ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೨೮.] ಏಕಾದಶಸ್ಕಂಧನ, M ಸೈಂಬ ಕರಯೋಗವೂ, ಪ್ರತ್ಯಕ್ಷಾನುಭವವೂ, ಗುರೂಪದೇಶವೂ, ಅನು ಮಾನವೂ, ಇವೆಲ್ಲವೂ ಜ್ಞಾನಸಾಧನಗಳು, ಇವುಗಳಿಂದ ಪಡೆಯಬೇಕಾದ ಜ್ಞಾನಸ್ವರೂಪವೆಂತವೆಂದರೆ, ಶರೀರಕ್ಕೆ ಮೊದಲೂ, ಆ ಶರೀರವು ಬಿದ್ದು ಹೋದಮೇಲೆಯೂ, ಯಾವುದು ಶರೀರರಹಿತವಾಗಿ ಶಾನುಮಾತ್ರ ನಿಲ್ಲುವು ದೋ, ಆ ಆತ್ಮಸ್ವರೂಪವೇ ಮಧ್ಯಕಾಲದಲ್ಲಿಯೂ ಎಂದರೆ ಶರೀರವಿರು ವಾಗಲೂ ಪ್ರಧಾನವೆನಿಸಿರುವುದೇ ಹೊರತು, ಶರೀರಕ್ಕೆ ಆತ್ಮತ್ವವು ಬಾರ ದೆಂದೂ, ಭಗವಂತನ ಸಂಕಲ್ಪರೂಪವಾದ ಕಾಲವೇ ಆತ್ಮನಿಗೆ ಈ ವಿಧ ವಾದ ಶರೀರಸಂಬಂಧಕ್ಕೆ ಕಾರಣವೆಂದೂ ತಿಳಿಯುವುದೇ ಜ್ಞಾನವು, ಚೆ ನ್ನಾಗಿ ಪುಟಹಾಕಿ ಶೋಧಿಸಿದ ಬಂಗಾರವನ್ನು , ಬೇರೆಬೇರೆ ಆಭರಣಗಳ ನ್ನಾಗಿ ಮಾಡುವಾಗ, ಅದಕ್ಕೆ ಇತರಲೋಹಗಳ ಪ್ರಡಿಯ ಟ್ಟು, ಬೆಸಿಗೆ ಹಾಕುವರು. ಆ ಒಡವೆಗಳನ್ನು ಕರಗಿಸಿ ತಿರುಗಿ ಪುಟಹಾಕಿದರೆ, ಮೊದಲಿ ನಂತೆ ಶುದ್ಧವಾದ ಬಂಗಾರವೇ ಉಳಿಯುವುದು. ಈ ನಡುವೆ ಆಭರಣಾ ವಸ್ಥೆಯಲ್ಲಿದ್ದ ವಿಶ್ರಲೋಹವನ್ನೇ ಶುದ್ಧವಾದ ಬಂಗಾರವೆಂದು ಹೇಳುವುದು ಭಾ೦ತಿಯಲ್ಲವೆ? ತಿಳಿದವರಾದರೋ, ಆ ಆಭರಣಾವಸ್ಥೆಗೆ ಮೊದಲೂ,ಆ ಆಭರಣವನ್ನು ಕರಗಿಸಿ ಪುಟಹಾಕಿದಮೇಲೆಯೂ ನಿಲ್ಲತಕ್ಕುದು ಯಾವುದೋ, ಆ ಲೋಹಾಂಶವನ್ನು ಮಾತ್ರವೇ ಆ ಮಧ್ಯದಶೆಯಲ್ಲಿಯೂ ಬಂಗಾರವೆಂದು ವ್ಯವಹರಿಸುವರೇಹೊರತು, ಆಭರಣವನ್ನೆ ಮೊತ್ತಕ್ಕೆ ಶುದ್ಧವಾದ ಬಂಗಾರವೆಂದು ಹೇಳಲಾರರು. ಅದರಂತೆಯೇ (ಅಹಂ"ಎಂಬ ಶಬ್ದವು, ದೇಹಸಂಬಂಧವಿರುವಾಗಲೂ ದೇಹವಿಲಕ್ಷಣವಾದ ಆತ್ಮದ ಲ್ಲಿಯೇ ವರ್ತಿಸುವುದೇ ಹೊರತು, ಆ ಅಹಂಶಬ್ದಕ್ಕೆ ಆತ್ಮದೊಡನೆ ದೇಹ ವನ್ನೂ ಸೇರಿಸಿ ಗ್ರಹಿಸುವುದು ಕೇವಲಭ್ರಾಂತಿಯು, ಆ ಭ್ರಾಂತಿಯಿಲ್ಲದೆ, ಆಹಂಶಕ್ಕೆ ಆತ್ಮವನ್ನು ಮಾತ್ರ ಗ್ರಹಿಸುವುದೇ ಜ್ಞಾನವು, ಮತ್ತು ಇಂದ್ರಿಯ ಶರೀರಾಹಂಕಾರಗಳೆಂಬ ಮೂರು ಬಗೆಯುಳ್ಳುದಾಗಿ, ಉತ್ಪತ್ತಿ ಸ್ಥಿತಿ ಲಯಗಳೆಂಬ ಮೂರವಸ್ಥೆಯನ್ನು ಹೊಂದತಕ್ಕು ದಾಗಿ, ಸತ್ರಾದಿಗುಣತ್ರಯಪರಿಣಾಮರೂಪವಾದ ಅಚೇತನಪದಾ‌ವು. ಈ ಮೂರವಸ್ಥೆಗಳೂ ಇಲ್ಲದೆ ತುರೀಯವೆನಿಸಿಕೊಂಡ ಯಾವುದರ ಸಂಬಂ 161 B