ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೪o ಶ್ರೀಮದ್ಭಾಗವತವು [ಅಧ್ಯಾ. ೨೭ ಪದ್ಯಗಳಿಂದಲೂ, ಭಗವಂತನನ್ನು ಸ್ತುತಿಸಿ :ಓ ಪರಮಪುರುಷಾ ! ನನ್ನಲ್ಲಿ ಪ್ರಸನ್ನ ನಾಗು!” ಎಂದು ಪ್ರಾರ್ಥಿಸಿ, ಸಾಷ್ಟಾಂಗಪ್ರಣಾಮವನ್ನು ಮಾ ಡಬೇಕು. ಹಾಗೆ ಪ್ರಣಾಮಮಾಡುವಾಗ ತನ್ನ ಎರಡು ಕೈಗಳಿಂದಲೂ ಅರ್ಚಾ ಮೂರ್ತಿಯ ಪಾದಗಳೆರಡನ್ನೂ ಹಿಡಿದು ಓ ಸತ್ಯೇಶ್ವರಾ ! ನಾನು ನಿನ್ನ ಪಾದಾರವಿಂದಗಳಲ್ಲಿ ಮರೆಹೊಕ್ಕಿರುವೆನು, ಸಂಸಾರವೆಂಬ ಮಹಾ ಸಮುದ್ರದಲ್ಲಿ ಬಿದ್ದು, ಮೃತ್ಯುಗ್ರಹಪೀಡಿತನಾದ ನನ್ನ ಭಯವನ್ನು ನೀಗಿಸಿ ಕಾಪಾಡು!” ಎಂದು ಪ್ರಾರ್ಥಿಸಬೇಕು.! ಆಮೇಲೆ ನನಗೆ ಸಮರ್ಪಿಸಿದ ತುಳಸೀಪಷ್ಟಾದಿಗಳನ್ನು ನಾನೇ ಅನುಗ್ರಹಿಸಿಕೊಟ್ಟಂತೆ ಭಾವಿಸುತ್ತ, ಆದರದಿಂದ ಅವುಗಳನ್ನು ಕೈಗೆ ತೆಗೆದುಕೊಂಡು ತಲೆಯಮೇಲೆ ಧರಿಸಬೇಕು. ಆಮೇಲೆ ಆವಾಹಿತನಾದ ನನ್ನನ್ನು ಉ ವ್ಯಾಸನಮಾಡಬೇಕಾಗಿದ್ದರೆ, ಈ ಜೋರೂಪವಾದ ನನ್ನ ಸ್ವರೂಪವನ್ನು ತಿರುಗಿ, ತೇಜೋರೂಪನಾದ ತನ್ನ ಅಂತರಾತ್ಮನಲ್ಲಿಯೇ ಸೇರಿಸಿಟ್ಟುಕೊಂಡಂತೆ ಉದ್ಘಾನಮಾಡಬೇಕು. ಈ ದ್ವಾ! ಮೇಲೆ ಹೇಳಿದ ಆರ್ಚಾದಿಮೂರ್ತಿಗಳಲ್ಲಿ, ಯಾರಿಗೆ, ಯಾ ವಾಗ, ಯಾವುದರಲ್ಲಿ ಶ್ರದ್ಧೆ ಹುಟ್ಟುವುದೋ, ಅದರಲ್ಲಿಯೇ ಆಗಾಗ ನನ್ನ ನ್ನು ಅರ್ಚಿಸಬೇಕು. ಸಾತಕನಾದ ನಾನು ಅವರವರ ಹೃದಯದ ಕ್ಲಿಯೂ, ಇತರ ಸಮಸ್ತ ಭೂತಗಳಲ್ಲಿಯ ನೆಲೆಗೊಂಡಿರತಕ್ಕವನು. ಹೀಗೆ ವೇದಗಳಲ್ಲಿಯ ೧, ತಂತ್ರಗಳಲ್ಲಿಯೂ ಹೇಳಲ್ಪಟ್ಟಿರುವ ಕ್ರಿ ಯಾವಿಧಿಗಳಿಂದ ನನ್ನನ್ನು ಅರ್ಚಿಸಿದವನು, ಇಹಪರಗಳೆರಡರಲ್ಲಿಯೂ ತನ್ನ ಅಭೀಷ್ಮಗಳನ್ನು ಹೊಂದುವನು. ಶಕ್ತಿಯುಳ್ಳವನು ನನ್ನ ಅರ್ಚಾಮೂರ್ತಿ ಗಳಿಗಾಗಿ ಸ್ಥಿರವಾದ ಮಂದಿರವನ್ನು ಕಟ್ಟಿಸಿ, ಅದರಲ್ಲಿ ನನ್ನ ಮೂರ್ತಿಯ ನ್ನು ಪ್ರತಿಷ್ಠೆ ಮಾಡಿಸಿ, ರಮಣೀಯಗಳಾದ ಪಪ್ಪೋದ್ಯಾನಗಳನ್ನು ಕಲ್ಪಿಸಿ, ನನಗೆ ಪೂಜೆಗಳನ್ನೂ, ಜಾತ್ರೆಗಳನ್ನೂ, ಉತ್ಸವಗಳನ್ನೂ ನಡೆಸಬಹುದು. ಇಂತಹ ದೇವಾಲಯಗಳಲ್ಲಿ ನಿತ್ಯೋತ್ಸವ, ಪರೋಕ್ಷವಾಹಿಗಳು ಸ್ಥಿರ ವಾಗಿ ನಡೆದುಬರುವಂತೆ, ಆಯಾ ಆರ್ಚಾಮೂರ್ತಿಗಳ ಹೆಸರಿನಲ್ಲಿಯಾಗಲಿ, ಅಲ್ಲಿನ ಕೈಂಕಯ್ಯಪರರ ಹೆಸರಿನಲ್ಲಿಯಾಗಲಿ ಗ್ರಾಮಗಳನ್ನು ಮಾನ್ಯವಾಗಿ ಬಿಡಬೇಕು ಹೀಗೆ ಮಾಡತಕ್ಕ ಧಾರಿಕರು, ನನ್ನೊಡನೆ ಸಮಾನವಾದ