ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೪೮ ಶ್ರೀಮದ್ಭಾಗವತರು. [ಅಧ್ಯಾ, ೨೮. ಧದಿಂದಲೇ ಪ್ರವೃತ್ತಿ ಸಮರವಾಗುತ್ತ, ಆದು ತನ್ನೊಳಗಿಲ್ಲದಿದ್ದಾಗ ಪ್ರವೃತ್ತಿಶೂನ್ಯವಾಗಿರುವುದೋ, ಅದೇ ಆತ್ಮ ತತ್ವವೆಂದೂ, ಆ ಆತ್ಮ ತತ್ವವು ವಿಕಾರರಹಿತವಾದುದೆಂದೂ ತಿಳಿಯುವುದುಕೂಡ ಜಾ_ನವೆನಿ ಸವುದು. ಶರೀರದಲ್ಲಿ ಆತ್ಮವು ಸೇರಿರುವಾಗಲ್ಲವೇ ದೇಹಾತ್ಮ ಭ್ರಮವುಳ್ಳ ವರಿಗೆ ಆ ಶರೀರವೇ ಆತ್ಮವೆಂದು ತೋರುವುದು. ಉತ್ಪತ್ತಿಗೆ ಮೊದಲೂ, ಮರಣಾನಂತರದಲ್ಲಿಯೂ ಆ ಶರೀರವು ಹೇಗೆ ಆತ್ಮವೆನಿಸುವುದಿಲ್ಲವೋ, ಅದ ರಂತೆ ಜೀವ ಕಾಲದಲ್ಲಿಯೂ ಅದಕ್ಕೆ ಆತ್ಮತ್ವವಿಲ್ಲವೆಂದೂ, ಆ ಶರೀರ ವನ್ನು ಆತ್ಮನೆಂದು ವ್ಯವಹರಿಸುವುದು ಕೇವಲಭ್ರಾಂತಿಮೂಲಕವಾದ ವ್ಯವಹಾರಮಾತ್ರವೆಂದೂ, ಆ ದೇಹಕ್ಕಿಂತ ಮೊದಲೂ, ಆ ದೇಹವು ಬಿದ್ದು ಹೋದಮೇಲೆಯೂ ನಿಲ್ಲತಕ್ಕುದೆಂದು ಪ್ರಮಾಣಸಿದ್ಧವಾದ ಆತ್ಮ ತತ್ವವು ಯಾವುದುಂಟೋ, ಅದು, ಸದಾ ಏಕರೂಪವಾಗಿರತಕ್ಕದೆಂದೂ ತಿಳಿಯುವುದು ಜ್ಞಾನವು, ಮತ್ತು ಪ್ರಕೃತಿವಿಕಾರಭೂತವಾಗಿಯೂ, ರ ಜೋಗುಣಪ್ರಾಚುರದಿಂದ ಪ್ರಕೃತಿಸ್ವಭಾವವುಳ್ಳುದಾಗಿಯೂ ಇರುವ ಶರೀರವೆಂಬ ಸೃಜ್ಯಪರಾಗ್ಯಕ್ಕೆ,ಆತ್ಮದೊಡನೆ ಸ್ವತಃ ಸಂಬಂಧವಿಲ್ಲವಾದರೂ, ಅದು ಆತ್ಮನಿಗೆ ಅಭಿಮಾನವಿಷಯವಾಗಿ ತೋರುತ್ತಿರುವುದು.ಬ್ರಹ್ಮನೊಡನೆ ಸಮಾನಗುಣವುಳ್ಳುದರಿಂದ ಬ್ರಹ್ಮ ಶಬ್ಬವಾದ ಶುದ್ಧಾತ್ಮಸ್ವರೂಪವು, ಆದೇಹಸಂಬಂಧವನ್ನು ಬಿಟ್ಟಾಗಲೂ ಸ್ವಯಂಪ್ರಕಾಶಸ್ವರೂಪವಾಗಿ ಬೆಳಗ ಬಲ್ಲುದು.ದೇಹಕಾರಣವಾದ ಪ್ರಕೃತಿಯಾದರೋ,ವಿಷಯೇಂದ್ರಿಯರೂಪಗ ಳಾದ ವಿಕಾರಗಳಿಂದ ನಾನಾಬಗೆಯಾಗಿ ಕಾಣುವುದೆಂದು ತಿಳಿಯುವುದೂ ಜ್ಞಾನವೆನಿಸುವುದು. ಹಿಗೆ ಮೇಲೆ ಹೇಳಿದ ವಿವೇಚನೆಗಳಿಂದ, ಕ್ರಮವಾಗಿ ಈ ದೇಹೋತ್ಪತ್ತಿಗೆ ಮೊದಲೂ, ದೇಹವು ಬಿದ್ದು ಹೋದಮೇಲೆಯೂ, ಇವುಗಳ ಮಧ್ಯಕಾಲದಲ್ಲಿಯೂ ಅನುವರ್ತಿಸುತ್ತಿರುವುದೇ ಆತ್ಮವೆಂದೂ, ಆದುದರಿಂದಲೇ ಅದು ದೇಹಕ್ಕಿಂತಲೂ ವಿಲಕ್ಷಣವೆಂದೂ ತಿಳಿಯುವು ದೊಂದು; ದೇಹಸಂಬಂಧವಿದ್ದಾಗ ಆತ್ಮನಿಗೆ ಆ ದೇಹದಲ್ಲಿ ತಾನೆಂಬ ಬುದ್ಧಿಯು ಕೇವಲಬ್ರಾಂತಿಯೆಂದು ತಿಳಿದುಕೊಳ್ಳುವುದೊಂದು, ಆತ್ಮ ವಿದ್ದಾಗಲೇ ದೇಹಕ್ಕೆ ಪ್ರವೃತ್ತಿ ಸಾಮರ್ಥ್ಯವೆಂದು ತಿಳಿಯುವುದೊಂದು,