ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೪೨ ಶ್ರೀಮದ್ಭಾಗವತ [ಅಣ್ಣ, ೨೮. ಸುತ್ತಲೂ ಇರುವನೋ, ಅವನು ಅಸತ್ತಾದ ದೇಹದಲ್ಲಿ ಆತ್ಮಾಭಿಮಾನ ಸುಳ್ಳನೆಂದು ಸ್ಪಷ್ಟವಾಗುವುದು. ಈ ಆತ್ಮಾಭಿಮಾನವುಳ್ಳವನು, ತನಗೆ ಪುರುಷಾರಸಾಧಕವಾದ ಜ್ಞಾನಯೋಗದಿಂದ ಭ್ರಷ್ಟನಾಗುವನು. ದೇಹಕ್ಕಿಂತಲೂ ಆತ್ಮವು ಭಿನ್ನ ವೆಂಬ ವೈಲಕ್ಷಣ್ಯವನ್ನು ತಿಳಿಯದವನಿಗೆ ತನ್ನ ದೇಹವೇ ಆತ್ಮವೆಂಬ ಭ್ರಮವುಂಟಾಗುವುದು ಸಹಜವೇ ! ಜೀವನಿಗೆ ನಿದ್ರೆಯಂತಿರುವ ಅವಿದ್ಯೆಯಿಂದ, ಅಹಂಕಾರಕಾರವೆನಿಸಿದ ದೇಹಾತ್ಮಾಭಿ ಮಾನವು ಹುಟ್ಟಿದಾಗ, ಅವನಿಗೆ ಪ್ರಕೃತಿಯಿಂದ ನಿಜಸ್ವರೂಪವು ಮರೆಸಿ ಹೋಗುವುದು. ಈ ಮಾಯಾವರಣದಿಂದ ಆತ್ಮನಲ್ಲಿ ದೇಹಮೂಲಕ ವಾದ ನಾನಾಶ್ವಭ್ರಮವುಳ್ಳವನು, ಜಾಗರಾವಸ್ಥೆಯಲ್ಲಿರುವಾಗಲೂ ನಿದ್ರೆ ಮಾಡುವವನಂತೆಯೇ ಜ್ಞಾನಶೂನ್ಯವೆನಿಸುವನು. ಆದರೆ ದೇಹಧರ ಗಳನ್ನು ಆತ್ಮನಲ್ಲಿ ಆರೋಪಿಸಿ, ನಿಂದಾಸ್ತುತಿಗಳನ್ನು ಮಾಡುವುದು ಅನರಕಗಳಾಗಿದ್ದರೂ, ಆ ದೇಹಧರಗಳನ್ನು ದೇಹಕ್ಕೆಂದೇ ತಿಳಿದು, ಆ ದೇಹಗಳನ್ನು ದೈಸಿಯೇ ಗುಣದೋಷಗಳನ್ನು ಹೇಳಬಹುದಲ್ಲವೆ? ” ಎಂದರೆ, ಈಗಲೋ ನಾಳೆಯೋ ಬಿದ್ದು ಹೋಗತಕ್ಕ ಅಸ್ಥಿರವಾದ ದೇಹದಲ್ಲಿ ಗುಣವಿದ್ದರೇನು? ಅಥವಾ ದೋಷವಿದ್ದರೇನು ? ಅತ್ಯುತ್ತಮವೆನಿಸಿಕೊಂಡ ದೇವಾದಿಶರೀರಗಳಾಗಲಿ, ಅತಿನೀಚವೆನಿಸಿಕೊಂಡ ಅಮೇಧ್ಯಕ್ರಿಮಿಗಳ ಶರೀರ ವಾಗಲಿ, ಇವೆಲ್ಲವೂ ಪ್ರಕೃತಿಪರಿಣಾಮರೂಪವಾದುದರಿಂದ, ಒಂದು ಸ್ಥಿತಿಯ ಅಲ್ಲದೆ ಕ್ಷಣಕ್ಷಣಕ್ಕೂ ವಿಕಾರವನ್ನು ಹೊಂದುತ್ತಲೇ ಇರುವುವು. ಶರೀರ ವೆಂಬುದೆಲ್ಲವೂ ಆತ್ಮನಿಗಿಂತಲೂ ಭಿನ್ನ ವಾದುವುಗಳೇ ! ಈ ದೇಹಗಳೆಲ್ಲವೂ ಆತ್ಮನಿಗೆ ಅನರ್ಥಾವಹಗಳಾಗಿ, ಅಸತ್ನಿಸಿಯೇ ಇರುವಾಗ, ಅವುಗಳಲ್ಲಿ ಸತ್ತೆಂದೂ, ಆಸತ್ತೆಂದೂ ಗುಣದೋಷಗ್ರಹಣವು ಹೇಗೆ ? ಕ್ಷಣಕ್ಷಣಕ್ಕೂ ಮಾರುತ್ತಿರುವ ಶರೀರದಲ್ಲಿ ದೇವತ್ವಮನುಷ್ಯತ್ವಾದಿವ್ಯವಹಾರಗಳೂ ಸ್ಥಿರವಲ್ಲ. ಆ ಶರೀರಗಳ ವಿಷಯವಾಗಿ ಮನಸ್ಸಿಗೆ ತೋರುವ ತಾನೆಂಬ ಅಭಿ ಮಾನವೂ ಸುಳ್ಳು ! ಆದುದರಿಂದ ಅಸಾಯವಾದ ದೇಹವು ಸತ್ತಾ ದರೇನು ? ಅಸಾದರೇನು ? ಆದರೆ ದೇಹಗತವಾದ ಆಕಾರಭೇದಗಳು ಆತ್ಮನಲ್ಲಿ ಆಸತ್ಯವಾಗಿರುವಾಗ, ಮನಸ್ಸಿನಲ್ಲಿ ಆ ಅಭಿನಿವೇಶವಿದ್ದ ಮಾತ್ರಕ್ಕೆ