ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೪೧ ಅಧ್ಯಾ, ೨೦. ಏಕಾದುರಸ್ಕಂಧವ. ಐಶ್ವಠ್ಯವನ್ನು ಹೊಂದುವರು. ನನ್ನ ಪ್ರತಿಮೆಯನ್ನು ಪ್ರತಿಷ್ಠೆ ಮಾಡತಕ್ಕ ವರು ಸಾಲ್ವಭ ಇಮಪದವಿಯನ್ನೂ, ನನಗೆ ಮಂದಿರವನ್ನೇರ್ಪಡಿಸಿದವರು ಲೋಕಾಧಿಪತ್ಯವನ್ನೂ ಹೊಂದುವರು ಯಾವ ಫಲದಲ್ಲಿಯೂ ಅಭಿಲಾಷೆ ಯಿಲ್ಲದೆ ನನ್ನನ್ನು ಆರಾಧಿಸತಕ್ಕವರಿಗೆ, ಭಕ್ತಿ ಯೋಗವು ಕೈಗೂಡುವುದು. ಆ ಭಕ್ತಿಯೋಗದಿಂದ ನನ್ನ ಸಾನ್ನಿಧ್ಯವನ್ನೇ ಪಡೆಯಬಹುದು. ಹೀಗಿಲ್ಲದೆ ಯಾವನು, ದೇವಬ್ರಾಹ್ಮಣರಿಗಾಗಿ ತನ್ನಿಂದಾಗಲಿ, ಬೇರೊಬ್ಬರಿಂದಾಗಲಿ ಬಿಡಲ್ಪಟ್ಟ ಮಾನ್ಯಗಳನ್ನೂ, ವೃತ್ತಿಗಳನ್ನೂ ದುರಾಶೆಯಿಂದ ಅಪಹರಿಸು ವನೋ, ಅವನು, ಅನೇಕ ಕೋಟವರ್ಷಗಳವರೆಗೆ ಅಮೇಧ್ಯಭಕ್ಷ ಕಕ್ರಿಮಿ ಗಳ ಜನ್ಮವನ್ನು ಹೊಂದುವನು. ಉದ್ದವಾ ' ಮೇಲೆ ಹೇಳಿದಂತೆ ಸತ್ಕರ ಗಳನ್ನಾಗಲಿ, ದುಷ್ಯರಗಳನ್ನಾಗಲಿ ಯಾವನು ಮಾಡುವನೋ, ಯಾ ವನು ಮಾಡಿಸುವನೋ, ಯಾವನು ಆ ಕಾವ್ಯಕ್ಕೆ ಸಹಕಾರಿಯಾಗುವನೋ, ಯಾವನು ಅನುಮೋದಿಸುವನೋ, ಅವರೆಲ್ಲರೂ ಆಯಾ ಕರಫಲಕ್ಕೆ ಸಮ ಭಾಗಿಗಳಾಗುವರು. ಅನೇಕಾವರ್ತಿ ಸತ್ತು ಹುಟ್ಟಿದರೂ, ಇಹಲೋಕ ಪರ ಲೋಕಗಳೆರಡರಲ್ಲಿಯೂ ಆ ಕರೆ ಫಲವು ಬೆಂಬಿಡದೆ ಹಿಂಬಾಲಿಸುತ್ತಿರುವು ವು. ಇದು ಇಪ್ಪತ್ತೇಳನೆಯ ಅಧ್ಯಾಯವು. . ಕೃಷ್ಣನು ತಿರುಗಿ ಜ್ಞಾನಯೋಗವನ್ನು ಸಂಗ್ರಹಿಸಿ • • ಕೃಷ್ಣನು ತಿರುಗಿ ಜೆ ಉದ್ದವಾ ' ಕೇಳು ! ಹಿಂದೆ ಹೇಳಿದ ದಾನಾಪಹಾರಗಳೇ ಮೊದ ಲಾದ ಸತ್ಕರ್ಮಗಳಾಗಲಿ, ದುಷ್ಕರಗಳಾಗಲಿ ಮನುಷ್ಯರಲ್ಲಿ ಅವರ ಸ್ವ ಭಾವಾನುಗುಣವಾಗಿ ನಡೆಯುವುದುಂಟು. ಇದಕ್ಕಾಗಿ ಅವರನ್ನು ಸ್ತುತಿ ಸಲೂ ಬಾರದು. ನಿಂದಸಲೂಬಾರದು. ಏಕೆಂದರೆ, ಸ್ಥಾವರಜಂಗಮಾತ್ಮ ಕವಾದ ಈ ಪ್ರಪಂಚವೆಲ್ಲವೂ ಅಂತಶ್ಯಾವಿಯಾದ ನನಗೆ ಶರೀರಭೂತವೆಂ ಬುದನ್ನು ತಿಳಿದವನು, ಎಲ್ಲವನ್ನೂ ನನ್ನೊಡನೆ ಸಮಾನವಾಗಿಯೇ ಭಾವಿಸು ವುದರಿಂದ, ಅವನಿಗೆ ಗುಣದೋಷಬುದ್ಧಿಯೇ ಉಂಟಾಗಲಾರದು. ಹಾಗಿಲ್ಲದೆ ಯಾವನು ಇತರರ ಸ್ವಾಭಾವಿಕಕರಗಳನ್ನು ಕುರಿತು ನಿಂದಿಸುತ್ತಲ,ಸ್ತುತಿ