ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩ ೪s ಅಧ್ಯಾ, ೨೮] ಏಕದಶಕ್ಕಂದವು. ಉದ್ಯವನ್ನು ತಿರುಗಿ ಪ್ರಶ್ನೆ ಮಾಡುವನು - ಓ ಪ್ರಭೂ! ದೇಹಾತ್ಮಗ ಳೆರಡೂ ಒಂದಕ್ಕೊಂದಕ್ಕೆ ಅತ್ಯಂತವಿಲಕ್ಷಣಧರವುಳ್ಳವುಗಳಷ್ಮೆ ? ಇವು ಗಳಲ್ಲಿ ಸುಖದುಃಖಾನುಭವರೂಪವಾದ ಸಂಸಾರವೆಂಬುದು ಯಾವುದಕ್ಕೆ ? ದೇಹಕ್ಕೇ ? ಅಥವಾ ಆತ್ಮನಿಗೇ ? ಸಂಸಾರದಲ್ಲಿ ಸುಖದುಃಖಗಳೇನೋ ಕಾಣುತ್ತಿರುವುವು. ಆ ಅನುಭವವನ್ನು ದೇಹಕ್ಕೆಂದು ಹೇಳುವುದಕ್ಕಿಲ್ಲ. ಏಕೆಂದರೆ, ದೇಹವು ಜಡವೆನಿಸಿರುವುದು. ಅಥವಾ ಆತ್ಮನಿಗೂ ಅದನ್ನು ಹೇಳುವುದಕ್ಕಿಲ್ಲ. ಏಕೆಂದರೆ, ಆತ್ಮವೆಂಬುದು ಸಹಜವಾಗಿ ಶುದ್ಧವೆನಿಸಿರು ವುದು, ಸ್ವಯಂಪ್ರಕಾಶವುಳ್ಳುದು. ಅದಕ್ಕೆ ಸಹಜವಾಗಿ ಕಣ್ಮರೂಪವಾದ ಆವರಣವಾಗಲಿ, ಸತ್ಯಾದಿಗುಣಗಳಾಗಲಿ ಇರುವುದಿಲ್ಲ. ಮತ್ತು ಆತ್ಮವು ಸ್ವಭಾವದಿಂದ ವಿಕಾರರಹಿತವಾದುದು. ಹೀಗೆ ದೇಹಾತ್ಮಾಗಳೆರಡೂ ಪರಸ್ಪರವಿಲಕ್ಷಣಧವುಳ್ಳವುಗಳಾಗಿದ್ದರೂ, ದಾರುವಿನಲ್ಲಿ ಅಗ್ನಿ ಯಂತೆ ಅವೆರಡೂ ಒಂದಾಗಿ ಕಲೆತಿರುವುವು. ಇವುಗಳಲ್ಲಿ ಯಾವುದಕ್ಕೆ ಸಂಸಾರ ಸಂಬಂಧವೆಂದು ಹೇಳಬಹುದು ? ಸುಖದುಃಖಸಂಬಂಧವಿಲ್ಲದೆ ಸಹಜ ವಾಗಿ ಶುದ್ಯವೆನಿಸಿದ ಆತ್ಮನಿಗಾಗಲಿ, ಜಡವಾದ ದೇಹಕ್ಕಾಗಲಿ, ಸಂಸಾರ ಸಂಬಂಧವನ್ನು ಹೇಳುವುದಕ್ಕಿಲ್ಲ! ಈ ವಿಷಯದಲ್ಲಿ ನನ್ನ ಸಂದೇಹವನ್ನು ನೀಗಿಸಬೇಕು.” ಎಂದನು. ಅದಕ್ಕಾಭಗವಂತನು ««ಉದ್ಯವಾ ! ಕೇಳು ! ಆತ್ಮವೆಂಬುದು ಸಹಜದಶೆಯಲ್ಲಿ ಶುದ್ಧವೆನಿಸಿದ್ದರೂ, ಪ್ರಕೃತಿಸಂಬಂಧದಿಂದ ಅದು ಅಶುದ್ಧವೆನಿಸುವುದು. ಅಂತಹ ಅಶುದ್ಯದಶೆಯಲ್ಲಿಯೇ ಆತ್ಮನಿಗೆ ಸಂಸಾರವು. ಆತ್ಮನಿಗೆ ದೇವಾದಿರೂಪಗಳು ಸಹಜವಾಗಿಲ್ಲದಿದ್ದರೂ, ಯಾ ವಾಗ ದೇಹದೊಡನೆ ಸಂಬಂಧವಿರುವುದೋ, ಆಗ ಅವೂ ಇದ್ದಂತೆ ತೋರಿ, ಜೀವನಿಗೆ ಸುಖದುಃಖಗಳನ್ನುಂಟುಮಾಡುವುವು. ಏಕೆಂದರೆ, ಆತ್ಮ ವು' ದೇಹಕ್ಕಿಂತಲೂ ವಿಲಕ್ಷಣವೆನಿಸಿದ್ದರೂ, ತನ್ನ ಸ್ವರೂಪವನ್ನು ತಾನು ತಿಳಿಯಲಾರದ ಅಜ್ಞಾನದಿಂದ, ಅಶುದ್ದಿಯನ್ನು ಹೊಂದುವುದು. ಆತ್ಮನಿಗೆ “ನಾನು ಸ್ಕೂಲನು, ನಾನು ಕೃಶನು, ಇವರು ನನ್ನ ವರು, ಅವರು ಪ್ರತಿಕೂ ಲರು” ಎಂಬೀ ಭಾವನೆಯಿರುವವರೆಗೆ ಸಂಸಾರವು ತಪ್ಪಲಾರದು, ಸ್ವಪ್ನ ದೇಹವು ತನ್ನದಲ್ಲವೆಂದು ಚೆನ್ನಾಗಿ ತಿಳಿದಿದ್ದರೂ, ಕಸನ್ನು ಕಾಣುವಾಗ,