೂ ಪುನಶ್ಚರಣಮಾಡಬೇಕು. ಆಮೇಲೆ, ನನ್ನನ್ನು ಆರಾಧಿಸತಕ್ಕ ಭಕ್ತನು, ಭೌತವಸ್ತ್ರ, ಉಪವೀತ, ಆಭರಣ, ತುಳಸೀದಳ, ಪುಷ್ಪಮಾಲಿಕೆ, ಗಂಧಾ ಮಲೇಷ, ಮೊದಲಾದುವುಗಳಿಂದ ನನ್ನ ಮೂರ್ತಿಯನ್ನಲಂಕರಿಸಬೇಕು. ಆಮೇಲೆ ಪಾದ್ಯಾಚಮನೀಯಗಳನ್ನೂ, ಗಂಧಪಷ್ಟಾಕ್ಷತೆಗಳನ್ನೂ, ಧೂಪ ದೀಪನೈವೇದ್ಯಗಳನ್ನೂ ಅರ್ಪಿಸಬೇಕು. ನೈವೇದ್ಯಕ್ಕಾಗಿ, ಬೆಲ್ಲ, ಪಾಯಸ, ತುಪ್ಪ, ಚಕ್ಕುಲಿ, ಕಜ್ಜಾಯ, ಕಡುಬು, ಗೋದುವೆಯ ಭಕ್ಷಗಳು, ಮೊಸ ರು, ತೊವ್ವ, ಮುಂತಾದ ಉಪಹಾರದ್ರವ್ಯಗಳನ್ನು ಅವರವರ ಶಕ್ಯನು ಸಾರವಾಗಿ ಸಮರ್ಪಿಸಬೇಕು. ಏಕಾದತಿ ಮೊದಲಾದ ಪಕ್ವದಿನಗಳಲ್ಲಿ ನನ್ನ ಅರ್ಚಾಮೂರ್ತಿಗಳಿಗೆ ಅಭ್ಯಂಗನಮಾಡುವುದು, ಮೈಯೊತ್ತುವುದು, ಕನ್ನಡಿಯನ್ನು ತೋರಿಸುವುದು, ಹಲ್ಲುಜ್ಜುವುದು, ಅಭಿಷೇಕಮಾಡುವುದು, ಅನ್ನಾ ದಿಗಳನ್ನು ನಿವೇದಿಸುವುದು, ಗಾನನರ್ತನಗಳನ್ನು ಮಾಡಿಸುವುದು ಇವೇ ಮೊದಲಾದ ವಿಭವಗಳೊಡನೆ ಪೂಜೆಯನ್ನು ನಡೆಸಬೇಕು. ಶಕ್ತಿಯಿ ಇವರು ದಿನದಿನವೂ ಈ ಉಪಚಾರಗಳನ್ನು ನಡೆಸಬಹುದು. ಆ ಮೂ ಲಕವಾಗಿ ನನ್ನ ನಾರಾಥಿಸತಕ್ಕವರು, ತಂತ್ರಕ್ಕೆ ರೀತಿಯಾಗಿ ಮೇಖಲೆ ಯಿಂದಲೂ, ಎಂಟುಗುಳಿಗಳಿಂದಲೂ, ನಡುವೆ ವೇದಿಕೆಯಿಂದ ಕೂಡಿದ ಔಪಾಸನಪಾತ್ರದಲ್ಲಿ, ಅಥವಾ ಶುದ್ಧವಾದ ನೆಲದಲ್ಲಿ, ಅಗ್ನಿಯನ್ನು ಪ್ರತಿ ಷಿಸಿ, ಅದನ್ನು ಚೆನ್ನಾಗಿ ಹುತನಾಡಿ, ನಾಲ್ಕು ಕಡೆಗೂ ಕೆದರಿದ ಆ ಅಗ್ನಿ ಯನ್ನು ಕೈಯಿಂದ ಒಂದಾಗಿ ಸೇರಿಸಿಟ್ಟು ದರ್ಭೆಗಳಿಂದ ಸಂಸ್ಕರಣವನ್ನು ಹಾಕಿ, ಪರಿಷೇಚನವನ್ನು ನಡೆಸಬೇಕು. ತಮ್ಮ ತಮ್ಮ ಗೃಹ್ಯಕ್ರಮ ದಿಂದ, ಅಗ್ನಿಮುಖವಾಗಿ ನಡೆಸಬೇಕಾದ ಕತ್ಮಗಳಿಗೆಲ್ಲಾ ಸಂಕಲ್ಪವನ್ನು ಮಾಡಿ, ಪ್ರೋಕ್ಷಣಪಾತ್ರದಲ್ಲಿರುವ ತೀರದಿಂದ, ಅಜ್ಯಾಪಿ ಮದ ಉಾದ ಉಪಕರಣಗಳೆಲ್ಲವನ್ನೂ ಪ್ರೋಕ್ಷಿಸಿ, ಆಮೇಲೆ ಆ ಅಗ್ನಿ ಯಲ್ಲಿ ನನ್ನನ್ನು ಧ್ಯಾನಿಸಬೇಕು. ಆ ಧ್ಯಾನಕಾಲದಲ್ಲಿ ಪುಟಹಾಕಿದೆ ಬಂಗಾರದತ ಮೈಬ ದಿಂದಲೂ, ಶಂಖಚಕ್ರಗದಾಪದ್ಮಗಳಿಂದಲೂ, ಚತುರ್ಭುಜಗಳಿಂದಲೂ, ಶಾಂತವಾದ ಆಕಾರದಿಂದಲೂ, ಕಮಲದ ಕುಸುರಿಯಂತಿರುವ ಜಾ೦