ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೪ ಅಧ್ಯಾ, ೨೮.] ಏಕಾದಶಸ್ಮಂಥವು. ದೇಹಸಂಬಂಧವಿಲ್ಲದಿದ್ದರೂ ಆತ್ಮವು ಸ್ವಯಂಪ್ರಕಾಶವಾಗಿ ಬೆಳಗುತ್ತಿ ರುವುದೆಂಬ ತಿಳಿವಳಿಕೆಯೊಂದು, ಈ ನಾಲ್ಕು ಬಗೆಯ ಜ್ಞಾನಗಳೂ ಸಂ ಸಾರಕಾರಣವಾದ ದೇಹಾತ್ಮಾಭಿಮಾನವನ್ನು ತಪ್ಪಿಸುವುದಕ್ಕೆ ಉಪಾಯ ಭೂತಗಳೆಂದು ತಿಳಿಯಬೇಕು. ಹೀಗೆಯೇ ಪರಮಾತ್ಮನು ಪ್ರಕೃತಿಪುರುಷರಿ ಗಿಂತಲೂ ವಿಲಕ್ಷಣವೆಂಬುದನ್ನು ಸ್ಪಷ್ಟವಾಗಿ ನಿರ್ಣಯಿಸುವುದಕ್ಕೆ ಕಾರಣ ವಾದ ಊಹಾಪೋಹವಿಚಾರಗಳಿಂದಲೂ, ದೇಹೇಂದ್ರಿಯಾದಿಗಳಿಗೆ ಆ ತೃತ್ವವಿಲ್ಲವೆಂದು ತಿಳಿಯುವ ಬುದ್ದಿನೈಪುಣ್ಯದಿಂದಲೂ, ದೇಹಾಭಿಮಾನ ಸ್ವತಂತ್ರಾಭಿಮಾನಗಳೆಂಬ ಮೋಹವನ್ನು ನೀಗಿ, ಕರಪ್ರವಣರಾದ ಕಾಮು ಕಜನರೊಡನೆ ಸಂಗವನ್ನು ತ್ಯಜಿಸಿ, ಆತ್ಮಾನುಭವದಿಂದುಂಟಾದ ಆನಂದ ದಲ್ಲಿಯೇ ಸಂತುಷ್ಟನಾಗಿರಬೇಕು. ಉದ್ದವಾ ! ಪಾರ್ಥಿವವಾದ ಈ ಶರೀ ರವೂ ಆತ್ಮವಲ್ಲ. ದೇವತೆಗಳೆಂದು ವ್ಯವಹರಿಸಲ್ಪಡುವ ಇಂದ್ರಿಯಗಳೂ ಆತ್ಮವಲ್ಲ! ಪ್ರಾಣಗಳೂ ಆತ್ಮವಲ್ಲ. ಪಂಚಭೂತಗಳಲ್ಲಿ ಸೇರಿದ ಅಗ್ನಿ, ಜಲ, ವಾಯಾಕಾಶಗಳಾಗಲಿ, ಮನಸ್ಸು, ಬುದ್ಧಿ, ಅಂತಃಕರಣ, ಅಹಂಕಾರವೆಂ ಬಿವುಗಳಾಗಲಿ ಆತ್ಮವಲ್ಲ. ಆ ದೇಹಾರಿಗಳೆಲ್ಲವೂ ಪ್ರಕೃತಿಯ ಪರಿಣಾಮ ರೂಪಗಳಾದುದರಿಂದ ಅವೆಲ್ಲವೂ ಸಮಾನಗಳೇ ! ಪ್ರಕೃತಿಯೇ ಆತ್ಮ ಕ್ಕಿಂತಲೂ ಬೇರೆನಿಸಿರುವಾಗ, ಅದರ ಪರಿಣಾಮರೂಪಗಳಾದ ದೇಹಾದಿ ಗಳು ಹೇಗೆತಾನೇ ಆತ್ಮವೆನಿಸುವುವು? ಉದ್ಯವಾ ! ಈ ಆತ್ಮಸ್ವರೂಪವಿವೇ ಚನೆಯಿಂದ ಸ್ವಾತ್ಮಾನುಭವದಲ್ಲಿ ತುಷ್ಟನಾದವನು, ಕಾಮುಕರೊಡನೆ ಸಂಗವನ್ನು ಬಿಟ್ಟುಬಿಡಬೇಕೆಂದು ಹೇಳಿದೆನಲ್ಲವೆ ? ” ನನ್ನ ಸ್ವರೂಪ ವನ್ನು ಸ್ಪುಟವಾಗಿ ಕಂಡುಕೊಂಡು, ಅದರಲ್ಲಿ ನಮ್ಮ ಮನಸ್ಸುಳ್ಳವರಿಗೆ ಇಂದ್ರಿಯಗಳು ಯಾವಾಗಲೂ ಎಚ್ಚರಗೊಂಡೇ ಇರುವುದರಿಂದ, ಅಂತವರಲ್ಲಿ ರಜಸ್ಸು ಮೊದಲಾದ ಗುಣಗಳೇನೂ ತಲೆದೋರಲಾರವು. ಅವರು ಇಂದ್ರಿಯಗಳನ್ನು ಯಥೇಚ್ಛವಾಗಿಬಿಟ್ಟರೂ ದೋಷವಿಲ್ಲ.ಏಕಂದರೆ, ಮೇಘಗಳು ಸೂರನಿಗೆ ಅಡ್ಡಲಾಗಿ ಬರುವುದರಿಂದ ಅವನಿಗೊಂದು ಹಾನಿಯಿಲ್ಲ ! ಅವು ಬಿಟ್ಟು ಹೋಗುವುದರಿಂದ ಅವನಿಗೆ ಗುಣವೂ ಇಲ್ಲ, ಅದರಂತೆಯೇ ಆತ್ಮನಿಷ್ಠನಾದವನಿಗೆ, ವಿಷಯಗಳು ಸನ್ನಿಹಿತವಾಗಿದ್ದರೂ