ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೪೬ ಶ್ರೀಮದ್ಭಾಗವತರು [ಅಧ್ಯಾ, ೨೮. ಆ ದೇಹವೇ ಆತ್ಮಶಾಂತಿಯನ್ನು ಹುಟ್ಟಿಸಿ, ಸುಖದುಃಖಗಳನ್ನು ತೋರಿ ಸುವಂತೆ, ಆತ್ಮನಿಗೆ ದೇವಾ ವ್ಯಾಕಾರಗಳಿಲ್ಲದಿದ್ದರೂ, ಅವು ತನಗಿದ್ದಂತೆ ಭವಿಸುವುದರಿಂದ, ಆಮೂಲಕವಾದ ಸುಖದುಃಖಾನುಭವಗಳೂ ತೋ ರುವುವು. ಎಚ್ಚರವಿಲ್ಲದಿರುವವರೆಗೆ ಸ್ವಪ್ನಗಳೇ ಎಷ್ಟೋ ಭಯವನ್ನುಂಟು ಮಾಡುವುವು. ಆ ಸ್ಪಷ್ಟ ವೇ, ಅದರಿಂದ ಎಚ್ಚರಗೊಂಡವನಿಗೆ ಮೊದಲಿದ್ದ ಮೋಹವನ್ನುಂಟುಮಾಡಲಾರದಲ್ಲವೆ ? ಎಚ್ಚರಗೊಂಡವನಿಗೆ ಹಿಂದೆ ಸ್ವ ಪ್ರ ದಲ್ಲಿ ತಾನು ಅನುಭವಿಸಿದ ಸುಖದುಃಖಗಳಾವುವೂ ಮನಸ್ಸನ್ನು ಕಲ ಗಿಸಲಾರವು. ಆದುದರಿಂದ, ಶೋಕ, ಹರ್ಷ, ಭಯ, ಕ್ರೋಧ, ಲೋಭ, ಮೋಹ, ಶೃಹ, ಜನನ, ಮರಣವೆಂಬಿವೇ ಮೊದಲಾದ ವಿಕಾರಗಳೆಲ್ಲವೂ, ದೇಹವನ್ನೆ ಆತ್ಮವೆಂದು ಭ್ರಮಿಸುವಂತೆ ಮಾಡುವ ಅಹಂಕಾರದಿಂದುಂ ಟಾಗತಕ್ಕವುಗಳೇಹೊರತು ಆತ್ಮನಿಗೆ ಸ್ವಾಭಾವಿಕಗಳಲ್ಲ. ಆತ್ಮವನ್ನು ಸಂಸಾರದಲ್ಲಿ ಕಟ್ಟಿಡುವುದಕ್ಕೆ, ದೇಹ, ಇಂದ್ರಿಯಗಳು ಪ್ರಾಣಗಳು, ಮನ ಸ್ಟು,ದೇಹಾತ್ಮ ಭ್ರಮೆ,ಜೀವನು, ನಿಯಾಮಕನಾದ ಪರಮಾತ್ಮನು, ಸತ್ಕಾ ದಿಗುಣಗಳು, ಕರಗಳು, ದೇವಮನುಷ್ಯಾದಿಜಾತಿಗಳು, ಸೂತ್ರರೂಪವಾದ ಮಹತ್ತು, ಎಂಬೀ ಅನೇಕ ಕಾರಣಗಳ ಸಮುದಾಯವುಂಟು. ಇದರಿಂದ ಸಂ ಸಾರವೆಂಬುದು ಕಾಲಾಥೀನವಾಗಿ ನಡೆಯುತ್ತ ಬರುವುದು.ಮನೋವಾಕ್ಕಾ ಯಗಳೆಂಬ ತ್ರಿಕರಗಳ ಮತ: ಪಾಣಗಳ ಮೂಲಕವಾಗಿ ನಡೆಸಿದ ಅನೇ ಕಕರಗಳೇ, ಮೇಲೆ ಹೇಳಿದ ದೇಹವೇ ಮೊದಲಾದ ಅನೇಕರೂಪಗಳಿಂದ ಸಂಸಾರಕ್ಕೆ ಮೂಲವೆನಿಸುವುವು.ಈ ಸಂಸಾರವನ್ನು ನಿರ್ಮೂಲವಾಗಿ ಕತ್ತ ರಿಸುವುದಕ್ಕೆ ನನ್ನ ಉಪಾಸನಾರೂಪವಾದ ಜ್ಞಾನವೇ ತೀಕವಾದ ಕತ್ತಿ ಯೆಂದು ತಿಳಿ! ಹೀಗೆ ಆತ್ಮಜ್ಞಾನದಿಂದ ಸಂಸಾರವನ್ನು ಛೇದಿಸಬೇಕೆಂಬ ಆಪೇಕ್ಷೆಯುಳ್ಳವನು, ಶುಭಾಶ್ರಯವೆಂಬ ನನ್ನ ರೂಪವನ್ನು ಧ್ಯಾನಿ ಸುತ್ತ, ಶಬ್ದಾದಿವಿಷಯಗಳಲ್ಲಿ ಆಸೆಯನ್ನು ತೊರೆದು ನಿಸ್ಸಂಗನಾಗಿ, ಭೂಸಂಚಾರಮಾಡುತ್ತಿರಬೇಕು. ದೇಹಾತ್ಮಗಳಿಗಿರುವ ಪರಸ್ಪರವೈಲ Kಣ್ಯವನ್ನು ವಿವೇಚನೆಯಿಂದ ತಿಳಿಯುವುದೂ, ಶಾಸ್ತ್ರಾಧ್ಯಯನವೂ, ತಪ